ಚೆಸ್ನಟ್ ಮರ
From Wikipedia, the free encyclopedia
ಫ್ಯಾಗೇಸೀ ಕುಟುಂಬಕ್ಕೆ ಸೇರಿದ ಅತ್ಯಂತ ಬೆಲೆಬಾಳುವ ವೃಕ್ಷ. ವೈಜ್ಞಾನಿಕ ಹೆಸರು ಕ್ಯಾಸ್ಟಾನಿಯ. ಕ್ಯಾಸ್ಟಾನಿಯ ಜಾತಿಯಲ್ಲಿ ಅನೇಕ ಪ್ರಭೇದಗಳಿವೆಯಾದರೂ ಈ ಮುಂದಿನ ಕೇವಲ ನಾಲ್ಕು ಪ್ರಭೇದಗಳಿಗೆ ಮಾತ್ರ ಚೆಸ್ನಟ್ ಮರಗಳೆಂದು ಹೆಸರು: ಕ್ಯಾ ಸೇಟಿವ (ಯೂರೋಪಿನ ಚೆಸ್ನಟ್), ಕ್ಯಾ.ಡೆಂಟೇಟ (ಅಮೆರಿಕನ್ ಚೆಸ್ನಟ್), ಕ್ಯಾ. ಕ್ರಿನೇಟ (ಜಪಾನಿನ ಚೆಸ್ನಟ್) ಕ್ಯಾ. ಮಾಲಿಸಿಮ (ಚೈನೀಸ್ ಚೆಸ್ನಟ್). ಉಳಿದ ಪ್ರಭೇದಗಳನ್ನು ಚಿನ್ ಕ್ವಾಪಿನ್ಸ್ ಎನ್ನುತ್ತಾರೆ. ಹಿಪ್ಪೊಕ್ಯಾಸ್ಟನೇಸೀ ಕುಟುಂಬಕ್ಕೆ ಸೇರಿದ ಹಾರ್ಸ್ ಚೆಸ್ನಟ್ ಎನ್ನುವ ವೃಕ್ಷಕ್ಕೂ ನಿಜವಾದ ಚೆಸ್ಟ್ನಟ್ಟಿಗೂ ಯಾವ ಸಂಬಂಧವೂ ಇಲ್ಲ.[1]
Quick Facts ಚೆಸ್ನಟ್ ಮರ, Scientific classification ...
Close