ಗ್ರೀಕ್ ಪುರಾಣ ಕಥೆ
From Wikipedia, the free encyclopedia
ಪ್ರಾಚೀನ ಗ್ರೀಕ್ ಗೆ ಸೇರಿದ ಗ್ರೀಕ್ ಪುರಾಣ ಕಥನ ವು ಪುರಾಣಗಳ ಮತ್ತು ದಂತಕಥೆಯ ಹೂರಣ. ಇದು, ದೇವರುಗಳ ಮತ್ತು ವೀರರ, ವಿಶ್ವ ಪ್ರಕೃತಿ ಮತ್ತು ಅದರ ಮೂಲ ಹಾಗೂ ವಿಧಿ ಮತ್ತು ಮತಾಚರಣೆ ರೂಢಿಗಳಿಗೆ ಸಂಬಂಧಿಸಿದವು. ಇವು ಪ್ರಾಚೀನ ಗ್ರೀಸ್ ಧರ್ಮದ ಭಾಗ. ಪ್ರಾಚೀನ ಗ್ರೀಕ್ ಬಗೆಗಿನ ಧಾರ್ಮಿಕ ಹಾಗೂ ರಾಜಕೀಯ ಮಾಹಿತಿಗೆ, ಅದರ ನಾಗರೀಕತೆಯನ್ನು ಅರಿಯುವುದಕ್ಕೆ, ಅಷ್ಟೇ ಅಲ್ಲಾ ಸ್ವತ: ಪುರಾಣ ಕಥೆಗಳ ಉಗಮಕ್ಕೆ ಕಾರಣವಾದುದನ್ನು ಅರಿಯುವುದಕ್ಕೆ, ಆಧುನಿಕ ವಿದ್ವಾಂಸರು ಇದೇ ಪುರಾಣ ಕಥೆಗಳನ್ನು ಉಲ್ಲೇಖಿಸುತ್ತಾರೆ.[1]
ಗ್ರೀಕ್ ಪುರಾಣ ಕಥೆಗಳು, ದೊಡ್ಡ ಸಂಗ್ರಹದ ನಿರೂಪಣೆಗಳನ್ನು ವಿಶದವಾಗಿ ಹೊಂದಿವೆ ಮತ್ತು ಪ್ರಾತಿನಿಧಿಕ ಕಲೆಗಳಾದ ಪಿಂಗಾಣಿ ಯಾ ಲೋಹದ ಕಲಶಗಳ-ವರ್ಣ ಚಿತ್ರಗಳಲ್ಲಿ ಮತ್ತು ಹರಕೆಯ ಉಡುಗೊರೆಗಳಲ್ಲಿ ಸೂಚ್ಯವಾಗಿ ಕಂಡು ಬಂದಿದೆ. ಗ್ರೀಕ ಪುರಾಣ ಕಥೆಗಳು ವಿಶ್ವದ ಮೂಲವನ್ನು ಮತ್ತು ವಿವಿಧ ಬಗೆಯ ದೇವರುಗಳ, ದೇವತೆಗಳ, ವೀರ ಪುರುಷ ಮತ್ತು ವೀರ ಮಹಿಳೆಯರ ಮತ್ತು ಬೇರೆ ಇತರ ಪೌರಾಣಿಕ ವ್ಯಕ್ತಿಗಳ ಬಗ್ಗೆ ವಿವರಗಳನ್ನು ಹಾಗೂ ಅವರ ಸಾಹಸಗಾಥೆಗಳನ್ನು ಸಮಗ್ರವಾಗಿ ವಿಶದವಾಗಿ ವಿವರಿಸುತ್ತದೆ. ಈ ವಿವರಗಳನ್ನು ಆರಂಭಿಕ ಕಾಲದಲ್ಲಿ ಕವನ ವಾಚನ ಸಂಪ್ರದಾಯ ದಲ್ಲಿ ಹರಡಿಸಲಾಗುತ್ತಿತ್ತು; ಇವತ್ತು, ಪ್ರಾಥಮಿಕವಾಗಿ ಗ್ರೀಕ್ ಸಾಹಿತ್ಯವನ್ನು ಗ್ರೀಕ್ ಪುರಾಣದಿಂದ ಅರಿಯಬೇಕಾಗಿದೆ.
ಅತೀ ಪುರಾತನ ಗ್ರೀಕ್ ಸಾಹಿತ್ಯದ ಮೂಲಗಳಾದ ಪುರಾಣ ಕಾವ್ಯ ಇಲೀಯಾದ್ ಮತ್ತು [[ಓಡಿಸ್ಸೀಯ್, ಟ್ರೋಜಾನ್ ಸಮರ|ಓಡಿಸ್ಸೀಯ್, ಟ್ರೋಜಾನ್ ಸಮರ]] ದ ಸುತ್ತ-ಮುತ್ತ ಕೇಂದ್ರೀಕರಿಸುತ್ತದೆ. ಹೋಮರ್ ನ ಹತ್ತಿರದ ಸಮಕಾಲೀನ ಹೇಸೀಯಾಡ್ ನ ಎರಡು ಕಾವ್ಯಗಳಾದ ಥೀಯೋಗಾನಿ ಮತ್ತು ವರ್ಕ್ಸ್ ಆಂಡ್ ಡೇಸ್ ನಲ್ಲಿ ವಿಶ್ವದ ಸೃಷ್ಟಿ ಪರ್ವದ ಬಗ್ಗೆ,ದೈವದತ್ತವಾದ ಆಡಳಿತಗಾರರ ಪರಂಪರೆಯ ಬಗ್ಗೆ, ಮನುಷ್ಯ ಜೀವಿಯ ಪರಂಪರೆ ಬಗ್ಗೆ, ಮನುಷ್ಯ ಸಂಕಷ್ಟಗಳ ಮೂಲಗಳ ಬಗ್ಗೆ ಮತ್ತು ತ್ಯಾಗದ ಮೂಲ ಪದ್ಧತಿಗಳ ಉಗಮದ ಬಗ್ಗೆ ವಿವರಣೆ ಸಿಗುತ್ತದೆ. ಹೋಮರಿಕ್ ಸ್ತೋತ್ರಗಾನ ಗಳಲ್ಲಿ, ಪುರಾಣ ಆವರ್ತದ ಪುರಾಣ ಕಾವ್ಯಗಳಲ್ಲಿ, ಗೀತಪ್ರಧಾನವಾದ ಕಾವ್ಯಗಳಲ್ಲಿ, ಐದನೇ ಶತಮಾನದ BCಯ ರುದ್ರ ನಾಟಕಕಾರರ ಕಾರ್ಯಗಳಲ್ಲಿ, ವಿದ್ವಾಂಸರ ಮತ್ತು ಗ್ರೀಕ್ ಪಾಂಡಿತ್ಯದ ಯುಗದ ಕವಿಗಳ ಕಾವ್ಯಗಳಲ್ಲಿ ಮತ್ತು ರೋಮನ್ ಚಕ್ರವರ್ತಿಯ ಕಾಲದ ಬರಹಗಾರರ ಬರಹಗಳಾದ ಪ್ಲುಟಾರ್ಕ್ ಮತ್ತು ಪೌಸಾನಿಯಾಸ್ ಗಳಲ್ಲಿ-ಪುರಾಣ ಕಥೆಗಳು ಸಂರಕ್ಷಿತವಾಗಿದೆ.
ಪುರಾತತ್ವ ಶಾಸ್ತ್ರದ ಆವಿಷ್ಕಾರಗಳು ಗ್ರೀಕ್ ಪುರಾಣ ಕಥೆಗಳ ಸಂಪೂರ್ಣ ವಿವರವನ್ನು ಒದಗಿಸುತ್ತದೆ, ದೇವರುಗಳ ಬಗ್ಗೆ ಮತ್ತು ವೀರರ ಬಗ್ಗೆ ಅನೇಕ ಅಲಂಕಾರಿಕ ಭೂಷಣಗಳ ಕರಕೌಶಲ್ಯಗಳಲ್ಲಿಯೂ ಕಂಡು ಬರುತ್ತದೆ. ಎಂಟನೇ ಶತಮಾನದ BCಯಲ್ಲಿ ಮಣ್ಣಿನ ಕುಡಿಕೆಗಳ ಮೇಲೆ ಜ್ಯಾಮಿತ್ತಿಯ ವಿನ್ಯಾಸಗಳ ಟ್ರೋಜಾನ್ ಸೈಕಲ್ ಮತ್ತು ಹೆರಾಕಲ್ಸ್ ನ ಸಾಹಸಗಳ ಬಗ್ಗೆ ಚಿತ್ರಿಸಲಾಗಿದೆ. ತದನಂತರದ ಆರ್ಕೀಯಾಕ್ಗಳಲ್ಲಿ, ಶಾಸ್ತ್ರೀಯಗಳಲ್ಲಿ ಮತ್ತು ಗ್ರೀಕ್ ಪಾಂಡಿತ್ಯದ ಅವಧಿಗಳಲ್ಲಿ, ಹೋಮೆರಿಕ್ ಮತ್ತು ವಿವಿಧ ಪುರಾಣದ ದೃಷ್ಯಗಳು ಪ್ರತ್ಯಕ್ಷವಾಗುತ್ತದೆ ಜೊತೆಗೆ ಆ ಹೊತ್ತಿನ ಸಾಹಿತ್ಯವನ್ನು ಸಾಕ್ಷ್ಯ ಒದಗಿಸುತ್ತದೆ.[2]
ಗ್ರೀಕ್ ಪುರಾಣವು ತನ್ನ ಎಲ್ಲಾ ಪ್ರಭಾವವನ್ನು ಸಂಸ್ಕೃತಿ, ಕಲೆ ಮತ್ತು ಪಾಶ್ಚಿಮಾತ್ಯ ನಾಗರೀಕತೆಯ ಸಾಹಿತ್ಯದ ಮೇಲೆ ಬೀರಿರುತ್ತದೆ ಹಾಗೂ ಇನ್ನೂ ಪಾಶ್ಚಾತ್ಯ ಭಾಷೆ ಮತ್ತು ಪರಂಪರೆಯ ಭಾಗವಾಗಿ ಉಳಿದಿದೆ. ಕವಿಗಳು ಮತ್ತು ಕಲಾವಿದರು ಪುರಾತನ ಕಾಲದಿಂದ ಈಗಿನವರೆಗೂ ಈ ಗ್ರೀಕ್ ಪುರಾಣ ಕಥೆಗಳಿಂದ ಸ್ಫೂರ್ತಿ ಪಡೆಯುತ್ತಲ್ಲೇ ಇದ್ದಾರೆ ಮತ್ತು ಇವರು ಅದರಲ್ಲಿ ಸಮಕಾಲೀನ ಪ್ರಾಮುಖ್ಯತೆಯನ್ನು ಕಾಣುತ್ತಿದ್ದಾರೆ.[3]