ಜೇಡಿ ಮಣ್ಣಿನ ಅಂಕಣ
From Wikipedia, the free encyclopedia
ಜೇಡಿ ಮಣ್ಣಿನ ಅಂಕಣ ಎಂಬುದು ಟೆನಿಸ್ ಅಂಕಣದ ನಾಲ್ಕು ವಿಭಿನ್ನ ಬಗೆಗಳ ಪೈಕಿ ಒಂದಾಗಿದೆ. ಪುಡಿಪುಡಿಮಾಡಿದ ಜೇಡಿ ಪದರುಗಲ್ಲು, ಕಲ್ಲು ಅಥವಾ ಇಟ್ಟಿಗೆಯಿಂದ ಜೇಡಿ ಮಣ್ಣಿನ ಅಂಕಣಗಳನ್ನು ರೂಪಿಸಲಾಗುತ್ತದೆ. ಹಸಿರು ಮಣ್ಣು, ಅಥವಾ ಹರ್-ಟ್ರು "ಅಮೆರಿಕಾದ" ಜೇಡಿ ಮಣ್ಣಿಗಿಂತ ಕೆಂಪು ಜೇಡಿ ಮಣ್ಣು ವೇಗ ನಿಧಾನಗತಿಯದ್ದಾಗಿರುತ್ತದೆ ಅಥವಾ ಚೆಂಡಿನ ವೇಗ ಕಡಿಮೆ ಮಾಡುವ ಲಕ್ಷಣವನ್ನು ಹೊಂದಿರುತ್ತದೆ. ಫ್ರೆಂಚ್ ಓಪನ್ ಪಂದ್ಯಾವಳಿಗಳಲ್ಲಿ ಜೇಡಿ ಮಣ್ಣಿನ ಅಂಕಣಗಳನ್ನು ಬಳಸುವುದರಿಂದ ಅವು ಗ್ರಾಂಡ್ ಸ್ಲಾಂ ಪಂದ್ಯಾವಳಿಗಳ ಪೈಕಿ ಅನನ್ಯವೆನಿಸಿಕೊಂಡಿವೆ.
ಜೇಡಿ ಮಣ್ಣಿನ ಅಂಕಣಗಳು ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ಕೆನಡಾ ಅಥವಾ ಬ್ರಿಟನ್ಗಿಂತ ಯುರೋಪ್ ಭೂಖಂಡ ಮತ್ತು ಲ್ಯಾಟಿನ್ ಅಮೆರಿಕಾಗಳಲ್ಲಿ ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತವೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ "ರುಬಿಕೊ" ಎಂದೂ ಹೆಸರಾದ ಹಸಿರು ಜೇಡಿ ಮಣ್ಣಿನಿಂದ ಅಂಕಣಗಳನ್ನು ರೂಪಿಸಲಾಗುತ್ತದೆ ಮತ್ತು ರುಬಿಕೊವನ್ನು ಅನೇಕವೇಳೆ "ಜೇಡಿ ಮಣ್ಣು" ಎಂಬುದಾಗಿ ಕರೆಯಲಾಗುತ್ತದೆ; ಆದರೆ ಯುರೋಪಿನ ಮತ್ತು ಲ್ಯಾಟಿನ್ ಅಮೆರಿಕಾದ ಬಹುತೇಕ ದೇಶಗಳಲ್ಲಿ ಬಳಸಲ್ಪಡುವ ಅದೇ ಜೇಡಿ ಮಣ್ಣಿನಿಂದ ಈ ಅಂಕಣಗಳು ರೂಪುಗೊಂಡಿರುವುದಿಲ್ಲ. ಇತರ ಬಗೆಗಳ ಟೆನಿಸ್ ಅಂಕಣಗಳನ್ನು ನಿರ್ಮಿಸುವುದಕ್ಕಿಂತ ಜೇಡಿ ಮಣ್ಣಿನ ಅಂಕಣಗಳನ್ನು ನಿರ್ಮಿಸುವುದು ಅಗ್ಗವಾಗಿದೆಯಾದರೂ, ಮಟ್ಟಸವಾಗಿರುವಿಕೆಯನ್ನು ಕಾಯ್ದುಕೊಂಡು ಹೋಗಲು ಜೇಡಿ ಮಣ್ಣಿನ ಅಂಕಣಗಳ ಮೇಲ್ಮೈಯನ್ನು ಮಟ್ಟಸ ಮಾಡಬೇಕಾಗಿ ಬರುತ್ತದೆಯಾದ್ದರಿಂದ, ಅವುಗಳ ನಿರ್ವಹಣಾ ವೆಚ್ಚಗಳು ಹೆಚ್ಚಿನದಾಗಿರುತ್ತವೆ. ನೀರಿನ ಅಂಶದ ಸಮತೋಲನವನ್ನೂ ಕಾಯ್ದುಕೊಳ್ಳಬೇಕಾಗುತ್ತದೆ; ನೀರು ಹರಿದುಹೋಗಲು ಅವಕಾಶ ಮಾಡಿಕೊಡುವ ದೃಷ್ಟಿಯಿಂದ, ಹಸಿರು ಅಂಕಣಗಳನ್ನು ಅನೇಕವೇಳೆ ಇಳಿಜಾರಾಗಿಸಿರಲಾಗುತ್ತದೆ.[1]