ಕೋಪನ್ ಹ್ಯಾಗನ್
From Wikipedia, the free encyclopedia
ಕೋಪನ್ ಹ್ಯಾಗನ್ English pronunciation: /ˈkoʊpənheɪɡən/[2]; ಡೇನಿಷ್:Københavnpronounced [kʰøb̥ənˈhaʊ̯ˀn] ( listen)[3] ಡೆನ್ಮಾರ್ಕ್ ನ ಅತಿ ದೊಡ್ಡ ನಗರ ಹಾಗೂ ರಾಜಧಾನಿಯಾಗಿದ್ದು ನಗರದಲ್ಲಿ 1,181,239 (2010)ಜನಸಂಖ್ಯೆ ಮತ್ತು ಮೆಟ್ರೋಪಾಲಿಟನ್ ನಲ್ಲಿ 1,894,521 (2010)ಜನಸಂಖ್ಯೆಯನ್ನು ಹೊಂದಿದೆ. ಕೋಪನ್ ಹ್ಯಾಗನ್ ಝಿಯಾಲ್ಯಾಂಡ್ ಮತ್ತು ಅಮಾಜೆರ್ ದ್ವೀಪಗಳಲ್ಲಿರುವ ಸ್ಥಳವಾಗಿದೆ.
Copenhagen
København | |
---|---|
Country | ಡೆನ್ಮಾರ್ಕ್ |
Region | Hovedstaden |
First mention | 11th century |
City Status | 13th century |
Government | |
• Mayor | Frank Jensen (S) |
Area | |
• Urban | ೪೫೫.೬೧ km೨ (೧೭೫.೯೧ sq mi) |
Population (2009 and 2010)[1] | |
• City | ೫,೨೮,೨೦೮ (೦೧−೦೧−೨,೦೧೦) |
• Density | ೩,೭೬೯/km೨ (೯,೭೬೦/sq mi) |
• Urban | ೧೧,೮೧,೨೩೯ (೦೧−೦೧−೨,೦೧೦) |
• Metro | ೧೮,೯೪,೫೨೧ ((೦೧−೦೧−೨,೦೧೦) ೩೪ closest municipalities) |
Time zone | UTC+1 (CET) |
• Summer (DST) | UTC+2 (CEST) |
Website | www.kk.dk/english |
11ನೆಯ ಶತಮಾನದಲ್ಲಿ ಮೊದಲಬಾರಿಗೆ ದಾಖಲಾದ ಕೋಪನ್ ಹ್ಯಾಗನ್ 15ನೆಯ ಶತಮಾನದಲ್ಲಿ ಡೆನ್ಮಾರ್ಕ್ ನ ರಾಜಧಾನಿಯಾಯಿತು ಮತ್ತು 17ನೆಯ ಶತಮಾನದಲ್ಲಿ ಕ್ರಿಶ್ಚಿಯನ್ IV ರ ಆಳ್ವಿಕೆಯಲ್ಲಿ ಅದು ಪ್ರಾಂತ್ಯದ ಪ್ರಮುಖ ಕೇಂದ್ರವಾಯಿತು. 2000ದಲ್ಲಿ, ಅಂತರರಾಷ್ಟ್ರೀಯ ಓರ್ಸಂಡ್ ಸೇತುವೆಯ ನಿರ್ಮಾಣಕಾರ್ಯವು ಮುಗಿದ ನಂತರ ಕೋಪೆನ್ ಹ್ಯಾಗೆನ್ ಹೆಚ್ಚುಹೆಚ್ಚು ಜನರನ್ನು ಒಂದುಗೂಡಿಸುವ ಓರ್ಸಂಡ್ ಪ್ರದೇಶದ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ, ಕೋಪನ್ ಹ್ಯಾಗನ್ ಮತ್ತು ಸ್ವೀಡಿಷ್ ನಗರವಾದ ಮಾಲ್ಮೋಗಳು ಕೂಡಿ ಒಂದು ಮೆಟ್ರೋಪಾಲಿಟನ್ ಪ್ರದೇಶವಾಗಿ ಬೆಳೆಯುವ ಪ್ರಕ್ರಿಯೆಯಲ್ಲಿವೆ. 50 ಕಿಲೋಮೀಟರ್ ಗಳ ತ್ರಿಜ್ಯಪರಿಧಿಯಲ್ಲಿ ಸುಮಾರು 2.7 ಮಿಲಿಯನ್ ನಿವಾಸಿಗಳನ್ನು ಹೊಂದಿರುವ ಕೋಪನ್ ಹ್ಯಾಗನ್ ಉತ್ತರ ಯೂರೋಪ್ ನ ಸಾಂದ್ರ ಜನಸಂಖ್ಯೆ ಹೊಂದಿದ ಪ್ರದೇಶಗಳಲ್ಲಿ ಒಂದಾಗಿದೆ. ಕೋಪನ್ ಹ್ಯಾಗನ್ ನಾರ್ಡಿಕ್ ದೇಶಗಳಲ್ಲಿ ಪ್ರವಾಸಿಗರನ್ನು ಅತಿ ಹೆಚ್ಚು ಅಕರ್ಷಿಸುವ ನಗರವಾಗಿದ್ದು 2007ರಲ್ಲಿ 1.3 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಯಶಸ್ವಿಯಾಗಿ ತನ್ನತ್ತ ಸೆಳೆದಿತ್ತು.[4]
ಕೋಪನ್ ಹ್ಯಾಗನ್ ಸಂಸ್ಕೃತಿ, ವ್ಯಾಪಾರ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಪ್ರಮುಖವಾದ ಪ್ರಾದೇಶಿಕ ಕೇಂದ್ರವಾಗಿರುವುದು ಹಲವಾರು ಅಂತರರಾಷ್ಟ್ರೀಯ ಸಮೀಕ್ಷೆಗಳ ಮೂಲಕ ಹಾಗೂ ಅರ್ಹತಾಶ್ರೇಣೀಕರಣ(rankings) ಮೂಲಕ ಸೂಚಿತವಾಗಿದೆ(ಕೆಳಗೆ ನೀಡಿರುವ ಇಂಟರ್ನ್ಯಾಷನಲ್ ರಾಂಕಿಂಗ್ಸ್ ನೋಡಿ) ಜೀವ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಸೌಕಾವಾಣಿಜ್ಯಗಳು ಮುಖ್ಯ ವಿಭಾಗಗಳಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯು ನಗರದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದು ಸೂಕ್ತವಾದ ಸ್ಥಳದಲ್ಲಿ ಇರುವುದರಿಂದಲೂ ಮತ್ತು ಅತ್ಯುತ್ತಮವಾದ ಸೌಕರ್ಯಗಳನ್ನು ಹೊಂದಿರುವುದರಿಂದಲೂ - ಸ್ಕಾಂಡಿನೇವಿಯಾ[5] ದಲ್ಲಿನ ವಿಮಾನ ನಿಲ್ದಾಣವು ನಗರದ ಕೇಂದ್ರಭಾಗದಿಂದ ಟ್ರೈನ್ ಮೂಲಕ ಕೇವಲ 14 ನಿಮಿಷಗಳಲ್ಲಿ ಕ್ರಮಿಸಬಹದಾಗಿದೆ - ಕೋಪನ್ ಹ್ಯಾಗನ್ ಪ್ರಾದೇಶಿಕ ಕಚೇರಿಗಳನ್ನು ಹೊಂದುವವರಿಗೆ ಮತ್ತು ಸಭೆಗಳನ್ನು (ಸಮ್ಮೇಳನಗಳನ್ನು) ನಡೆಸುವವರಿಗೆ ಪ್ರಾದೇಶಿಕ ಕೇಂದ್ರವಾಗಿ ಹೆಸರುವಾಸಿಯಾಗಿದೆ.[6]
ಕೋಪನ್ ಹ್ಯಾಗನ್ ಅತ್ಯುತ್ತಮ ಗುಣಮಟ್ಟದ ಜೀವನಕ್ಕೆ ಆಶ್ರಯವಾಗಿರುವ ನಗರಗಳಲ್ಲಿ ಒಂದೆಂಬುದನ್ನು ಆಗಾಗ್ಗೆ ಗುರುತಿಸಲಾಗಿದೆ.[7][8][9] ಅಲ್ಲದೆ ಜಗದ ಪರಿಸರಸ್ನೇಹಿ ವಾತಾವರಣವನ್ನು ಹೊಂದಿರುವ ನಗರಗಳಲ್ಲಿ ಒಂದೆಂದೂ ಪರಿಗಣಿಸಲಾಗಿದೆ. ಒಳಬಂದರಿನಲ್ಲಿನ ನೀರು ಈಜು ಹೊಡೆಯಲು ಯೋಗ್ಯವಾದಷ್ಟು ತಿಳಿಯಾಗಿದೆ, ಸುಮಾರು 36% ನಾಗರಿಕರು ತಮ್ಮ ಕೆಲಸಗಳಿಗೆ ತೆರಳಲು ಸೈಕಲ್ ಉಪಯೋಗಿಸುತ್ತಾರೆ ಹಾಗೂ ಈ ರೀತಿ ಸೈಕಲ್ ನಲ್ಲಿ ಅಲ್ಲಿನ ಜನರು ಪ್ರತಿದಿನ ಓಡಾಡುವ ಒಟ್ಟು ದೂರ 1.1 ಮಿಲಿಯನ್ ಕಿಲೋಮೀಟರ್ ಗಳು! ಮಿಲೆನಿಯಮ್ ನ ನಂತರದ ವರ್ಷಗಳಲ್ಲಿ ಕೋಪನ್ ಹ್ಯಾಗನ್ ನಾಗರಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಬಲವಾದ ಪುಷ್ಟಿ ನೀಡುವ ತಾಣವಾಗಿದ್ದು ಬೂಮ್ ಟೌನ್ ಎಂದೇ ವರ್ಣಿಸಲಾಗುತ್ತಿದೆ.[10] ಇದಕ್ಕೆ ಕಾರಣ ಭಾಗಶಃ ಸಾಂಸ್ಕೃತಿಕ ಸೌಲಭ್ಯಗಳ ಹಾಗೂ ಸವಲತ್ತುಗಳ ಮೇಲೆ ಹೂಡಿದ ಹೇರಳವಾದ ಬಂಡವಾಳದ ಮತ್ತು ಹೊಸ ಅಲೆಯ ಯಶಸ್ವಿ ವಿನ್ಯಾಸಕಾರರು, ಪಾಕಪ್ರವೀಣರು ಮತ್ತು ಶಿಲ್ಪಿಗಳ ಪ್ರವೇಶ.[11]