ಗ್ರೇಟ್ ಎಕ್ಸ್ಪೆಕ್ಟೇಷನ್ಸ್
From Wikipedia, the free encyclopedia
ಗ್ರೇಟ್ ಎಕ್ಸ್ಪೆಕ್ಟೇಷನ್ಸ್ ಚಾರ್ಲ್ಸ್ ಡಿಕೆನ್ಸ್ ಬರೆದ ಒಂದು ಕಾದಂಬರಿ. ಇದು ಮೊದಲು ಆಲ್ ದಿ ಯಿಯರ್ ರೌಂಡ್ [1] ಪತ್ರಿಕೆಯಲ್ಲಿ `೧೮೬೦ರ ಡಿಸೆಂಬರ್ ೧ರಿಂದ ೧೮೬೧ರ ಆಗಸ್ಟ್ವರೆಗೆ ಸರಣಿ ಕ್ರಮದಲ್ಲಿ ಪ್ರಕಟವಾಯಿತು. ಇದನ್ನು ನಾಟಕ ಮತ್ತು ಚಲನಚಿತ್ರಗಳಲ್ಲಿ ಸುಮಾರು ೨೫೦ ಬಾರಿ ಬಳಸಿಕೊಳ್ಳಲಾಗಿದೆ.[2]
Quick Facts ಲೇಖಕರು, ದೇಶ ...
ಲೇಖಕರು | ಚಾರ್ಲ್ಸ್ ಡಿಕನ್ಸ್ |
---|---|
ದೇಶ | ಯುಕೆ |
ಭಾಷೆ | ಇಂಗ್ಲಿಷ್ |
ಸರಣಿ | ಸಾಪ್ತಾಹಿಕ: ಡಿಸೆಂಬರ್ ೧, ೧೮೬೦ – ಆಗಸ್ಟ್ ೩, ೧೮೬೧ |
ಪ್ರಕಾರ | ಕಥಾಸಾಹಿತ್ಯ ಸಾಮಾಜಿಕ ಟೀಕೆ |
ಪ್ರಕಾಶಕರು | ಚ್ಯಾಪ್ಮನ್ ಅಂಡ್ ಹಾಲ್ |
ಪ್ರಕಟವಾದ ದಿನಾಂಕ | ೧೮೬೧ (ಮೂರು ಸಂಪುಟಗಳಲ್ಲಿ) |
ಮಾಧ್ಯಮ ಪ್ರಕಾರ | ಮುದ್ರಣ (ಸರಣಿ, ಗಟ್ಟಿರಟ್ಟು, ಮತ್ತು ಕಾಗದ ಹೊದಿಕೆ) |
ಪುಟಗಳು | ೭೯೯ ಪುಟ (ಗಟ್ಟಿರಟ್ಟು) |
ಐಎಸ್ಬಿಎನ್ | ಅನ್ವಯಿಸುವುದಿಲ್ಲ |
ಮುಂಚಿನ | ಅ ಟೇಲ್ ಆಫ್ ಟೂ ಸಿಟೀಸ್ |
ನಂತರದ | ಆರ್ ಮ್ಯೂಚುವಲ್ ಫ಼್ರೆಂಡ್ |
Close
ಗ್ರೇಟ್ ಎಕ್ಸ್ಪೆಕ್ಟೇಷನ್ಸ್ ಅನ್ನು ಅನಾಥ ಹುಡುಗ ಪಿಪ್ನ ದೃಷ್ಟಿಕೋನದಲ್ಲಿ ವೈಯಕ್ತಿಕ ನೆಲೆಯಲ್ಲಿ ಬರೆಯಲಾಗಿದೆ. ಡಿಕೆನ್ಸ್ನ ಕೃತಿಗಳಲ್ಲಿ ಹೆಚ್ಚು ಪ್ರಸಿದ್ಧವಾದ ಈ ಕಾದಂಬರಿಯು ಆತನ ವ್ಯಕ್ತಿ ಮತ್ತು ಜೀವನಾನುಭವವನ್ನು ಚಿತ್ರಿಸುತ್ತದೆ.