ಗ್ಲುಕೋಸ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
6-(hydroxymethyl)oxane-2,3,4,5-tetrol | |||
Other names
Dextrose, grape sugar, blood sugar, corn sugar | |||
Identifiers | |||
CAS Number |
| ||
3D model (JSmol) |
|||
Abbreviations | Glc | ||
ChemSpider | |||
EC Number | 200-075-1 | ||
PubChem CID |
|||
SMILES
| |||
ಗುಣಗಳು [1] | |||
ಅಣು ಸೂತ್ರ | C6H12O6 | ||
ಮೋಲಾರ್ ದ್ರವ್ಯರಾಶಿ | 180.16 g/mol | ||
ಸಾಂದ್ರತೆ | 1.54 g/cm3 | ||
ಕರಗು ಬಿಂದು |
α-D-glucose: 146 °C | ||
ಕರಗುವಿಕೆ ನೀರಿನಲ್ಲಿ | 91 g/100 ml (25 °C) | ||
ಕರಗುವಿಕೆ ಮೆಥನೋಲ್ | 0.037 M | ||
ಕರಗುವಿಕೆ ಎಥನೋಲ್ | 0.006 M | ||
ಕರಗುವಿಕೆ ಟೆಟ್ರಾಹೈಡ್ರೋಫುರನ್ | 0.016 M | ||
ಉಷ್ಣರಸಾಯನಶಾಸ್ತ್ರ | |||
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
−1271 kJ/mol | ||
ದಹನದ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔcH |
−2805 kJ/mol | ||
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
209.2 J K−1 mol−1 | ||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
ಗ್ಲುಕೋಸ್ (Glc) ಒಂದು ಸರಳ ಶರ್ಕರವಾಗಿದ್ದು (ಮೋನೊಸ್ಯಾಕರೈಡ್) ಜೀವಶಾಸ್ತ್ರದಲ್ಲಿನ ಒಂದು ಪ್ರಮುಖ ಕಾರ್ಬೊಹೈಡ್ರೇಟ್(ಶರ್ಕರ ಪಿಷ್ಟ)ವಾಗಿದೆ. ಜೀವಕೋಶಗಳು ಇದನ್ನು ಶಕ್ತಿಯ ಮೂಲವಾಗಿ ಮತ್ತು ಚಯಾಪಚಯ ಕ್ರಿಯೆಯ ಮಧ್ಯವರ್ತಿಯಾಗಿ ಬಳಸಿಕೊಳ್ಳುತ್ತವೆ.ಗ್ ಗ್ಲುಕೋಸ್ ದ್ಯುತಿಸಂಶ್ಲೇಷಣೆ ಕ್ರಿಯೆಯ ಒಂದು ಮುಖ್ಯ ಉತ್ಪನ್ನ ಮತ್ತು ಇದು ಜೀವಕೋಶಗಳ ಉಸಿರಾಟ ಕ್ರಿಯೆಯನ್ನು ಆರಂಭಿಸುತ್ತದೆ. ಪಿಷ್ಟ ಮತ್ತು ಸೆಲ್ಯುಲೋಸ್ ಗ್ಲುಕೋಸ್ನ ನಿರ್ಜಲೀಕರಣದಿಂದ ಪಡೆಯುವ ಪಾಲಿಮರ್ಗಳಾಗಿವೆ. "ಗ್ಲುಕೋಸ್" ಪದವು "ಸಿಹಿ" ಎಂಬರ್ಥವಿರುವ ಗ್ರೀಕ್ ಪದ glukus (ಗ್ಲುಕುಸ್) (γλυκύς)ನಿಂದ ಬಂದಿದೆ. ಉತ್ತರ ಪ್ರತ್ಯಯ "-ose" ಶರ್ಕರವನ್ನು ಸೂಚಿಸುತ್ತದೆ.
ಗ್ಲುಕೋಸ್ ಅನೇಕ ವಿಧದ ರಚನೆಗಳನ್ನು ಹೊಂದಬಹುದು. ಆದರೆ ಈ ಎಲ್ಲಾ ರಚನೆಗಳನ್ನು ಕನ್ನಡಿ-ಬಿಂಬಗಳ ಎರಡು (ತಂತು)ವಂಶಗಳಾಗಿ (ಸ್ಟೀರಿಯೊಐಸೋಮರ್ಗಳು(ಸಮಸ್ಥಾನಿಕಗಳು) ವಿಭಾಗಿಸಬಹುದು. ಈ ಐಸೋಮರ್ಗಳ ಕೇವಲ ಒಂದು ಜೊತೆ ಮಾತ್ರ ನಿಸರ್ಗದಲ್ಲಿ ಅಸ್ತಿತ್ವದಲ್ಲಿದೆ. ಅದನ್ನು ಗ್ಲುಕೋಸ್ನ "ಬಲ-ಭಾಗದ ರೂಪ"ದಿಂದ ಪಡೆಯಲಾಗಿದ್ದು, D-ಗ್ಲುಕೋಸ್ ಎಂದು ಸೂಚಿಸಲಾಗುತ್ತದೆ. D-ಗ್ಲುಕೋಸ್ಅನ್ನು ಹೆಚ್ಚಾಗಿ, ವಿಶೇಷವಾಗಿ ಆಹಾರ ಉದ್ಯಮದಲ್ಲಿ ಡೆಕ್ಸ್ಟ್ರೋಸ್ ಎಂದು ನಿರೂಪಿಸಲಾಗುತ್ತದೆ. ಡೆಕ್ಸ್ಟ್ರೋಸ್ ಪದವನ್ನು ಡೆಕ್ಸ್ಟ್ರೊರೊಟೇಟರಿ ಗ್ಲುಕೋಸ್ ನಿಂದ ಪಡೆಯಲಾಗಿದೆ.[2] ಡೆಕ್ಸ್ಟ್ರೋಸ್ನ ದ್ರಾವಣವು ಧ್ರುವೀಕೃತ ಬೆಳಕನ್ನು ಬಲಕ್ಕೆ ತಿರುಗಿಸುತ್ತದೆ (ಲ್ಯಾಟಿನ್ನಲ್ಲಿ: ಡೆಕ್ಸ್ಟರ್ = "ಬಲ" ). ಈ ವಿಷಯವು D-ಗ್ಲುಕೋಸ್ಗೆ ಸಂಬಂಧಿಸಿದೆ. ಅಣುವಿನ ಕನ್ನಡಿ-ಬಿಂಬ L-ಗ್ಲುಕೋಸ್ನ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ.