ಗೆಲಿಲಿಯೊ ಗೆಲಿಲಿ (೧೫ ಫೆಬ್ರುವರಿ ೧೫೬೪ - ೮ ಜನವರಿ ೧೬೪೨) ಇಟಲಿಯ ಭೌತಶಾಸ್ತ್ರಜ್ಞ, ಗಣಿತಜ್ಙ, ಖಗೋಳಶಾಸ್ತ್ರಜ್ಙ ಮತ್ತು ತತ್ವಶಾಸ್ತ್ರಜ್ಞ. ಇವರು ವೈಜ್ಞಾನಿಕ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರೆನೆಸಾನ್ಸ್ ಕಾಲದಲ್ಲಿ ಉಂಟಾದ ವಿಜ್ಞಾನ ಪುನರುಜ್ಜೀವನದ ಆದ್ಯ ಪ್ರವರ್ತಕರಲ್ಲೊಬ್ಬ. ಆಧುನಿಕ ವಿಜ್ಞಾನದ ಆಧಾರಸ್ತಂಭಗಳಲ್ಲೊಂದು ಎನಿಸಿರುವ ಪ್ರಯೋಗಮಾರ್ಗವನ್ನು ಅನುಷ್ಠಾನಕ್ಕೆ ತಂದವನೆಂದೂ ಯಂತ್ರಶಾಸ್ತ್ರದ (ಮೆಕ್ಯಾನಿಕ್ಸ್) ಮೂಲಪುರುಷನೆಂದೂ ಪ್ರಸಿದ್ಧಿ ಪಡೆದಿದ್ದಾನೆ. ಖಗೋಳೀಯ ಸಂಶೋಧನೆಗೆ ದೂರದರ್ಶಕವನ್ನು ಮೊತ್ತಮೊದಲ ಬಾರಿಗೆ ಬಳಸಿ ವಿವಿಧ ಆಕಾಶ ಕಾಯಗಳ ಬಗ್ಗೆ ಅನೇಕಾನೇಕ ಸ್ವಾರಸ್ಯಕರ ವಿಷಯಗಳನ್ನು ಸಂಗ್ರಹಿಸಿ ಕೊಪರ್ನಿಕಸ್ ಸಿದ್ಧಾಂತಕ್ಕೆ ಬೆಂಬಲ ನೀಡಿದ; ಮತ್ತು ಅದರಿಂದ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿದ.
Quick Facts ಗೆಲಿಲಿಯೋ ಗೆಲಿಲಿ, ಜನನ ...
ಗೆಲಿಲಿಯೋ ಗೆಲಿಲಿ
Portrait of Galileo Galilei by Giusto Sustermans
ಜನನ
(೧೫೬೪-೦೨-೧೫)೧೫ ಫೆಬ್ರವರಿ ೧೫೬೪ ಪಿಸಾ, Duchy of Florence, Italy
ಮರಣ
8 January 1642(1642-01-08) (aged77) Arcetri, Grand Duchy of Tuscany, Italy
ವಾಸಸ್ಥಳ
Grand Duchy of Tuscany, Italy
ರಾಷ್ಟ್ರೀಯತೆ
Italian (Tuscan)
ಕಾರ್ಯಕ್ಷೇತ್ರ
Astronomy, Physics and Mathematics
ಸಂಸ್ಥೆಗಳು
ಪಿಸಾ ವಿಶ್ವವಿದ್ಯಾನಿಲಯ University of Padua
ಅಭ್ಯಸಿಸಿದ ವಿದ್ಯಾಪೀಠ
ಪಿಸಾ ವಿಶ್ವವಿದ್ಯಾನಿಲಯ
ಶೈಕ್ಷಣಿಕ ಸಲಹೆಗಾರರು
Ostilio Ricci
ಗಮನಾರ್ಹ ವಿದ್ಯಾರ್ಥಿಗಳು
Benedetto Castelli Mario Guiducci Vincenzio Viviani
ಟಿಪ್ಪಣಿಗಳು His father was the musician Vincenzo Galilei. His mistress was Marina Gamba (1570-August 21, 1612?) was mother of Maria Celeste (Virginia 1600-1634) and Livia (1601-1659), who were nuns, and son Vincenzo (1606-1649) a lutenist. Gamba later married Giovanni Bartoluzzi.