ಗುರಗಾಂವ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಗುರಗಾಂವ್
Gurgaon गुड़गांव | |
---|---|
ನಗರ | |
Nickname: ಮಿಲ್ಲೇನಿಯಮ್ ನಗರ | |
Population (೨೦೦೧) | |
• Total | ೨೨೮೮೨೦ |
Website | http://gurgaon.nic.in/ |
ಭಾರತದ ರಾಜ್ಯ ಹರಿಯಾಣದಲ್ಲಿರುವ ಗುರಗಾಂವ್ ಗುಡ್ಗಾಂವ್ (ಸಹಾಯ·ಮಾಹಿತಿ)ಹಿಂದಿ:गुड़गांव 6ನೇ ಅತೀದೊಡ್ಡ ನಗರವಾಗಿದೆ. ಗುರಗಾಂವ್ ಹರಿಯಾಣದ ಕೈಗಾರಿಕೆ ಮತ್ತು ಆರ್ಥಿಕ ಕೇಂದ್ರವಾಗಿದೆ. ಪ್ರಾಚೀನ ಹಿಂದು ಪುರಾಣದ ಪ್ರಮುಖ ಪಟ್ಟಣವಾದ ಗುರಗಾಂವ್ ದೆಹಲಿಯ ನಾಲ್ಕು ಪ್ರಮುಖ ಉಪನಗರಗಳಲ್ಲಿ ಒಂದಾಗಿದ್ದು,ಭಾರತದ ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗವಾಗಿದೆ. ಕಳೆದ 10 ವರ್ಷಗಳಲ್ಲಿ ನಗರವು ತ್ವರಿತ ಬೆಳವಣಿಗೆ ಮತ್ತು ನಿರ್ಮಾಣಕ್ಕೆ ಒಳಪಟ್ಟಿದೆ.[1] 1997ರಲ್ಲಿ GE ಕಂಪೆನಿ ಗುರಗಾಂವ್ನಲ್ಲಿ ಕಾಲ್ಸೆಂಟರ್ ಸ್ಥಾಪಿಸಿದ ಬಳಿಕ ಇತರ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಕಾಲ್ಸೆಂಟರ್ಗಳನ್ನು ತೆರೆಯಲು ಗುರಗಾಂವ್ನ್ನು ಆಯ್ಕೆ ಮಾಡಿಕೊಂಡಿವೆ. ಇದು ಗುರಗಾಂವ್ನ್ನು ಕಾಲ್ ಸೆಂಟರ್ ಪ್ರಪಂರಾಜಧಾನಿಯನ್ನಾಗಿಸಿದೆ.[2] ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಪ್ರಾದೇಶಿಕ ಮುಖ್ಯ ಕಚೇರಿಗಳನ್ನು ಮುಂಬಯಿ ಅಥವಾ ದೆಹಲಿಯ ಬದಲು ಗುರಗಾಂವ್ನಲ್ಲಿ ಸ್ಥಾಪಿಸಲು ಆಯ್ಕೆ ಮಾಡಿಕೊಂಡರು.[3] ಬಿಸಿನೆಸ್ ಟುಡೆ ನಿಯತಕಾಲಿಕೆಯ ಪ್ರಕಾರ, ಇಂದು ಉದ್ಯೋಗಕ್ಕೆ ಗುರಗಾಂವ್ ಭಾರತದಲ್ಲೇ ಅತ್ಯುತ್ತಮ ನಗರ ಮತ್ತು ವಾಸಯೋಗ್ಯ ನಗರವಾಗಿ ಭಾರತದಲ್ಲೇ ಅತ್ಯುತ್ತಮವೆಂದು ಪರಿಗಣಿತವಾಗಿದೆ.[4] ಗುರಗಾಂವ್ನಲ್ಲಿ ತಲಾದಾಯ 122,212 INR ಆಗಿದ್ದು,ಚಂಡೀಗಢ ಮತ್ತು ಮುಂಬಯಿ ಬಳಿಕ ಭಾರತದಲ್ಲೇ 3ನೇ ಅತ್ಯಧಿಕ ತಲಾದಾಯ ಹೊಂದಿದೆ.[5]