ಚೀನಾದ ಇತಿಹಾಸ
ಚೀನೀ ನಾಗರಿಕತೆಯ ಹಿಂದಿನ ಘಟನೆಗಳ ವಿವರ / From Wikipedia, the free encyclopedia
ನಿಯೋಲಿಥಿಕ್ ಯುಗದಲ್ಲಿ, ಹಳದಿ ನದಿ (ಎಲ್ಲೊ ರಿವರ್) ಮತ್ತು ಯಾಂಗ್ತ್ಸೆ ನದಿಯ (ಯಾಂಗ್ತ್ಸೆ ರಿವರ್) ದಂಡೆಗಳ ಮೇಲೆ, ಬೇರೆ ಬೇರೆ ಪ್ರಾದೇಶಿಕ ಕೇಂದ್ರಗಳಲ್ಲಿ, ಚೀನಾ ನಾಗರೀಕತೆಯು ಉಗಮವಾಯಿತೆಂದು ಹೇಳಲಾಗುತ್ತದೆಯಾದರೂ, ಪ್ರಮುಖವಾಗಿ ಹಳದಿ ನದಿಯೇ ಚೀನಾ ನಾಗರೀಕತೆಯ ತೊಟ್ಟಿಲು ಎಂದು ಕೂಡಾ ಹೇಳಲಾಗುತ್ತದೆ. (ca. 1700 BC - 1046 BC) ಕಾಲದ ಶಾಂಗ್ ರಾಜಮನೆತನಕ್ಕೂ ಮೊದಲೇ ಲಿಖಿತ ಚೀನಾದ ಇತಿಹಾಸ ಇದ್ದುದನ್ನು ಕಾಣಬಹುದು. ದೈವದ ಮೂಳೆಗಳು ಅಥವಾ ಒರಾಕಲ್ ಬೋನ್ಸ್ ಮೇಲಿನ ಪುರಾತನ ಚೀನಾ ಭಾಷೆಯಲ್ಲಿರುವ ಲಿಪಿಯು ಶಾಂಗ್ ರಾಜಮನೆತನದ್ದೆ ಎಂದು ಹೇಳುವುದಕ್ಕೆ ಪುರಾವೆಗಳಿವೆ. ರೇಡಿಯೋ ಕಾರ್ಬನ್ ದಿನಾಂಕ ನಮೂದಾಗಿರುವ ಈ ಮೂಳೆಗಳು ಕ್ರಿಸ್ತಪೂರ್ವ 1500ಕ್ಕೂ ಮೊದಲೇ ಇದ್ದುದಾಗಿ ತಿಳಿದು ಬರುತ್ತದೆ.[1] ಚೀನಾದ ಸಂಸ್ಕೃತಿ, ಸಾಹಿತ್ಯ ಮತ್ತು ತತ್ವಜ್ಞಾನಗಳ ಮೂಲವು ಝೋ ಆಡಳಿತದ (1045 BC-256 BC) ಕಾಲದಲ್ಲಿ ಬೆಳವಣಿಗೆ ಹೊಂದಿದ್ದಾಗಿ ಕಂಡು ಬರುತ್ತದೆ.
History of China | |||||||
---|---|---|---|---|---|---|---|
ANCIENT | |||||||
3 Sovereigns and 5 Emperors | |||||||
Xia Dynasty 2100–1600 BC | |||||||
Shang Dynasty 1600–1046 BC | |||||||
Zhou Dynasty 1045–256 BC | |||||||
Western Zhou | |||||||
Eastern Zhou | |||||||
Spring and Autumn period | |||||||
Warring States period | |||||||
IMPERIAL | |||||||
Qin Dynasty 221 BC–206 BC | |||||||
Han Dynasty 206 BC–220 AD | |||||||
Western Han | |||||||
Xin Dynasty | |||||||
Eastern Han | |||||||
Three Kingdoms 220–280 | |||||||
Wei, Shu and Wu | |||||||
Jin Dynasty 265–420 | |||||||
Western Jin | 16 Kingdoms 304–439 | ||||||
Eastern Jin | |||||||
Southern and Northern Dynasties 420–589 | |||||||
Sui Dynasty 581–618 | |||||||
Tang Dynasty 618–907 | |||||||
(Second Zhou 690–705) | |||||||
5 Dynasties and 10 Kingdoms 907–960 |
Liao Dynasty 907–1125 | ||||||
Song Dynasty 960–1279 |
|||||||
Northern Song | W. Xia | ||||||
Southern Song | Jin | ||||||
Yuan Dynasty 1271–1368 | |||||||
Ming Dynasty 1368–1644 | |||||||
Qing Dynasty 1644–1911 | |||||||
MODERN | |||||||
Republic of China 1912–1949 | |||||||
People's Republic of China 1949–present |
Republic of China on Taiwan 1949–present | ||||||
Related articles
Chinese historiography | |||||||
ಕ್ರಿ.ಪೂ. 8 ನೆಯ ಶತಮಾನದ ಆಂತರಿಕ ಮತ್ತು ಬಾಹ್ಯ ಒತ್ತಡಗಳೆರಡಕ್ಕೂ ಝೋ ರಾಜಮನೆತನವು ಬಾಗಬೇಕಾಗಿ ಬಂದುದು ಇತಿಹಾಸದಿಂದ ತಿಳಿದುಬರುತ್ತದೆ. ತನ್ನ ಪ್ರಾದೇಶಿಕ ಮತ್ತು ಸ್ಥಳೀಯ ಅರಸು ಮನೆತನಗಳನ್ನೇ ಹತ್ತಿಕ್ಕಲು ಝೋ ಆಡಳಿತಕ್ಕೆ ಸಾಧ್ಯವಾಗದೇ ಹೋಗುತ್ತದೆ. ಹಾಗಾಗಿಯೇ ಈ ಅರಸು ಮನೆತನವು ಕ್ರಮೇಣ ಸಣ್ಣ ಸಣ್ಣ ರಾಜ್ಯಗಳಾಗಿ ಒಡೆಯಲ್ಪಡುತ್ತದೆ. ವಸಂತ ಋತು ಮತ್ತು ಶಿಶಿರ ಋತುಗಳು ಪ್ರಾರಂಭಗೊಳ್ಳುವ ಸಮಯದಲ್ಲಿ ಶುರುವಾಗುವ ಈ ಒಡಕು, 'ಯುದ್ಧ ಮಾಡುವ ರಾಜ್ಯಗಳ ಕಾಲ'ದಲ್ಲಿಯಾಗಲೇ ಸಂಪೂರ್ಣವಾಗಿ ಒಂದು ಅಭಿವ್ಯಕ್ತಿಯನ್ನು ಪಡೆದುಕೊಂಡಿರುತ್ತದೆ. ಕ್ರಿ.ಪೂ. 221ರಲ್ಲಿ ಕಿನ್ ಶಿ ಹುಯಾಂಗನು ಹಲವಾರು ಯುದ್ಧದ ರಾಜ್ಯಗಳನ್ನು ಒಗ್ಗೂಡಿಸಿ, ಪುನಃ ಮೊತ್ತಮೊದಲ ಚೀನಾ ಅರಸು ನಾಡೊಂದನ್ನು ಕಟ್ಟುತ್ತಾನೆ. ನಂತರದಲ್ಲಿ ಬಂದ ಎಲ್ಲ ಚೀನೀ ಇತಿಹಾಸದ ಅರಸು ಮನೆತನಗಳು ಅಧಿಕಾರಶಾಹೀ ಪದ್ಧತಿಯನ್ನು ಅನುಸರಿಸಿದುವಷ್ಟೇ ಅಲ್ಲದೇ, ಚೀನಾದ ಚಕ್ರವರ್ತಿಗೆ ವಿಶಾಲ ರಾಜ್ಯಗಳನ್ನು ಹತೋಟಿಗೆ ತರಲು ನೆರವಾಗಿವೆ.
ಸಾಂಪ್ರದಾಯಿಕ ಅಥವಾ ರೂಢಿಗತ ಚೀನೀಯ ಇತಿಹಾಸದ ದೃಷ್ಟಿಕೋನದ ಪ್ರಕಾರ, ರಾಜಕೀಯ ಒಗ್ಗೂಡುವಿಕೆ ಮತ್ತು ಒಡೆಯುವಿಕೆಯ ಪ್ರಕ್ರಿಯೆಗಳು ಅದಲು ಬದಲಾಗುತ್ತಲೇ ಇರುತ್ತವೆ. ಇದಲ್ಲದೆಯೇ, ಚೀನಾ ಅಪರೂಪಕ್ಕೊಮ್ಮೆ ಎಂಬಂತೆ ಒಳ ಏಶಿಯಾದ ಜನರಿಂದ ಪ್ರಬಲವಾಗಿ ಹತ್ತಿಕ್ಕಲ್ಪಡುತ್ತದೆ. ಅದರಲ್ಲಿ ಹೆಚ್ಚಿನ ಮಂದಿ, ಹ್ಯಾನ್ ಚೈನೀಸ್ ಜನ ಸಮುದಾಯ ಎಂದು ಕರೆಯಲಾಗುವ ಪಂಗಡಕ್ಕೆ ಸೇರಿದವರಾಗಿರುತ್ತಾರೆ.
ಪರದೇಶಗಳಿಗೆ ವಲಸೆ ಹೋಗುವ, ಅಲ್ಲಿ ಸಾಂಸ್ಕೃತಿಕವಾಗಿ ಒಂದರ ಜೊತೆಗೊಂದು ಬೇರೆಯಬಲ್ಲ ಶಕ್ತಿಯಿರುವ ಹಾಗೂ ವಿಸ್ತಾರಗೊಳ್ಳುವ ಹಲವಾರು ಬದಲಾವಣೆಯ ಅಲೆಗಳು ಚೀನಾದ ಆಧುನಿಕ ಇತಿಹಾಸದ ಭಾಗವೇ ಆಗಿವೆಯಲ್ಲದೆ ಏಶಿಯಾದ ಹಲವಾರು ಭಾಗಗಳ ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೊಳಪಟ್ಟಿವೆ ಎಂದು ಹೇಳಬಹುದು.