ನಿರ್ವಾತ ಬಟ್ಟೀಕರಣ
From Wikipedia, the free encyclopedia
ಸಂಯುಕ್ತವಸ್ತುಗಳನ್ನು ಅಧಿಕ ಶೂನ್ಯತೆ ಮತ್ತು ಕಡಿಮೆ ಉಷ್ಣತೆಯ ಮಟ್ಟದಲ್ಲಿ ಭಟ್ಟಿ ಇಳಿಸುವ ಕ್ರಮವನ್ನು ಅಣುಭಟ್ಟಿ ಇಳಿಸುವ ವಿಧಾನ ಎನ್ನುತ್ತಾರೆ. ಇದರ ಮತ್ತೊಂದು ಹೆಸರು ಅಣುಭಟ್ಟೀಕರಣ. ಇಂಗ್ಲಿಷ್ನಲ್ಲಿ ಇದನ್ನು ವ್ಯಾಕ್ಯೂಮ್ ಡಿಸ್ಟಿಲೇಷನ್ ಎನ್ನುತ್ತಾರೆ. ಹೀಗೆ ಮಾಡುವಾಗ ವಸ್ತುವಿನ ರಚನೆ ಮತ್ತು ಸ್ವರೂಪಕ್ಕೆ ಅಪಾಯ ಸಂಭವಿಸದಂತೆ ಎಚ್ಚರವಹಿಸಲಾಗುವುದು. ಈ ಪದ್ಧತಿಯಲ್ಲಿ ದ್ರವೀಕರಿಸುವ ಮೇಲ್ಮೈ ಬಟ್ಟಿ ಇಳಿಸಲಾಗುವ ದ್ರವಕ್ಕೆ (ಡಿಸ್ಟಿಲೆಂಡ್) ಸಾಧ್ಯವಾದ ಮಟ್ಟಿಗೆ ಸಮೀಪದಲ್ಲಿರುವಂತೆ ಮಾಡಲಾಗುವುದು. ಇದರಿಂದಾಗಿ ನಿರ್ಗಮಿಸುವ ಅಣುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಮತ್ತೆ ದ್ರವ ರೂಪಕ್ಕೆ ಹಿಂದಿರುಗುವುದಕ್ಕೆ ಬದಲಾಗಿ ಸಾಂದ್ರಕ (ಕಂಡೆನ್ಸರ್) ಮುಖಾಂತರ ಜಾಡಿಯನ್ನು ಪ್ರವೇಶಿಸುತ್ತವೆ. [1]