ಟ್ಯಾಸ್ಮೆನಿಯಾ
ಆಸ್ಟ್ರೇಲಿಯಾದ ದ್ವೀಪ ರಾಜ್ಯ / From Wikipedia, the free encyclopedia
ಟ್ಯಾಸ್ಮೆನಿಯಾ ಆಸ್ಟ್ರೇಲಿಯಾ ದೇಶದ ಒಂದು ದ್ವೀಪ ಹಾಗೂ ರಾಜ್ಯವಾಗಿದೆ. ಇದು ಆಸ್ಟ್ರೇಲಿಯಾ ಮುಖ್ಯಭೂಮಿಯಿಂದ 240 kilometres (150 mi) ದಕ್ಷಿಣದಲ್ಲಿದೆ. ಬಾಸ್ ಸ್ಟ್ರೇಟ್ ಆಸ್ಟ್ರೇಲಿಯಾ ಮತ್ತು ಟ್ಯಾಸ್ಮೆನಿಯಾವನ್ನು ಪ್ರತ್ಯೇಕಿಸುವ ಜಲಭಾಗ. ವಿಶ್ವದಲ್ಲಿ 26ನೆಯ ಅತಿದೊಡ್ಡ ದ್ವೀಪ ಎನ್ನಲಾದ ಟ್ಯಾಸ್ಮೆನಿಯಾದ ದ್ವೀಪ ಹಾಗೂ ಸುತ್ತಮುತ್ತಲಿನ ದ್ವೀಪಗಳನ್ನು ಈ ರಾಜ್ಯವು ಒಳಗೊಳ್ಳುತ್ತದೆ.
ರಾಜ್ಯದ ಜನಸಂಖ್ಯೆ 500,000ದಷ್ಟಿದೆ as of ಡಿಸೆಂಬರ್ 2008[update]. ಇದರಲ್ಲಿ ಅರ್ಧದಷ್ಟು ಬೃಹತ್ ಹೋಬಾರ್ಟ್ ನೆರೆಹೊರೆಯಲ್ಲಿ ವಾಸಿಸುವರು. ಟ್ಯಾಸ್ಮೆನಿಯಾದ ವಿಸ್ತೀರ್ಣ 68,401 square kilometres (26,410 sq mi) ಇದರಲ್ಲಿ ಮುಖ್ಯ ದ್ವೀಪವು 62,409 square kilometres (24,096 sq mi) ಆವರಿಸುತ್ತದೆ.[2]
Gross state product | |
---|---|
- Product ($m) | $$೨೨,೫೬೪[1] |
ಟ್ಯಾಸ್ಮೆನಿಯಾವನ್ನು ನೈಸರ್ಗಿಕ ರಾಜ್ಯ , 'ಸ್ಫೂರ್ತಿ ನೀಡುವ ದ್ವೀಪ',[3] ಹಾಗೂ, ವಿಶಾಲ, ಹಚ್ಚಹಸಿರಾಗಿರುವ ನೈಸರ್ಗಿಕ ಪರಿಸರ ಹೊಂದಿರುವ ಈ ದ್ವೀಪಕ್ಕೆ ವಿಶ್ವದಿಂದಲೇ ಭಿನ್ನವಾದರೂ ವಿಶ್ವದಿಂದ ದೂರವಲ್ಲ ಎನ್ನಲಾಗಿದೆ. ಟ್ಯಾಸ್ಮೆನಿಯಾದ 37%ರಷ್ಟು ಭಾಗದಲ್ಲಿ ರಕ್ಷಿತಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು ಹಾಗೂ ವಿಶ್ವ ಪರಂಪರೆ ತಾಣಗಳಿವೆ.[4] ದ್ವೀಪವು ಅತಿ ಉತ್ತರ ತುದಿಯಿಂದ ಅತಿ ದಕ್ಷಿಣ ತುದಿಯ ತನಕ 364 kilometres (226 mi) ಉದ್ದವಿದೆ, ಹಾಗೂ ಪಶ್ಚಿಮ ತುದಿಯಿಂದ ಪೂರ್ವ ತುದಿಯ ತನಕ 306 kilometres (190 mi) ಉದ್ದದಲ್ಲಿ ಹರಡಿದೆ.
ಹೋಬಾರ್ಟ್ ರಾಜ್ಯದ ರಾಜಧಾನಿ ಹಾಗೂ ಅತಿದೊಡ್ಡ ನಗರವಾಗಿದೆ. ಇದು ಹೋಬಾರ್ಟ್ ನಗರ, ಗ್ಲೆನೊರ್ಕಿ ನಗರ ಮತ್ತು ಕ್ಲಾರೆನ್ಸ್ ನಗರಗಳ ಸ್ಥಳೀಯ ಸರ್ಕಾರದ ಆಡಳಿತ ಪ್ರದೇಶಗಳನ್ನು ಆವರಿಸಿದೆ. ಕಿಂಗ್ಬೊರೊ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿರುವ ಕಿಂಗ್ಸ್ಟನ್ ಉಪನಗರವನ್ನು ಸಾಮಾನ್ಯವಾಗಿ ಗ್ರೇಟರ್ (ಬೃಹತ್) ಹೋಬಾರ್ಟ್ ಪ್ರದೇಶದಲ್ಲಿ ಸೇರಿಸಲಾಗಿದೆ. ಇತರೆ ಪ್ರಮುಖ ಜನಸಾಂದ್ರತೆಯುಳ್ಳ ಪ್ರದೇಶಗಳಲ್ಲಿ ಉತ್ತರದಲ್ಲಿರುವ ಲಾನ್ಸೆಸ್ಟನ್ ಹಾಗೂ ವಾಯವ್ಯದಲ್ಲಿರುವ ಡೆವನ್ಪೋರ್ಟ್ ಮತ್ತು ಬರ್ನಿ ನಗರಗಳು ಸೇರಿವೆ.
ಉಪ-ಅಂಟಾರ್ಕ್ಟಿಕ್ ಮೆಕ್ವಾರಿ ದ್ವೀಪವೂ ಸಹ, ಹುವಾನ್ ಕಣಿವೆ ಪರಿಷತ್ ಸ್ಥಳೀಯ ಸರ್ಕಾರ ಕ್ಷೇತ್ರದ ಅಂಗವಾಗಿ, ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿದೆ.