ನಾಗರೀಕತೆ
From Wikipedia, the free encyclopedia
ಒಂದು ವ್ಯವಸ್ಥಿತ ಹಂತವನ್ನು ತಲುಪಿದ ಮಾನವನ ಸಮಾಜ ಅಥವಾ ಸಂಸ್ಕೃತಿಯನ್ನು ನಾಗರೀಕತೆ ಎಂದು ಬಣ್ಣಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ನಾಗರೀಕತೆಗಳೂ ಬೇಸಾಯವನ್ನು ಮಾಡುವಂತಹವಾಗಿ, ಜನರಲ್ಲಿ ಕಸುಬುಗಳ ವರ್ಗೀಕರಣವಿದ್ದು, ನಗರಗಳನ್ನು ಸ್ಥಾಪಿಸುವಷ್ಟು ಜನಸಂಖ್ಯೆಯನ್ನು ಹೊಂದಿರುತ್ತವೆ.ನಗರಾಭಿವೃದ್ಧಿ, ಸಾಮಾಜಿಕ ಶ್ರೇಣೀಕರಣದ, ಸಾಂಕೇತಿಕ ಸಂವಹನ ,ಇವುಗಳು ನಾಗರೀಕತೆಯ ಗುಣಲಕ್ಷಣಗಳು .ನಾಗರಿಕತೆಯನ್ನು ಜನರಿರುವ ವಸಾಹತುಗಳ ವ್ಯವಸ್ಥೆಯಾಗಿ ವಿಂಗಡಿಸಬಹುದು.ನಾಗರೀಕತೆಯಿಂದ ಬರಿಯೆ ಸ್ಥಳದ ವ್ಯವಸ್ಥೆ ಬದಲಾಗದು, ಸ್ಥಳದ ವ್ಯವಸ್ಥೆ ಬದಲಾವಣೆಯೊಂದಿಗೆ ಆಯಾ ನೆಲದಲ್ಲಿ ವಾಸಿಸುತ್ತಿರುವ ಜನರ ಮನಸ್ಥಿತಿ ಸಹ ಬದಲಾಗುತ್ತದೆ.ನಾಗರೀಕತೆ'ಯೊಂದಿಗೆ ಜನರ ತಿಳುವಳಿಕೆ ಹೆಚ್ಚಾಗುತ್ತದೆ.