ನಿಕೋಲಾ ಟೆಸ್ಲಾ
From Wikipedia, the free encyclopedia
ನಿಕೋಲಾ ಟೆಸ್ಲಾ ರವರು (Serbian: Никола Тесла; ೧೦ ಜುಲೈ ೧೮೫೬ – ೭ ಜನವರಿ ೧೯೪೩) ಓರ್ವ ಆವಿಷ್ಕಾರಕ, ಯಾಂತ್ರಿಕ ಅಭಿಯಂತರ ಮತ್ತು ವಿದ್ಯುತ್ ಅಭಿಯಂತರರಾಗಿದ್ದರು. ೧೯ನೇ ಶತಮಾನದ ಕೊನೆಗೆ ಹಾಗೂ ೨೦ನೇ ಶತಮಾನದ ಆದಿಯ ಅವಧಿಯಲ್ಲಿ ಆದ ವಿದ್ಯುತ್ಕಾಂತತೆ ಕ್ಷೇತ್ರದ ಅನೇಕ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣಕರ್ತರಾಗಿರುವುದಕ್ಕೆ ಅವರು ಪ್ರಸಿದ್ಧರಾಗಿರುವರಲ್ಲದೇ, ವಾಣಿಜ್ಯ ವಿದ್ಯುಚ್ಛಕ್ತಿಯ ಜನನಕ್ಕೆ ಪ್ರಮುಖ ಕೊಡುಗೆದಾತರಾಗಿದ್ದಾರೆ. ವಿದ್ಯುತ್ತಿನ ವಿತರಣೆಯ ಬಹುಫೇಸ್ ವ್ಯವಸ್ಥೆ ಮತ್ತು AC ಮೋಟಾರ್ಗಳದ್ದೂ ಸೇರಿದಂತೆ ಆಧುನಿಕ ಪರ್ಯಾಯ ವಿದ್ಯುತ್ಪ್ರವಾಹ (AC) ಆಧಾರಿತ ವಿದ್ಯುಚ್ಛಕ್ತಿ ವ್ಯವಸ್ಥೆಗಳಿಗೆ ಟೆಸ್ಲಾ'ರ ಹಕ್ಕುಸ್ವಾಮ್ಯಗಳು ಮತ್ತು ಸೈದ್ಧಾಂತಿಕ ಸಾಧನೆಗಳು ಆಧಾರವಾಗಿದೆ. ಈ ಸಾಧನೆಗಳು ಎರಡನೇ ಕೈಗಾರಿಕಾ ಕ್ರಾಂತಿಯ ಶುಭಾರಂಭವನ್ನು ಸಾರುವಲ್ಲಿ ಸಹಾಯ ಮಾಡಿದವು.
Nikola Tesla | |
---|---|
ಜನನ | (೧೮೫೬-೦೭-೧೦)೧೦ ಜುಲೈ ೧೮೫೬ Smiljan, Austrian Empirea (Croatian Military Frontier) |
ಮರಣ | 7 January 1943(1943-01-07) (aged 86) New York City, New York, USA |
ವಾಸಸ್ಥಳ | Austria-Hungarya ಫ್ರಾನ್ಸ್ United States of America |
ಪೌರತ್ವ | Austro-Hungariana (೧೮೫೬-೧೮೯೧) American (೧೮೯೧-೧೯೪೩) |
ರಾಷ್ಟ್ರೀಯತೆ | Yugoslav American |
ಕಾರ್ಯಕ್ಷೇತ್ರ | Mechanical and electrical engineering |
ಸಂಸ್ಥೆಗಳು | Edison Machine Works Tesla Electric Light & Manufacturing Westinghouse Electric & Manufacturing Co. |
ಪ್ರಸಿದ್ಧಿಗೆ ಕಾರಣ |
|
ಪ್ರಭಾವಗಳು | Ernst Mach |
ಪ್ರಭಾವಿತರು | Gano Dunn |
ಗಮನಾರ್ಹ ಪ್ರಶಸ್ತಿಗಳು | Edison Medal (೧೯೧೬) Elliott Cresson Medal (೧೮೯೩) John Scott Medal (೧೯೩೪) |
ಹಸ್ತಾಕ್ಷರ | |
ಟಿಪ್ಪಣಿಗಳು a Austrian Empire (೧೮೦೪–೧೮೬೭) reorganized and renamed into the Austro-Hungarian Monarchy (೧೮೬೭-೧೯೧೮) in ೧೮೬೭. |
ಆಸ್ಟ್ರಿಯನ್ ಸಾಮ್ರಾಜ್ಯದಲ್ಲಿನ (ಇಂದಿನ ಕ್ರೊಯೇಷಿಯಾ) ಕ್ರೊಯೇಷಿಯಾದ ಸೇನಾ ಗಡಿನಾಡಿನ ಪ್ರದೇಶದಲ್ಲಿರುವ ಸ್ಮಿಲ್ಜನ್ ಹಳ್ಳಿಯ ಜನಾಂಗೀಯ/ಕ್ರೈಸ್ತೇತರ/ಯಹೂದ್ಯೇತರ ಸರ್ಬಿಯಾದ ವ್ಯಕ್ತಿಯಾಗಿದ್ದ ಟೆಸ್ಲಾರವರು ಜನ್ಮಸ್ಥಳಕಾರಣವಾಗಿ ಆಸ್ಟ್ರಿಯನ್ ಸಾಮ್ರಾಜ್ಯದ ಪ್ರಜೆಯಾಗಿದ್ದು ನಂತರ ಓರ್ವ ಅಮೇರಿಕನ್ ಪ್ರಜೆಯಾದರು.[1] ರೇಡಿಯೋ ತರಂಗಗಳ ಮೂಲಕ ನಿಸ್ತಂತು ಸಂಪರ್ಕ/ಸಂವಹನ ಸಾಧಿಸಬಹುದೆಂಬ ಬಗ್ಗೆ ೧೮೯೪ರಲ್ಲಿ ಅವರು ನೀಡಿದ ಪ್ರದರ್ಶನದಿಂದಾಗಿ ಹಾಗೂ "ವಾರ್ ಆಫ್ ಕರೆಂಟ್ಸ್/ವಿದ್ಯುತ್ಪ್ರವಾಹಗಳ ಯುದ್ಧ"ದಲ್ಲಿ ಅಂತಿಮವಾಗಿ ಗಳಿಸಿದ ವಿಜಯದಿಂದಾಗಿ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೇಷ್ಠ ವಿದ್ಯುತ್ ಅಭಿಯಂತರರುಗಳಲ್ಲಿ ಒಬ್ಬರಾಗಿ ಅವರನ್ನು ವ್ಯಾಪಕವಾಗಿ ಗೌರವಿಸಲಾಗಿದೆ.[2] ಆಧುನಿಕ ವಿದ್ಯುತ್ ಶಿಲ್ಪಶಾಸ್ತ್ರದ ಪ್ರವರ್ತಕರಾಗಿದ್ದ ಅವರ ಅನೇಕ ಆವಿಷ್ಕಾರಗಳು ಅಭೂತಪೂರ್ವ ಮಹತ್ವದ್ದಾಗಿದ್ದವು. ಯುನೈಟೆಡ್ ಸ್ಟೇಟ್ಸ್ನಲ್ಲಿನ ಟೆಸ್ಲಾ'ರ ಪ್ರಸಿದ್ಧಿಯು ಇದೇ ಅವಧಿಯಲ್ಲಿ ಜನಪ್ರಿಯ ಸಂಸ್ಕೃತಿಯಲ್ಲಿನ[3] ಅಥವಾ ಇತಿಹಾಸದಲ್ಲಿನ ಇತರ ಯಾವುದೇ ಆವಿಷ್ಕಾರಕ ಅಥವಾ ವಿಜ್ಞಾನಿಯನ್ನು ಮೀರಿಸಿತ್ತು. ದುರಾದೃಷ್ಟವಶಾತ್ ಅವರ ವಿಲಕ್ಷಣವಾದ ವ್ಯಕ್ತಿತ್ವದಿಂದಾಗಿ ಹಾಗೂ ನಂಬಲನರ್ಹವೆಂದೆನಿಸುತ್ತಿದ್ದ ಹಾಗೂ ಸಾಧ್ಯವಾಗಬಹುದಾದ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚಿತ್ರವಿಚಿತ್ರ ಪ್ರತಿಪಾದನೆಗಳಿಂದಾಗಿ, ಅಂತಿಮವಾಗಿ ಜೀವನದ ನಂತರದ ಅವಧಿಯಲ್ಲಿ ಟೆಸ್ಲಾರನ್ನು ಬಹಿಷ್ಕರಿಸಲಾಯಿತಲ್ಲದೇ ಕೆಲವರು ಅವರನ್ನು ಹುಚ್ಚ ವಿಜ್ಞಾನಿಯೆಂದು ಭಾವಿಸಿದ್ದರು.[4][5] ತಮ್ಮ ಆರ್ಥಿಕ ಪರಿಸ್ಥಿತಿಯ ಕಡೆಗೆ ಎಂದೂ ಗಮನ ಹರಿಸದ ಕಾರಣ ಟೆಸ್ಲಾರು ದಾರಿದ್ರ್ಯಾವಸ್ಥೆಗೊಳಗಾಗಿ ತಮ್ಮ ೮೬ನೆಯ ವಯಸ್ಸಿನಲ್ಲಿ ನ್ಯೂಯಾರ್ಕ್ ಮಹಾನಗರದಲ್ಲಿ ತಾವು ವಾಸಿಸುತ್ತಿದ್ದ ಹೋಟೆಲ್ ಕೋಣೆಯಲ್ಲಿ ಏಕಾಂಗಿಯಾಗಿ ಸಾವು ಕಂಡರು.[6]
ಅಯಸ್ಕಾಂತೀಯ ಕ್ಷೇತ್ರ B ಯನ್ನು ಅಳೆಯುವ (ಅಯಸ್ಕಾಂತೀಯ ಹರಿವಿನ ಸಾಂದ್ರತೆ ಹಾಗೂ ಅಯಸ್ಕಾಂತೀಯ ಚೋದನೆ ಎಂದೂ ಕರೆಯಲ್ಪಡುವ) ಇಂಟರ್ನ್ಯಾಷನಲ್ ಸಿಸ್ಟಮ್ ಆಫ್ ಯೂನಿಟ್ಸ್/ಅಂತರರಾಷ್ಟ್ರೀಯ ಮಾನಕ ವ್ಯವಸ್ಥೆಯ ಏಕಮಾನ ಅಳತೆ ಟೆಸ್ಲಾ ಗೆ ಗೌರವಪೂರ್ವಕವಾಗಿ ಅವರ ಹೆಸರನ್ನಿಡಲಾಗಿದೆಯಲ್ಲದೇ (೧೯೬೦ರಲ್ಲಿ ಪ್ಯಾರಿಸ್ನಲ್ಲಿ ನಡೆದ ಕಾನ್ಫರೆನ್ಸ್ ಗನರಲೇ ಡೆಸ್ ಪಾಯ್ಡ್ಸ್ ಎಟ್ ಮೆಷ್ಯೂರೆಸ್ ಸಮ್ಮೇಳನದಲ್ಲಿ), ನಿಸ್ತಂತು ಚಾಲಿತ ವಿದ್ಯುನ್ಮಾನ ಸಾಧನಗಳಿಗೆ ನಿಸ್ತಂತು ಚೈತನ್ಯ ವರ್ಗಾವಣೆಯ ಟೆಸ್ಲಾ ಪರಿಣಾಮ ಕ್ಕೆ ಕೂಡಾ ಅವರ ಹೆಸರಿಡಲಾಗಿದೆ (೧೮೯೩ರಷ್ಟು ಮುಂಚಿತವಾಗಿಯೇ ತಮ್ಮ ಅಪೂರ್ಣ ವಾರ್ಡನ್ಕ್ಲಿಫ್ಫೆ ಗೋಪುರ/ಟವರ್ ಯೋಜನೆಯಲ್ಲಿ ಕೈಗಾರಿಕಾ ವಿದ್ಯುತ್ಪ್ರವಾಹದ ಅಂತರಖಂಡೀಯ ಪ್ರಸರಣ/ಸಂವಹನಗಳಲ್ಲಿನ ಬಳಕೆಗಾಗೆಂದು ಉದ್ದೇಶಿಸಿ ಸಣ್ಣ ಪ್ರಮಾಣದಲ್ಲಿ ತಾಪಜ್ವಲನ ವಿದ್ಯುದ್ದೀಪಗಳೊಂದಿಗೆ ಟೆಸ್ಲಾ ನಿದರ್ಶನಾತ್ಮಕವಾಗಿ ಪ್ರಮಾಣೀಕರಿಸಿದ್ದರು).
ಟೆಸ್ಲಾರವರು ರೋಬೋಟಿಕ್ಸ್/ರೋಬೋಟ್ ಶಾಸ್ತ್ರ, ರಿಮೋಟ್ ಕಂಟ್ರೋಲ್ ಉಪಕರಣ, ರಾಡಾರ್/ಸರ್ವದರ್ಶಿನಿ ಮತ್ತು ಗಣಕ ವಿಜ್ಞಾನ ಕ್ಷೇತ್ರಗಳ ಸ್ಥಾಪನೆಗೆ ಹಾಗೂ ಕ್ಷಿಪಣಿಶಾಸ್ತ್ರ/ವಿಜ್ಞಾನ, ಪರಮಾಣು ಭೌತಶಾಸ್ತ್ರ[7] ಮತ್ತು ಸೈದ್ಧಾಂತಿಕ ಭೌತಶಾಸ್ತ್ರಗಳ ವಿಸ್ತರಣೆಗಾಗಿ ವಿವಿಧ ಮಟ್ಟಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ವಿದ್ಯುತ್ಕಾಂತತೆ ಮತ್ತು ವಿದ್ಯುತ್ಯಂತ್ರ ಶಿಲ್ಪಶಾಸ್ತ್ರಗಳ ಮೇಲಿನ ತಮ್ಮ ಅಧ್ಯಯನಗಳ ಜೊತೆಗೆ ಸಲ್ಲಿಸಿದ್ದಾರೆ.