ತಂತ್ರಾಂಶ ಪರೀಕ್ಷೆ
From Wikipedia, the free encyclopedia
ತಂತ್ರಾಂಶ ಪರೀಕ್ಷೆ ಎಂಬುದು ಒಂದು ಕ್ರಮಬದ್ಧವಾದ ಪರೀಕ್ಷೆಯಾಗಿದ್ದು, ಪರೀಕ್ಷೆಗೆ ಒಳಪಟ್ಟಿರುವ ಉತ್ಪನ್ನ ಅಥವಾ ಸೇವೆಯ ಗುಣಮಟ್ಟದ ಕುರಿತಾದ ಮಾಹಿತಿಯನ್ನು ಮಧ್ಯಸ್ಥಗಾರರಿಗೆ ಒದಗಿಸಲು ಇದನ್ನು ನಡೆಸಲಾಗುತ್ತದೆ.[1] ವ್ಯವಹಾರದ ಅಸ್ತಿತ್ವವು ತಂತ್ರಾಂಶದ ಅನುಷ್ಠಾನದ ಅಪಾಯಗಳನ್ನು ಗ್ರಹಿಸುವುದಕ್ಕೆ ಮತ್ತು ಅರ್ಥಮಾಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ, ತಂತ್ರಾಂಶದ ಒಂದು ವಸ್ತುನಿಷ್ಠ, ಸ್ವತಂತ್ರ ನೋಟವನ್ನೂ ಸಹ ತಂತ್ರಾಂಶ ಪರೀಕ್ಷೆಯು ಒದಗಿಸುತ್ತದೆ. ತಂತ್ರಾಂಶದ ದೋಷಗಳನ್ನು ಕಂಡುಹಿಡಿಯುವ ಆಶಯದೊಂದಿಗಿನ ಒಂದು ಕಾರ್ಯಸೂಚಿ ಅಥವಾ ಅನ್ವಯಿಕೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯು ಸದರಿ ಪರೀಕ್ಷಾ ಕೌಶಲಗಳಲ್ಲಿ ಸೇರಿಕೊಂಡಿದೆಯಾದರೂ, ಕೌಶಲಗಳು ಅಷ್ಟಕ್ಕೇ ಸೀಮಿತಗೊಂಡಿಲ್ಲ.
ಒಂದು ತಂತ್ರಾಂಶ ಕಾರ್ಯಸೂಚಿ/ಅನ್ವಯಿಕೆ/ಉತ್ಪನ್ನವು ಈ ಕೆಳಕಂಡ ಚಟುವಟಿಕೆಗಳನ್ನು ಕೈಗೊಳ್ಳಬಲ್ಲದು ಎಂಬ ಅಂಶವನ್ನು ಆಧಾರವಾಗಿರಿಸಿಕೊಂಡು, ಕ್ರಮಬದ್ಧಗೊಳಿಸುವುದರ ಮತ್ತು ಪರಿಶೀಲಿಸುವುದರ ಪ್ರಕ್ರಿಯೆಯಾಗಿಯೂ ತಂತ್ರಾಂಶ ಪರೀಕ್ಷೆಯನ್ನು ವ್ಯಾಖ್ಯಾನಿಸಬಹುದು:
- ಅದು ತನ್ನ ವಿನ್ಯಾಸ ಮತ್ತು ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದ ವ್ಯಾವಹಾರಿಕ ಮತ್ತು ತಾಂತ್ರಿಕ ಅವಶ್ಯಕತೆಗಳನ್ನು ಈಡೇರಿಸುತ್ತದೆ;
- ನಿರೀಕ್ಷಿಸಲ್ಪಟ್ಟಂತೆ ಕಾರ್ಯನಿರ್ವಹಿಸುತ್ತದೆ; ಮತ್ತು
- ಅದೇ ಗುಣ ಲಕ್ಷಣಗಳೊಂದಿಗೆ ಅದನ್ನು ಅನುಷ್ಠಾನಗೊಳಿಸಬಹುದು.
ಅಳವಡಿಸಿಕೊಳ್ಳಲ್ಪಟ್ಟ ಪರೀಕ್ಷಾ ವಿಧಾನವನ್ನು ಅವಲಂಬಿಸಿ, ಅಭಿವೃದ್ಧಿ ಪ್ರಕ್ರಿಯೆಯಲ್ಲಿನ ಯಾವುದೇ ಸಮಯದಲ್ಲಿ ತಂತ್ರಾಂಶ ಪರೀಕ್ಷೆಯನ್ನು ಅನುಷ್ಠಾನಗೊಳಿಸಬಹುದು. ಆದಾಗ್ಯೂ, ಅವಶ್ಯಕತೆಗಳು ವಿಶದೀಕರಿಸಲ್ಪಟ್ಟ ನಂತರ ಮತ್ತು ಸಂಕೇತಿಸುವ ಪ್ರಕ್ರಿಯೆಯು ಸಂಪೂರ್ಣಗೊಳಿಸಲ್ಪಟ್ಟ ನಂತರ ಬಹುಪಾಲು ಪರೀಕ್ಷಾ ಪ್ರಯತ್ನವು ನಡೆಯುತ್ತದೆ. ಹಾಗೆನ್ನಬಹುದಾದ ಪರೀಕ್ಷೆಯ ವಿಧಾನಶಾಸ್ತ್ರವು, ಅಳವಡಿಸಿಕೊಂಡ ತಂತ್ರಾಂಶ ಅಭಿವೃದ್ಧಿಯ ವಿಧಾನಶಾಸ್ತ್ರದಿಂದ ನೆರವೇರಿಸಲ್ಪಡುತ್ತದೆ.
ವಿಭಿನ್ನ ತಂತ್ರಾಂಶ ಅಭಿವೃದ್ಧಿ ಮಾದರಿಗಳು ಅಭಿವೃದ್ಧಿ ಪ್ರಕ್ರಿಯೆಯಲ್ಲಿನ ವಿಭಿನ್ನ ಘಟ್ಟಗಳೆಡೆಗೆ ಪರೀಕ್ಷಾ ಪ್ರಯತ್ನವನ್ನು ಕೇಂದ್ರೀಕರಿಸುತ್ತವೆ. ಅಗೈಲ್ನಂಥ ಹೊಸದಾದ ಅಭಿವೃದ್ಧಿ ಮಾದರಿಗಳು ಅನೇಕವೇಳೆ ಪರೀಕ್ಷಾ ಪ್ರೇರಿತ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳುತ್ತವೆ ಮತ್ತು ಪರೀಕ್ಷೆಯ ಒಂದು ವರ್ಧಿಸಲ್ಪಟ್ಟ ಅಥವಾ ಅಭಿವೃದ್ಧಿಪಡಿಸಲ್ಪಟ್ಟ ಭಾಗವು ಪರೀಕ್ಷಕರ ಒಂದು ಔಪಚಾರಿಕ ತಂಡಕ್ಕೆ ತಲುಪುವುದಕ್ಕೆ ಮುಂಚಿತವಾಗಿ, ಅದನ್ನು ಅಭಿವರ್ಧಕರ ಅಧೀನದಲ್ಲಿ ಇರಿಸುತ್ತದೆ. ಹೆಚ್ಚು ಸಾಂಪ್ರದಾಯಿಕವಾಗಿರುವ ಮಾದರಿಯೊಂದರಲ್ಲಿ, ಪರೀಕ್ಷಾ ನೆರವೇರಿಕೆಯ ಬಹುಭಾಗವು ಅವಶ್ಯಕತೆಗಳು ವಿಶದೀಕರಿಸಲ್ಪಟ್ಟ ನಂತರ ಹಾಗೂ ಸಂಕೇತಿಸುವ ಪ್ರಕ್ರಿಯೆಯು ಸಂಪೂರ್ಣಗೊಳಿಸಲ್ಪಟ್ಟ ನಂತರ ಸಂಭವಿಸುತ್ತದೆ.