ಡೆಬಿಟ್ ಕಾರ್ಡ್
From Wikipedia, the free encyclopedia
Expression error: Unexpected < operator.
ಡೆಬಿಟ್ ಕಾರ್ಡ್ (ಬ್ಯಾಂಕ್ ಕಾರ್ಡ್ ಅಥವಾ ತಪಾಸಣಾ ಕಾರ್ಡ್ ಎಂದೂ ಕರೆಯಲಾಗುವುದು)ಒಂದು ಪ್ಲಾಸ್ಟಿಕ್ ಕಾರ್ಡ್ ಆಗಿದ್ದು, ನಾವು ಖರೀದಿಗಳನ್ನು ಮಾಡಿದಾಗ ನಗದಿಗೆ ಪೂರಕ ಸಂದಾಯ ವಿಧಾನವನ್ನು ಒದಗಿಸುತ್ತದೆ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಯಿಂದ ಅಥವಾ ಕಾರ್ಡಿನಲ್ಲಿ ಬಾಕಿ ಉಳಿದಿರುವುದರಿಂದ ಪಡೆದುಕೊಳ್ಳುವುದರಿಂದ ಕಾರ್ಯಾತ್ಮಕವಾಗಿ, ಇದನ್ನು ಎಲೆಕ್ಟ್ರಾನಿಕ್ ಚೆಕ್ ಎಂದು ಕರೆಯಬಹುದು. ಕೆಲವೊಂದು ಪ್ರಕರಣಗಳಲ್ಲಿ, ಅಂತರ್ಜಾಲದ ಬಳಕೆಗಾಗಿ ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿರುತ್ತದೆ, ಆದ್ದರಿಂದ ಅಲ್ಲಿ ಬೌತಿಕ ಕಾರ್ಡು ಇರುವುದಿಲ್ಲ.[1][2]
ಅನೇಕ ದೇಶಗಳಲ್ಲಿ ಡೆಬಿಟ್ ಕಾರ್ಡುಗಳ ಬಳಕೆ ವ್ಯಾಪಕವಾಗಿದೆ ಹಾಗೂ ಚೆಕ್ನ ಬಳಕೆಯನ್ನು ಮತ್ತು ಕೆಲವು ಪ್ರಕರಣಗಳಲ್ಲಿ ನಗದು ವ್ಯವಹಾರಗಳನ್ನು ದೊಡ್ಡ ಪ್ರಮಾಣದಲ್ಲಿ ಹಿಂದಿಕ್ಕಿದೆ. ಕ್ರೆಡಿಟ್ ಕಾರ್ಡ್ಗಳಂತೆ ಡೆಬಿಟ್ ಕಾರ್ಡುಗಳನ್ನು ದೂರವಾಣಿ ಮತ್ತು ಅಂತರ್ಜಾಲ ಖರೀದಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ ಹಾಗೂ ಕ್ರೆಡಿಟ್ ಕಾರ್ಡುಗಳಂತಲ್ಲದೆ, ಧಾರಕ ಆನಂತರ ದಿನಾಂಕದಲ್ಲಿ ಹಣವನ್ನು ಪಾವತಿ ಮಾಡುವುದರ ಬದಲಾಗಿ ಧಾರಕರ ಬ್ಯಾಂಕ್ ಖಾತೆಯಿಂದ ವರ್ಗಾವಣೆಯಾಗುತ್ತದೆ.
ಡೆಬಿಟ್ ಕಾರ್ಡ್ಗಳು ತಕ್ಷಣ ನಗದು ಪಡೆಯಲೂ ಕೂಡ ಆಸ್ಪದ ನೀಡುತ್ತವೆ, ನಗದು ಪಡೆಯಲು ಎಟಿಎಂ ಕಾರ್ಡ್ ರೀತಿಯಲ್ಲಿ ಹಾಗೂ ಚೆಕ್ ಗ್ಯಾರಂಟಿ ಕಾರ್ಡ್ ರೀತಿಯಲ್ಲಿಯೂ ಕೆಲಸ ಮಾಡುತ್ತದೆ. ವ್ಯಾಪಾರಿಗಳು ಗ್ರಾಹಕರಿಗೆ "ಕ್ಯಾಶ್ಬ್ಯಾಕ್"/"ಕ್ಯಾಶ್ಔಟ್" ಸೌಲಭ್ಯಗಳನ್ನು ಕೂಡ ನೀಡಬಹುದಾಗಿದ್ದು, ಇಲ್ಲಿ ಒಬ್ಬ ಗ್ರಾಹಕ ತನ್ನ ಖರೀದಿಯೊಂದಿಗೆ ನಗದನ್ನೂ ಪಡೆಯಬಹುದಾಗಿದೆ.