ಗ್ರೀನ್ ಕಂಪ್ಯೂಟಿಂಗ್
From Wikipedia, the free encyclopedia
ಗ್ರೀನ್ ಕಂಪ್ಯೂಟಿಂಗ್ ಅಥವಾ ಗ್ರೀನ್ IT ಎಂಬುದು, ಪರಿಸರೀಯವಾಗಿ ಸಮರ್ಥನೀಯವಾಗಿರುವ ರೀತಿಯಲ್ಲಿರುವ ಕಂಪ್ಯೂಟರ್ ಬಳಕೆಗೆ ಅಥವಾ ITಗೆ ಉಲ್ಲೇಖಿಸಲ್ಪಡುತ್ತದೆ. ಹಾರ್ನೆಸಿಂಗ್ ಗ್ರೀನ್ IT: ಪ್ರಿನ್ಸಿಪಲ್ಸ್ ಅಂಡ್ ಪ್ರಾಕ್ಟೀಸಸ್ ಎಂಬ ಲೇಖನದಲ್ಲಿ ಸ್ಯಾನ್ ಮುರುಗೇಶನ್ ಎಂಬಾತ ಗ್ರೀನ್ ಕಂಪ್ಯೂಟಿಂಗ್ ಕ್ಷೇತ್ರವನ್ನು ಈ ರೀತಿಯಲ್ಲಿ ವ್ಯಾಖ್ಯಾನಿಸುತ್ತಾನೆ: "ಗ್ರೀನ್ ಕಂಪ್ಯೂಟಿಂಗ್ ಕ್ಷೇತ್ರವು, ಕಂಪ್ಯೂಟರ್ಗಳು, ಸರ್ವರ್ಗಳು ಮತ್ತು ಇವಕ್ಕೆ ಸಂಬಂಧಿಸಿದ ಉಪ-ಯಂತ್ರವ್ಯವಸ್ಥೆಗಳಾದ ದರ್ಶಕ ಘಟಕಗಳು, ಮುದ್ರಕಗಳು, ಮಾಹಿತಿ ಸಂಗ್ರಹಣಾ ಸಾಧನಗಳು, ಮತ್ತು ಜಾಲವನ್ನು ಸ್ಥಾಪಿಸುವ ಹಾಗೂ ಸಂವಹನೆಗಳು ವ್ಯವಸ್ಥೆಗಳ ವಿನ್ಯಾಸ ಮಾಡುವಿಕೆ, ತಯಾರಿಸುವಿಕೆ, ಬಳಸುವಿಕೆ ಹಾಗೂ ಯುಕ್ತ ರೀತಿಯಲ್ಲಿ ಅಳವಡಿಸುವಿಕೆಯನ್ನು ಪರಿಸರದ ಮೇಲೆ ಕನಿಷ್ಠತಮವಾದ ಅಥವಾ ಯಾವುದೇ ಪ್ರಭಾವವನ್ನು ಬೀರದಂತೆ ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ಮಾಡುವ ಅಧ್ಯಯನ ಮತ್ತು ಪರಿಪಾಠವಾಗಿದೆ."[1] ಗ್ರೀನ್ ಕಂಪ್ಯೂಟಿಂಗ್ನ ಗುರಿಗಳು ಹಸಿರು ರಸಾಯನಶಾಸ್ತ್ರದ ಗುರಿಗಳನ್ನು ಹೋಲುತ್ತವೆ; ಅಂದರೆ ಅಪಾಯಕರ ಸಾಮಗ್ರಿಗಳ ಬಳಕೆಯನ್ನು ತಗ್ಗಿಸುವುದು, ಉತ್ಪನ್ನದ ಬಾಳಿಕೆಯ ಅವಧಿಯಲ್ಲಿ ಅದರ ಶಕ್ತಿ-ಕಾರ್ಯಪಟುತ್ವವನ್ನು ಗರಿಷ್ಠಗೊಳಿಸುವುದು, ಮತ್ತು ಬಳಕೆಯಲ್ಲಿಲ್ಲದ ಉತ್ಪನ್ನಗಳು ಹಾಗೂ ಕಾರ್ಖಾನೆಯ ತ್ಯಾಜ್ಯದ ಪುನರುಪಯೋಗಕ್ಕೆ ಅರ್ಹವಾಗಿಸುವಿಕೆ ಅಥವಾ ಜೈವಿಕ ವಿಘಟನೀಯತೆಯನ್ನು ಉತ್ತೇಝಿಸುವುದು ಈ ಗುರಿಗಳಲ್ಲಿ ಸೇರಿವೆ. ಎಷ್ಟು ಸಾಧ್ಯವೋ ಅಷ್ಟು ಶಕ್ತಿ-ಕಾರ್ಯಪಟುಗಳಾಗಿರುವ ರೀತಿಯಲ್ಲಿ ಕಂಪ್ಯೂಟರ್ಗಳ ಪ್ರಯೋಜನ ಪಡೆದುಕೊಳ್ಳುವುದು, ಮತ್ತು ಕಾರ್ಯಪಟುತ್ವ-ಸಂಬಂಧಿತ ಕಂಪ್ಯೂಟರ್ ತಂತ್ರಜ್ಞಾನಗಳಿಗಾಗಿ ಗಣನಾ ಕ್ರಮಗಳು ಹಾಗೂ ವ್ಯವಸ್ಥೆಗಳನ್ನು ವಿನ್ಯಾಸ ಮಾಡುವುದು ಇವೇ ಮೊದಲಾದ ಪ್ರಮುಖ ಕ್ಷೇತ್ರಗಳೊಳಗೆ ಸಂಶೋಧನೆಯು ಮುಂದುವರಿಯುತ್ತಿದೆ.