ಪರ್ವತಾರೋಹಣ
From Wikipedia, the free encyclopedia
ಪರ್ವತಾರೋಹಣ ಅಥವಾ ಪರ್ವತದ ಚಾರಣ ವು ಕ್ರೀಡೆ , ಹವ್ಯಾಸ ಅಥವಾ ಕಾಲ್ನಡುಗೆಯಿಂದ ಏರುವಿಕೆ, ನೀರ್ಗಲ್ಲ ಮೇಲೆ ಜಾರುವಿಕೆ ಮತ್ತು ಪರ್ವತ ಚಾರಣಗಳ ವೃತ್ತಿಯಾಗಿರುತ್ತದೆ. ಪರ್ವತಾರೋಹಣವು ಮೊದಲಿಗೆ ಅದುವರೆಗೆ ಏರಿರದ ಪರ್ವತಗಳ ಅತಿ ಎತ್ತರದ ಸ್ಥಳವನ್ನು ತಲುಪುವ ಪ್ರಯತ್ನಗಳಾಗಿ ಆರಂಭಗೊಂಡಿತ್ತಾದರೂ, ಪರ್ವತಕ್ಕೆ ಸಂಬಂಧಿಸಿದ ವಿವಿಧ ಮಗ್ಗಲುಗಳಲ್ಲಿ ವಿಶೇಷ ಅಧ್ಯಯನ ಕ್ಷೇತ್ರಗಳಾಗಿ ಪರಿಣಮಿಸಿರುವುದಲ್ಲದೇ, ಮೂರು ವಲಯಗಳನ್ನು ಹೊಂದಿದೆ : ಇದು ಒಳಗೊಂಡಿರುವ ಪಥವು ಬಂಡೆಗಳನ್ನು, ಹಿಮಪದರವನ್ನು ಅಥವಾ ನೀರ್ಗಲ್ಲುಗಳನ್ನು ಹೊಂದಿರುವುದೋ ಎಂಬುದರ ಮೇಲೆ ಅವುಗಳನ್ನು ಬಂಡೆ ಏರುವಿಕೆಯ-ಕೌಶಲ್ಯ, ಹಿಮಪದರ ಏರುವಿಕೆಯ ಕೌಶಲ್ಯ ಮತ್ತು ನೀರ್ಗಲ್ಲ ಮೇಲೆ ಜಾರುವಿಕೆ ಎಂದು ಪರಿಗಣಿಸಲಾಗುತ್ತದೆ. ಇವೆಲ್ಲಾ ವಿಧಗಳು ಅನುಭವ, ಹೆಚ್ಚಿನ ದೈಹಿಕ ಸಾಮರ್ಥ್ಯ ಹಾಗೂ ಸುರಕ್ಷತೆಯನ್ನು ನೋಡಿಕೊಳ್ಳಲು ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಬೇಡುತ್ತವೆ.[1] UIAA ಅಥವಾ ಯೂನಿಯನ್ ಇಂಟರ್ನ್ಯಾಷನಲೆ ಡೆಸ್ ಅಸೋಸಿಯೇಷನ್ಸ್ ಡಿ'ಅಲ್ಪಿನಿಸ್ಮೆ ಎಂಬ ಸಂಸ್ಥೆಯು ಪರ್ವತಾರೋಹಣ ಹಾಗೂ ಚಾರಣಗಳಿಗೆ ಸಂಬಂಧಿಸಿದಂತೆ ಅವಕಾಶ, ವೈದ್ಯಕೀಯ, ಪರ್ವತ ರಕ್ಷಣೆ, ಸುರಕ್ಷತೆ, ಯುವಸಮೂಹ ಹಾಗೂ ನೀರ್ಗಲ್ಲುಗಳ ಮೇಲೆ ಚಾರಣದಂತಹಾ ವಿಚಾರಗಳಲ್ಲಿ ನಿಯಂತ್ರಣ ಹೊಂದಿರುವ ವಿಶ್ವ ಮಟ್ಟದ ನಿಯಂತ್ರಣ ಸಂಸ್ಥೆಯಾಗಿದೆ.[2]