ಪಿಯರೆ ಸೈಮನ್ ಲ್ಯಾಪ್ಲೇಸ್
ಗಣಿತಜ್ಞ / From Wikipedia, the free encyclopedia
ಪಿಯರೆ ಸೈಮನ್ ಲ್ಯಾಪ್ಲೇಸ್ ರವರು ಪ್ರಭಾವಿತ ಫ್ರೆಂಚ್ ವಿದ್ವಾಂಸ. ಗಣಿತ, ಸಂಖ್ಯಾಶಾಸ್ತ್ರ , ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರಗಳಿಗೆ ಇವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ.ಲ್ಯಾಪ್ಲೇಸ್ ರವರು "ಲ್ಯಾಪ್ಲೇಸ್ ಸಮೀಕರಣವನ್ನು" [1] ರೂಪಿಸಿದರು ಹಾಗು "ಲ್ಯಾಪ್ಲೇಸ್ ಗಣಿತಶಾಸ್ತ್ರೀಯ ಭೌತವಿಜ್ಞಾನದ" ಅನೇಕ ಶಾಖೆಗಳನ್ನು ರೂಪಿಸುವುದರಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.[2] ಲ್ಯಾಪ್ಲೇಸ್ ಸಾರ್ವಕಾಲಿಕ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ. ಕೆಲವೊಮ್ಮೆ ಇವರನ್ನು, ಫ್ರಾನ್ಸ್ ನ "ಫ್ರೆಂಚ್ ನ್ಯೂಟನ್" ಅಥವಾ "ನ್ಯೂಟನ್" ಎಂದು ಕರೆಯಲಾಗುತ್ತದೆ. ಲ್ಯಾಪ್ಲೇಸ್ ೧೮೦೬ ರಲ್ಲಿ ಮೊದಲ ಫ್ರೆಂಚ್ ಸಾಮ್ರಾಜ್ಯದ ಪ್ರಜೆಯಾಗಿದ್ದರು ಮತ್ತು ಬೌರ್ಬನ್ ಜೀರ್ಣೋದ್ಧಾರ ನಂತರ ೧೮೧೭ ರಲ್ಲಿ ಇವರನ್ನು "ಮಾರ್ಕ್ವಿಸ್" ಎಂದು ಹೆಸರಿಸಲಾಯಿತು.