ನಯಾಗರ ಜಲಪಾತ
ಮೂರು ಜಲಪಾತಗಳು ಕೆನಡಾ ಮತ್ತು ಯೂನಿಯನ್ ರಾಜ್ಯಗಳ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ದಾಟುತ್ತವೆ / From Wikipedia, the free encyclopedia
ನಯಾಗರ ಫಾಲ್ಸ್, [1](Niagara Falls) (/naɪˈæɡrə/) ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ಸಣ್ಣ ನಯಾಗರ ನದಿ, ಈ ಅದ್ಭುತ ಜಲಪಾತ ಸೃಷ್ಟಿಸಿದೆ. ನಯಾಗರ ಮೂರು ಜಲಪಾತಗಳನ್ನು ಹೊಂದಿದೆ.
- ಅಮೇರಿಕನ್ ಜಲಪಾತ, (ಚಿಕ್ಕದು)
- ಬ್ರೈಡಲ್ ಜಲಪಾತ, (ಅತಿ ಚಿಕ್ಕದು)
- ಕೆನಡಿಯನ್, ಅಥವಾ ಕುದುರೆ ಲಾಳಿಯನ್ನು ಹೋಲುವ ಜಲಪಾತ.(ಗಾತ್ರದಲ್ಲಿ ದೊಡ್ಡದು)
Quick Facts ನಯಾಗರಾ ಜಲಪಾತ, ಸ್ಥಳ ...
ನಯಾಗರಾ ಜಲಪಾತ | |
---|---|
ಸ್ಥಳ | Border of ಆಂಟೇರಿಯೋ, ಕೆನಡಾ, & ನ್ಯೂಯಾರ್ಕ್, ಅಮೆರಿಕ ಸಂಯುಕ್ತ ಸಂಸ್ಥಾನ |
ನಿರ್ದೇಶಾಂಕಗಳ | 43.0799°N 79.0747°W / 43.0799; -79.0747 (Niagara Falls) |
ಬಗೆ | Cataract |
ಒಟ್ಟು ಉದ್ದ | 167 ft (51 m) |
ಒಟ್ಟು ಪ್ರಪಾತಗಳು | 3 |
ಸೇರುವ ನದಿ | ನಯಾಗರ ನದಿ |
ಸರಾಸರಿ ಹರಿಯುವ ವೇಗ | 85,000 cu ft/s (2,400 m3/s) |
Close
ಅಂತಾರಾಷ್ಟ್ರೀಯ ಸೀಮಾರೇಖೆಯನ್ನುಮೊದಲು 'ಹಾರ್ಸ್ ಶೂ ಫಾಲ್ಸ್' ಕಡೆಯಿಂದ ೧೮೧೯ ರಲ್ಲಿ ಎಳೆದು ನಿರ್ಧಾರಮಾಡಿದ ಜಾಗವನ್ನು ಎರಡೂ ಕಡೆಯವರು ಒಪ್ಪಿಕೊಳ್ಳುತ್ತಿಲ್ಲ. ಸ್ವಾಭಾವಿಕ ಭೂಕುಸಿತ ಮತ್ತು ನೀರಿನ ಕೊರೆತಗಳಿಂದ ಕೊಚ್ಚಿಹೋದ ಭೂಮಿಯ ಬಗ್ಗೆ ಮತ್ತು ಕಟ್ಟಡನಿರ್ಮಾಣದಿಂದ ಆಗಿರುವ ಆಕ್ರಮಣಗಳಿಂದ ಅಲ್ಲಿನ ಜನಕ್ಕೆ ಸಮಾಧಾನ ಸಿಕ್ಕದೆ, ಆ ಜಾಗ ವಿವಾದದಲ್ಲಿದೆ.