ಖಾಸಗಿ ಷೇರುಗಳು
From Wikipedia, the free encyclopedia
ಹಣಕಾಸು ಸಂಬಂಧಿಸಿದಂತೆ ಖಾಸಗಿ ಷೇರು ಗಳೆಂದರೆ ಚಾಲ್ತಿಯಲ್ಲಿರುವ ಕಂಪನಿಗಳ ಷೇರು ಬಂಡವಾಳ ಪತ್ರಗಳನ್ನು, ಆ ಕಂಪನಿಯ ಆಸ್ತಿಯಾಗಿ ಪರಿಗಣಿಸಿದ ಷೇರುಗಳಾಗಿದ್ದು, ಅವುಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಸಾರ್ವಜನಿಕವಾಗಿ ಪಡೆಯಲಾಗುವುದಿಲ್ಲ. ಖಾಸಗಿ ಷೇರುಗಳೆಂದರೆ ಅಸ್ತಿತ್ವದಲ್ಲಿರುವ ಕಂಪನಿಗಳ ದೈನಂದಿನ ಉತ್ಪಾದನಾ ಚಟುವಟಿಕೆಗಳಿಗೆ ಅಗತ್ಯ ಬಂಡವಾಳ ಹೂಡಿಕೆಯನ್ನು ಷೇರುಗಳ ಮೂಲಕ ಮಾಡುವುದು ಅಥವಾ ಕಾರ್ಯೋನ್ಮುಖ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವಿಕೆ ಎಂದು ಹೇಳಬಹುದು. ಪ್ರಾಥಮಿಕವಾಗಿ ಸಾಂಸ್ಥಿಕ ಹೂಡಿಕೆದಾರರಿಂದ ಖಾಸಗಿ ಷೇರುಗಳ ಬಂಡವಾಳ ಸಂಗ್ರಹಿಸಲಾಗುತ್ತದೆ. ವಿವಿಧ ಪ್ರಕಾರ ಮತ್ತು ರೀತಿಯ ಖಾಸಗಿ ಷೇರುಗಳಿವೆ. ಖಾಸಗಿ ಷೇರುಗಳು ಎಂಬ ಪದವನ್ನು ವಿವಿಧ ದೇಶಗಳಲ್ಲಿ ಬೇರೆಬೇರೆ ಅರ್ಥದಲ್ಲಿ ಬಳಸಿಕೊಳ್ಳುತ್ತಾರೆ. ಈ ಪದಕ್ಕೆವಿಶಾಲ ವ್ಯಾಪ್ತಿಯ ಅರ್ಥ ವ್ಯಾಖ್ಯಾನವಿದೆ.[1]
ನಿಯಂತ್ರಿತ ಖರೀದಿ(ಕಂಪನಿಯ ಮೇಲೆ ನಿಯಂತ್ರಣ ಸಾಧಿಸಲು ಕೊಳ್ಳುವಿಕೆ)ಗಳು, ಸಾಹಸೋದ್ಯಮದ ಬಂಡವಾಳ, ಅಭಿವೃದ್ಧಿಪರ ಬಂಡವಾಳ, ಆಪತ್ಕಾಲೀನ ಬಂಡವಾಳ ಹೂಡಿಕೆ ಮತ್ತು ಮಧ್ಯಮಾವಧಿ ಬಂಡವಾಳಗಳು ಖಾಸಗಿ ಷೇರುಗಳ ಹೂಡಿಕೆಯ ಸಾಮಾನ್ಯ ವಿಧಾನಗಳಲ್ಲಿ ಒಳಗೊಂಡಿವೆ. ವಿಶೇಷ ನಿಯಂತ್ರಿತ ಖರೀದಿಯಲ್ಲಿ, ಖಾಸಗಿ ಷೇರುಹೂಡಿಕೆಯ ಸಂಸ್ಥೆಯು ಅಸ್ತಿತ್ವದಲ್ಲಿರುವ ಅಥವಾ ಉತ್ತಮ ಸ್ಥಿತಿಯಲ್ಲಿರುವ ಸಂಸ್ಥೆಯ ಬಹುಪಾಲು ಷೇರುಗಳನ್ನು ಖರೀದಿಸುತ್ತದೆ. ಇದು ಸಾಹಸೋದ್ಯಮ ಬಂಡವಾಳ ಅಥವಾ ಅಭಿವೃದ್ಧಿ ಬಂಡವಾಳದಿಂದ ಭಿನ್ನವಾಗಿದೆ.ಹಣಕಾಸಿನ ಸಂಸ್ಥೆಗಳು ಸಣ್ಣ ಪ್ರಮಾಣದ ಅಥವಾ ಅಸ್ತಿತ್ವಕ್ಕೆ ಬರುತ್ತಿರುವ ಹೊಸ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತದೆ. ತೀರಾ ವಿರಳವಾಗಿ ನಿಯಂತ್ರಣ ಸಾಧಿಸಲು ಬಹುಪಾಲು ಖಾಸಗಿ ಷೇರುಗಳನ್ನು ಖರೀದಿಸುತ್ತದೆ.