ಟೋಕ್ಯೋ ಸ್ಟಾಕ್ ಎಕ್ಸ್ಚೇಂಜ್
From Wikipedia, the free encyclopedia
ಟೋಕ್ಯೋ ಸ್ಟಾಕ್ ಎಕ್ಸ್ಚೇಂಜ್ ಆನ್ನು ಸಂಕ್ಷಿಪ್ತವಾಗಿ ತೋಶೊ ಅಥವಾ ಟಿಎಸ್ಇ ಎಂದು ಕರೆಯಲಾಗುತ್ತದೆ. ಇದು ಜಪಾನ್ನ ಟೋಕಿಯೊದಲ್ಲಿರುವ ಒಂದು ಷೇರು ವಿನಿಮಯ ಕೇಂದ್ರವಾಗಿದೆ. ಇದರ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳದಿಂದ ಈ ಸ್ಟಾಕ್ ಎಕ್ಸ್ಚೇಂಜ್ ಜಗತ್ತಿನ ನಾಲ್ಕನೆಯ ದೊಡ್ಡದ್ದಾದ ಸ್ಟಾಕ್ ಎಕ್ಸ್ಚೇಂಜ್ ಎಂದು ಹೆಸರುವಾಸಿಯಾಗಿದೆ. ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್, ಪೂರ್ವ ಏಷ್ಯಾ ಮತ್ತು ಏಷ್ಯಾದ ದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಆಗಿದೆ.[2]
Quick Facts ಪ್ರಕಾರ, ಸ್ಥಳ ...
東京証券取引所 | |
ಪ್ರಕಾರ | ಷೇರು ವಿನಿಮಯ |
---|---|
ಸ್ಥಳ | ಟೋಕ್ಯೋ, ಜಪಾನ್ |
ನಿರ್ದೇಶಾಂಕಗಳು | 35°40′53″N 139°46′40″E |
ಸ್ಥಾಪನೆ | ಮೇ 15, 1878; 53327 ದಿನ ಗಳ ಹಿಂದೆ (1878-೦೫-15) (ಟೋಕಿಯೋ ಕಬುಶಿಕಿ ಟೋರಿಹಿಕಿಜೋ ಆಗಿ) ಮೇ 16, 1949 (1949-05-16) (as Tokyo Stock Exchange) |
ಮಾಲೀಕ | ಜಪಾನ್ ಎಕ್ಸ್ಚೇಂಜ್ ಗ್ರೂಪ್ |
ಮುಖ್ಯ ವ್ಯಕ್ತಿಗಳು |
|
ಚಲಾವಣೆಯ ನಾಣ್ಯ/ಹಣ | ಜಪಾನೀಸ್ ಯೆನ್ |
No. of listings | ೩, ೮೯೯(೨೧ ಆಗಸ್ಟ್ ೨೦೨೩) |
ಮಾರುಕಟ್ಟೆ ಬಂಡವಾಳ | ಯುಎಸ್ $ ೫.೯೦೪ ಟ್ರಿಲಿಯನ್ (ನವೆಂಬರ್ ೨೦೨೩)[1] |
ಸೂಚ್ಯಂಕಗಳು | Nikkei ೨೨೫ TOPIX |
ಜಾಲತಾಣ | jpx.co.jp |
Close
ಈ ವಿನಿಮಯವು ಜಪಾನ್ ಎಕ್ಸ್ಚೇಂಜ್ ಗ್ರೂಪ್ (ಜೆಪಿಎಕ್ಸ್)ನ ಒಡೆತನದಲ್ಲಿದೆ. ಟೋಕಿಯೋ ಸ್ಟಾಕ್ ಎಕ್ಸ್ಚೇಂಜ್ ಗ್ರೂಪ್ಅನ್ನು ಒಸಾಕಾ ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಂ, ಲಿಮಿಟೆಡ್ನೊಂದಿಗೆ ವಿಲೀನಗೊಳಿಸುವುದರಿಂದ ಜೆಪಿಎಕ್ಸ್ ರೂಪುಗೊಂಡಿತು.[3] ವಿಲೀನ ಪ್ರಕ್ರಿಯೆಯು ಜುಲೈ ೨೦೧೨ ರಲ್ಲಿ ಪ್ರಾರಂಭವಾಯಿತು.[4][2] ಜೆಪಿಎಕ್ಸ್ ಅನ್ನು ಜನವರಿ ೧, ೨೦೧೩ ರಂದು ಪ್ರಾರಂಭಿಸಲಾಯಿತು.[5][6]