ಕ್ರೆಡಿಟ್ ಕಾರ್ಡುಗಳು
From Wikipedia, the free encyclopedia
ಕ್ರೆಡಿಟ್ ಕಾರ್ಡ್ ಒಂದು ಸಣ್ಣ ಪ್ಲಾಸ್ಟಿಕ್ ಕಾರ್ಡ್ ಆಗಿದ್ದು, ಇದನ್ನು ಬಳಕೆದಾರರಿಗೆ ಹಣ ಸಂದಾಯ ಮಾಡುವುದಕ್ಕಾಗಿ ಬಳಸಲು ಜಾರಿಗೊಳಿಸಿರುವ ಒಂದು ವ್ಯವಸ್ಥೆಯಾಗಿದೆ. ಈ ಕಾರ್ಡನ್ನು ಹೊಂದಿರುವವರು ತಮಗೆ ಬೇಕಾದ ವಸ್ತುಗಳು ಮತ್ತು ಸೇವೆಗಳಿಗೆ ತಕ್ಕ ಮೌಲ್ಯವನ್ನು ತೆರುವ ಭರವಸೆ ನೀಡುವ ಆಧಾರದಲ್ಲಿ ತಮಗೆ ಬೇಕಾಗುವ ಅಗತ್ಯ ವಸ್ತು ಮತ್ತು ಸೇವೆಗಳನ್ನು ಪಡೆಯಲು ಇದು ಅವಕಾಶ ನೀಡುತ್ತದೆ.[1] ಈ ಕಾರ್ಡನ್ನು ನೀಡುವವರು ಒಂದು ಆವರ್ತ ಖಾತೆಯನ್ನು ರಚಿಸಿಸುವ ಮೂಲಕ ಗ್ರಾಹಕ ರಿಗೆ (ಅಥವಾ ಬಳಕೆದಾರರಿಗೆ) ಒಂದು ಸೀಮಿತ ವ್ಯಾಪ್ತಿಯ ಸಾಲವನ್ನು (ಕ್ರೆಡಿಟ್) ಒದಗಿಸುತ್ತಾರೆಯಲ್ಲದೇ, ಇದರ ಮೂಲಕ ಬಳಕೆದಾರರು ವ್ಯಾಪಾರಿಗೆ ಅಥವಾ ಬಳಕೆದಾರನಿಗೆ ನಗದು ಮುಂಗಡ ವಾಗಿ ನೀಡಲು ಹಣವನ್ನು ತೆಗೆದುಕೊಳ್ಳಬಹುದಾಗಿದೆ.
This article may be too long to read and navigate comfortably. (May 2009) |
ಕ್ರೆಡಿಟ್ ಕಾರ್ಡ್ ಚಾರ್ಜ್ ಕಾರ್ಡ್ಗಿಂತ ಭಿನ್ನವಾಗಿದೆ: ಚಾರ್ಜ್ ಕಾರ್ಡಿಗೆ ಪ್ರತಿ ತಿಂಗಳೂ ಕೂಡ ಹಣ ಪಾವತಿಸುವುದಕ್ಕಾಗಿ ಅದರಲ್ಲಿ ಪೂರ್ಣ ಪ್ರಮಾಣದ ಮೊತ್ತವಿರಬೇಕಾಗುತ್ತದೆ. ಇದಕ್ಕೆ ಪ್ರತಿಯಾಗಿ, ಕ್ರೆಡಿಟ್ ಕಾರ್ಡ್ಗಳು ಗ್ರಾಹಕರು ಸೂಕ್ತವಾದ ಬಡ್ಡಿಯನ್ನು ವಿಧಿಸುವ ಮೂಲಕ ತಮ್ಮ ಸಾಲದ ಬಾಕಿಯನ್ನು ಮುಂದುವರೆಸಲು ಅವಕಾಶವಿದೆ. ಹಾಗೆಯೇ ಈ ಕ್ರೆಡಿಟ್ ಕಾರ್ಡ್ ಕೂಡ ಕ್ಯಾಶ್ ಕಾರ್ಡ್(ನಗದು ಕಾರ್ಡ್) ಗಿಂತ ಭಿನ್ನವಾಗಿದ್ದು, ಇದನ್ನು ಕಾರ್ಡಿನ ಮಾಲೀಕರು ನಾಣ್ಯ ಪದ್ಧತಿ (ಕರೆನ್ಸಿ)ಯಾಗಿ ಕೂಡ ಬಳಸಬಹುದಾಗಿದೆ. ಹೆಚ್ಚಾಗಿ ಕ್ರೆಡಿಟ್ ಕಾರ್ಡ್ಗಳನ್ನು ಬ್ಯಾಂಕ್ ಗಳು ಅಥವಾ ಕ್ರೆಡಿಟ್ ಯೂನಿಯನ್ಗಳಿಂದ ನೀಡಲಾಗುತ್ತದೆ ಮತ್ತು ಅವುಗಳ ಆಕಾರ ಮತ್ತು ಗಾತ್ರವನ್ನು ಐಎಸ್ಒ/ ಐಇಸಿ ೭೮೧೦ ಸ್ಟಾಂಡರ್ಡ್ನಿಂದ ID-೧. ಎಂದು ನಮೂದಿಸಲಾಗುತ್ತದೆ. ಇದನ್ನು 85.60 mm × 53.98 mm (3.370 in × 2.125 in) (೩೩/೮ × ೨೧/೮ ಇಂಚುಗಳು) ಗಾತ್ರದ್ದೆಂದು ಹೇಳಲಾಗುತ್ತದೆ