ಜೀವವೈವಿಧ್ಯ
From Wikipedia, the free encyclopedia
ಜೀವವೈವಿಧ್ಯ ಎಂಬುದು ನಿರ್ದಿಷ್ಟ ಪರಿಸರ ವ್ಯವಸ್ಥೆ ಅಥವಾ ಬಯೊಮ್ನೊಳಗೆ ಅಥವಾ ಇಡೀ ಭೂಮಿಯಲ್ಲಿರುವ ಜೀವಸಂಕುಲಗಳ (ಹಲವು) ರೂಪಗಳ ಏರಿಳಿತ. ಜೀವವೈವಿಧ್ಯ ನಿಸರ್ಗ ವ್ಯವಸ್ಥೆಯ ಆರೋಗ್ಯದ ಮಾನದಂಡವಾಗಿಯೂ ಬಳಸಲಾಗಿದೆ. ಸುಮಾರು 3.5 ಶತಕೋಟಿ ವರ್ಷಗಳ ವಿಕಸನದ ಫಲವಾಗಿ ಇಂದು ಭೂಮಿಯಲ್ಲಿ ಕಂಡುಬರುವ ಜೀವವೈವಿಧ್ಯದಲ್ಲಿ ದಶಲಕ್ಷಗಳಷ್ಟು ವಿವಿಧ ಜೈವಿಕ ಪ್ರಭೇಧಗಳಿವೆ.[1][2]