ತಂಬಾಕು ಸೇವನೆ(ಧೂಮಪಾನ)
From Wikipedia, the free encyclopedia
ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC.[1] ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮುಂದೆ ಉಪಭೋಗದ ಅಥವಾ ಸಾಮಾಜಿಕ ಸಾಧನವಾಗಿ ಬಳಕೆಯಾಗತೊಡಗಿತು.[2] ಪ್ರಾಚೀನ ವಿಶ್ವದಲ್ಲಿ ತಂಬಾಕನ್ನು 1500ರ ಅಂತ್ಯಭಾಗದ ವೇಳೆಗೆ ಪರಿಚಯಿಸಲಾಯಿತು ಮತ್ತು ಇದು ವ್ಯಾಪಾರ ಮಾರ್ಗಗಳ ಮುಖಾಂತರ ಬೇರೆ ಸ್ಥಳಗಳನ್ನು ತಲುಪತೊಡಗಿತು. ಈ ವಸ್ತುವು ಆಗಾಗ್ಗೆ ಟೀಕೆಗೆ ಒಳಗಾದರೂ ಕೂಡ ಅದರ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು.[3] ಜರ್ಮನ್ ವಿಜ್ಞಾನಿಗಳು 1920ರ ದಶಕದ ಅಂತ್ಯಭಾಗದಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವಿನ ಸಂಬಂಧವನ್ನು ಪತ್ತೆಹಚ್ಚಿದ್ದರಿಂದ ಆಧುನಿಕ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಧೂಮಪಾನ-ವಿರೋಧೀ ಚಳುವಳಿ ಆರಂಭವಾಯಿತು. ಆದರೆ, ಈ ಚಳುವಳಿಯು ಎರಡನೇ ವಿಶ್ವಯುದ್ಧದ ಸಮಯದಲ್ಲಿ ವಿರೋಧಪಕ್ಷಗಳನ್ನು ತಲುಪದೇ ಹೋದ ಕಾರಣದಿಂದಾಗಿ ದುರ್ಬಲಗೊಂಡು ಬಹುಬೇಗನೆ ಜನಪ್ರಿಯತೆ ಕಳೆದುಕೊಂಡಿತು.[4] 1950ರಲ್ಲಿ ಮತ್ತೆ ಆರೋಗ್ಯ ಪರಿಣತರು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವೆ ಸಂಬಂಧವಿದೆಯೆಂದು ಸೂಚಿಸತೊಡಗಿದರು.[5] 1980ರ ದಶಕದಲ್ಲಿ ದೊರಕಿದ ವೈಜ್ಞಾನಿಕ ಸುಳಿವಿನಿಂದ ಈ ರೂಢಿಯ ವಿರುದ್ಧ ರಾಜಕೀಯ ಕ್ರಮಗಳನ್ನು ಕೈಗೊಳ್ಳುವಂತಾಯಿತು. 1965ರ ನಂತರ ತಂಬಾಕು ಸೇವನೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಏರಿಕೆಯಾಗಿವೆ ಇಲ್ಲವೇ ಇಳಿಕೆಯಾಗಿವೆ.[6] ಆದರೆ ಅಭಿವೃದ್ಧಿಶೀಲ ಪ್ರಪಂಚದಲ್ಲಿ ಈ ಸಂಖ್ಯೆಯು ಏರಿಕೆಯಾಗುತ್ತಲೆ ಇದೆ.[7] ಧೂಮಪಾನವು ತಂಬಾಕನ್ನು ಸೇವಿಸುವ ಅತ್ಯಂತ ಪ್ರಚಲಿತ ವಿಧಾನವಾಗಿದೆ ಮತ್ತು ಧೂಮಪಾನದ ಮೂಲಕ ಸೇವಿಸಲ್ಪಡುವ ಪದಾರ್ಥಗಳಲ್ಲಿ ತಂಬಾಕು ಅತ್ಯಂತ ಪ್ರಚಲಿತ ಪದಾರ್ಥವಾಗಿದೆ. ಈ ಕೃಷಿ ಉತ್ಪನ್ನವನ್ನು ಸಾಧಾರಣವಾಗಿ ಇತರ ಪದಾರ್ಥಗಳೊಂದಿಗೆ ಮಿಶ್ರ ಮಾಡಿ[8] ನಂತರ ಅದನ್ನು ಪೈರೋಲೈಜ್ (ಅಗ್ನಿಯ ಸಂಪರ್ಕ ನೀಡುವುದು) ಮಾಡಲಾಗುವುದು. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ.[9] ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ,[10] ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ.[11] ಡೋಪಾಮೈನ್ ಮತ್ತು ಇದಾದ ನಂತರ ಎಂಡಾರ್ಫಿನ್ಗಳು ಬಿಡುಗಡೆಯಾಗುತ್ತವೆ ಮತ್ತು ಇವನ್ನು ಹೆಚ್ಚಾಗಿ ಸುಮ್ಮಾನವನ್ನುಂಟುಮಾಡುವ ಪದಾರ್ಥಗಳೆಂದು ಹೇಳಲಾಗುತ್ತದೆ.[12] 2000ದ ಅಂಕಿ ಅಂಶಗಳ ಪ್ರಕಾರ ಸುಮಾರು 1.22 ಬಿಲಿಯನ್ ಜನರು ಧೂಮಪಾನದ ರೂಢಿಯನ್ನಿಟ್ಟುಕೊಂಡಿದ್ದರು. ಹೆಂಗಸರಿಗಿಂತ ಗಂಡಸರು ಧೂಮಪಾನ ಮಾಡುವ ಸಾಧ್ಯತೆಗಳು ಜಾಸ್ತಿ,[13] ಆದರೂ ವಯಸ್ಸು ಕಡಿಮೆಯಾದಂತೆಯೇ ಈ ಅಂತರವು ಸಹ ಕಡಿಮೆಯಾಗುತ್ತದೆ.[14][15] ಧೂಮಪಾನ ಮಾಡುವ ಸಾಧ್ಯತೆಗಳು ಶ್ರೀಮಂತವರ್ಗಕ್ಕಿಂತ ಬಡವರ್ಗದಲ್ಲಿ ಹೆಚ್ಚು, ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಅಭಿವೃದ್ಧಿಶೀಲ ದೇಶಗಳ ಜನರು ಹೆಚ್ಚು ಧೂಮಪಾನ ಮಾಡುತ್ತಾರೆ.[7] ಹೆಚ್ಚಿನ ಧೂಮಪಾನಿಗಳು ಹದಿಹರೆಯ ಅಥವಾ ತರುಣಾವಸ್ಥೆಯಲ್ಲಿ ಆರಂಭ ಮಾಡುತ್ತಾರೆ. ಸಾಧಾರಣವಾಗಿ ಮೊದಮೊದಲ ಹಂತಗಳಲ್ಲಿ ಧೂಮಪಾನದಿಂದ ಆಹ್ಲಾದದ ಭಾವನೆಗಳು ಉಂಟಾಗಿ ಧನಾತ್ಮಕ ಮರುಪಯೋಗಕ್ಕೆ ಕಾರಣವಾಗುತ್ತವೆ. ಕೆಲವು ವ್ಯಕ್ತಿಗಳು ಹಲವು ವರ್ಷಗಳ ಕಾಲ ಧೂಮಪಾನ ಮಾಡುತ್ತ ಹೋದಹಾಗೇ ಉಪಸಂಹರಣದ ಲಕ್ಷಣಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಋಣಾತ್ಮಕ ಮರುಪಯೋಗಗಳು ಮುಖ್ಯವಾದ ಪ್ರೇರಕಗಳಾಗುತ್ತವೆ