ಜೊಹಾನ್ ವೂಲ್ಫ್ಗಾಂಗ್ ವಾನ್ ಗಯಟೆ
From Wikipedia, the free encyclopedia
ಜೊಹಾನ್ ವೂಲ್ಫ್ಗಾಂಗ್ ವಾನ್ ಗಯಟೆ(28 ಆಗಸ್ಟ್ 1749 – 22 ಮಾರ್ಚ್ 1832) ಅಥವಾ ಗಯಟೆ ಜರ್ಮನಿಯ ಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾಸಾಹಿತಿ. ಯುರೋಪಿನ ರೆನೆಸಾನ್ಸ್ ಯುಗದ ಪರಂಪರೆಯ ಕಟ್ಟಕಡೆಯ ಪ್ರತಿನಿಧಿ. ಈತ ಸೃಷ್ಟಿಸಿದ ವಿಶ್ವಸಾಹಿತ್ಯ ಎನ್ನುವ ಮಾತನ್ನು ಈತನಿಗೇ ಅನ್ವಯಿಸಿ ಹೇಳುವುದಾದರೆ ಇವನೊಬ್ಬ ಶ್ರೇಷ್ಠ ವಿಶ್ವಸಾಹಿತಿ. ನೂರಾರು ರಸಮಯ ಘಟನೆಗಳಿಂದ ವೈವಿಧ್ಯಮಯ ಅನುಭವಗಳಿಂದ ತುಂಬಿ ಹರಿಯುವ ಇವನ ಬದುಕೇ ಒಂದು ರೋಮಾಂಚಕ ಇತಿಹಾಸದಂತಿದೆ.
Quick Facts ಜೊಹಾನ್ ವೂಲ್ಫ್ಗಾಂಗ್ ವಾನ್ ಗಯಟೆ, ಜನನ ...
ಜೊಹಾನ್ ವೂಲ್ಫ್ಗಾಂಗ್ ವಾನ್ ಗಯಟೆ | |
---|---|
[[File:|frameless|center=yes|alt=]] | |
ಜನನ | (೧೭೪೯-೦೮-೨೮)೨೮ ಆಗಸ್ಟ್ ೧೭೪೯ Frankfurt-am-Main, ಜರ್ಮನಿ |
ಮರಣ | 22 March 1832(1832-03-22) (aged 82) Weimar, Grand Duchy of Saxe-Weimar-Eisenach, German Confederation |
ವೃತ್ತಿ | ಕವಿ, ಕಾದಂಬರಿಕಾರ,ನಾಟಕಕಾರ, ತತ್ವಜ್ಞಾನಿ,ರಾಜತಂತ್ರಜ್ಞ,ಆಡಳಿತಗಾರ |
ರಾಷ್ಟ್ರೀಯತೆ | ಜರ್ಮನ್ |
ಸಾಹಿತ್ಯ ಚಳುವಳಿ | Sturm und Drang; Weimar Classicism |
ಪ್ರಮುಖ ಕೆಲಸ(ಗಳು) | Faust; The Sorrows of Young Werther; Wilhelm Meister's Apprenticeship; Elective Affinities; "Prometheus"; Zur Farbenlehre; Italienische Reise; Westöstlicher Diwan |
ಬಾಳ ಸಂಗಾತಿ | Christiane Vulpius (1806–16, her death) |
ಪ್ರಭಾವಗಳು
| |
ಪ್ರಭಾವಿತರು
| |
ಸಹಿ |
Close