ಟ್ಯಾಲೊ
ರಾಸಾಯನಿಕ ಸಂಯುಕ್ತ, ಗೋಮಾಂಸ ಅಥವಾ ಮಟನ್ ಕೊಬ್ಬಿನ ರೂಪವನ್ನು ನೀಡಲಾಗಿದೆ, ಸೂಟ್ನಿಂದ ಸಂಸ್ಕರಿಸಲಾಗುತ್ತದೆ / From Wikipedia, the free encyclopedia
ಟ್ಯಾಲೊ ಪ್ರಾಣಿಜನ್ಯ ಕೊಬ್ಬು. ಚರ್ಬಿ ಎಂದೂ ಹೆಸರಿದೆ. ಇದನ್ನು ದನ ಹಾಗೂ ಕುರಿಗಳ ಮಾಂಸದಿಂದ ಬೇರ್ಪಡಿಸಲಾಗುತ್ತದೆ. ಇದು ಗಟ್ಟಿಯಾದ, ಚೆನ್ನಾಗಿ ಬೆರೆತುಕೊಳ್ಳದ ಕೊಬ್ಬುಗಳ ಮಿಶ್ರಣ. ಜೀವಕೋಶಗಳ ಭಾಗವನ್ನು ಬೇರ್ಪಡಿಸುವ ಮೊದಲು ಇದನ್ನು ಸುಯೆಟ್ ಎಂದು ಕರೆಯುತ್ತಾರೆ. ಕುರಿ ಮಾಂಸದ ಟ್ಯಾಲೊದಲ್ಲಿ ದನದ ಟ್ಯಾಲೊಗಿಂತ ಹೆಚ್ಚು ಸ್ಟೆರಿನ್ ಉಂಟು. ಟ್ಯಾಲೊವಿನ ಗುಣವು ದನ ಅಥವಾ ಕುರಿಯ ತಳಿ, ವಯಸ್ಸು ಮತ್ತು ಸ್ವಲ್ಪ ಮಟ್ಟಿಗೆ ಮೇವನ್ನೂ ಅವಲಂಬಿಸುತ್ತದೆ. ಹೋರಿ ಹಾಗೂ ಟಗರುಗಳಿಂದ ತೆಗೆದ ಟ್ಯಾಲೊ ಹಸು ಹಾಗೂ ಕುರಿಗಳಿಂದ ತೆಗೆದ ಟ್ಯಾಲೊಗಿಂತ ಗಟ್ಟಿಯಾಗಿರುವುದು. ಎಣ್ಣೆಹಿಂಡಿಗಳನ್ನು ತಿಂದ ಪ್ರಾಣಿಗಳಿಗಿಂತ ಬರಿಹುಲ್ಲು ಮೇದ ಪ್ರಾಣಿಗಳ ಟ್ಯಾಲೋ ಗಟ್ಟಿ. ಮಾದಕ ಪಾನೀಯಗಳ ತಯಾರಿಕೆಯಲ್ಲಿ ದೊರೆಯುವ ಉಪೋತ್ಪನ್ನಗಳನ್ನು ಮೇವಾಗಿ ಉಪಯೋಗಿಸಿದಾಗ ಟ್ಯಾಲೋ ಮತ್ತಷ್ಟು ಮೃದುವಾಗುತ್ತದೆ.