ಡಿಎನ್ಎ -(DNA)
From Wikipedia, the free encyclopedia
ಡಿ.ಎನ್.ಎ (ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ)(ಡಿ.ಎನ್.ಎ ಎಂಬ ವಂಶವಾಹಿ) ಎಲ್ಲಾ ಜೀವಿಗಳಲ್ಲೂ ಹಾಗೂ ಹಲವಾರು ವೈರಾಣುಗಳಲ್ಲಿ ಇರುವ ಪ್ರಧಾನ ಅನುವಂಶಿಕ ಜೈವಿಕ ಅಣುವಾಗಿದೆ.
ಡಿಎನ್ಎ ವಿಸ್ತರಣ ರೂಪ ಡೀಆಕ್ಸಿರೈಬೊ ನ್ಯೂಕ್ಲೀಯಿಕ್ ಆಮ್ಲ.[1] ಡಿ.ಎನ್.ಎಯ ರೂಪವನ್ನು ಮೊದಲ ಬಾರಿ ಕಂಡುಹಿಡಿದಿದ ವಿಜ್ಞಾನಿಗಳು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್. ಇವರಿಗೆ ೧೯೫೬ನಲ್ಲಿ ನೊಬೆಲ್ ಪುರಸ್ಕಾರ ದೊರೆತಿದೆ. ಡಿ.ಎನ್.ಎ ಎಲ್ಲಾ ಜೀವಿಗಳ ಬೆಳವಣಿಗೆ ಹಾಗೂ ಕಾರ್ಯಕ್ಕೆ ತಕ್ಕ ಸೂಚನೆಯನ್ನು ನೀಡುತ್ತದೆ. ಡಿ.ಎನ್.ಎ ಡಬಲ್ ಸ್ಟ್ರಾನ್ಡ್ ಹೆಲಿಕ್ಸ್ ಆಕಾರವನ್ನು ಹೊಂದಿರುತ್ತದೆ. ನ್ಯೂಕ್ಲಿಯೋಟೈಡ್ಗಳು ಪುಟ್ಟ ಘಟಕಗಳಿಂದ ಮಾಡಲಾಗಿರುವ ಎರಡು ಉದ್ದ ಜೈವಿಕ-ಪಾಲಿಮರ್ ಎಳೆಗಳು;= ನ್ಯೂಕ್ಲಿಯೊಟೈಡ್ ಇದರ ಬೆಂಬಲ. ಪ್ರತಿ ನ್ಯೂಕ್ಲಿಯೊಟೈಡ್ - ನ್ಯೂಕ್ಲಿಯೋಬೇಸುಗಳ ಸಂಯೋಜನೆ ಪಡೆದಿದೆ. ನಾಲ್ಕು ನ್ಯೂಕ್ಲಿಯೋಬೇಸ್ ಗಳ ಹೆಸರು ಗುವಾನೈನ್, ಸೈಟೋಸಿನ್, ಆಡಿನೈನ್ ಮತ್ತು ಥ್ತೈಮಿನ್.
- ಡೀಒಕ್ಸಿರೈಬೊಸ್ ಶರ್ಕರ ಹಾಗು ಫೋಸ್ಫೇಟುಗಳ ಪರ್ಯಾಯದೊಂದಿಗೆ ನಾಲ್ಕು ನ್ಯೂಕ್ಲಿಯೋಬೇಸುಗಳು ಸೇರಿ ಡಿಎನ್ಎಯ ಬೆನ್ನೆಲುಬಾಗಿದೆ. ಡಿಎನ್ಎಯಲಗಲಿರುವ ಪ್ರತಿಯೊಂದು ಜೀವಿಗಳು ಜೀವಿಗಳ ಆನುವಂಶಿಕ ವಸ್ತುವಾಗಿದೆ. ಡಿಎನ್ಎಯ ಎರಡು ಎಳೆಗಳು ಒಂದೇ ರೀತಿಯ ಮಾಹಿತಿಯನ್ನು ಹೊಂದಿದೆ. ಇದರ ಎರಡು ಎಳೆಗಳು ಬೇರ್ಪಡುವಾಗ ಅದರಲ್ಲಿರುವ ಜೈವಿಕ ಮಾಹಿತಿಯು ಸಹ ನಕಲುಗೊಳ್ಳುತ್ತದೆ. ಇದರ ಎರಡು ಎಳೆಗಳು ವಿರುದ್ದ ದಿಕ್ಕಿನಲ್ಲಿ ಇರುವುದರಿಂದ ಇದು ವಿರೋದಿ ಸಮಾಂತರ ಎಂದು ಕರೆಯಲಾಗಿದೆ. ಪ್ರತಿ ಎಳೆಗಳಿನ ದಿಕ್ಕಿಗೂ ೩‘ ಹಾಗು ೫‘ ಎಂಬ ಹೆಸರು ಕೊಡಲಾಗಿದೆ. ಇದರ ಹೆಚ್ಚು ಭಾಗವು ನಾನ್-ಕೋಡಿಂಗ್ ಆಗಿದೆ. ಈ ಕೋಡನ್ನು ಉಪಯೋಗಿಸಿ ಆರ್.ಎನ್.ಎ ಎಂಬ ನ್ಯೂಕ್ಲಿಕ್ ಆಸಿಡನ್ನು ನಿರ್ಮಿಸಿ ಅದರ ಮುಖಾಂತರ ಪ್ರೋಟೀನುಗಳು ನಿರ್ಮಿತಗೊಳ್ಳುವುದು. ಜೀವ ಕೋಶಗಳಲ್ಲಿ ಇವು ಉದ್ದ ಆಕಾರವನ್ನು ಹೊಂದಿದೆ. ಇದಕ್ಕೆ ಕ್ರೋಮೋಸೋಮುಗಳೆಂದು ಕರೆಯಬಹುದು. ಜೀವಕೋಶಗಳ ಭಾಗದ ನಂತರವು ಅದರಲ್ಲಿರುವ ಕ್ಕ್ರೋಮೋಸೋಮುಗಳ ಸಂಖ್ಯೆ ಸಮಾನವಾಗಿರುತ್ತದೆ.
- ಯೂಕಾರ್ಯೋಟುಗಳಲ್ಲಿ ಡಿ.ಎನ್.ಎ ಅದರ ನ್ಯೂಕ್ಳಿಯಸ್ ಹಾಗು ಅಂಗಕಳಾದ ಮೈಟೋಕೋಂಡ್ರಿಯ ಹಾಗು ಕ್ಳೋರೋಪ್ಳಾಸ್ಟುಗಳಲ್ಲಿ ಅಡಗಿದೆ. ಪ್ರೋಕಾರ್ಯೋಟುಗಳಲ್ಲಿ ಇದು ಸೈಟೋಪ್ಳಾಸಮಿನಲ್ಲಿ ಇರುವುದು.