ಕೋನೇರು ಹಂಪಿ
From Wikipedia, the free encyclopedia
ಕೋನೇರು ಹಂಪಿ ಒಬ್ಬ ಚದುರಂಗ ಆಟಗಾರ್ತಿ. ಅವರು ೩೧ ಮಾರ್ಚ್ ೧೯೮೭ ರಂದು ಆಂಧ್ರ ಪ್ರದೇಶದ ಗುಡಿವಾಡದಲ್ಲಿ ಜನಿಸಿದರು.[1] . ಆಕೆ ಅಕ್ಟೋಬರ್ ೨೦೦೭ರಲ್ಲಿ ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು. ಆಕೆ ೨೬೦೦ ಎಲೊ ರ್ಯಾಂಕಿಂಗ್ ಪಡೆದು ಜುಡಿತ್ ಪೊಲ್ಗಾರ್ ನಂತರ ಇಷ್ಟು ಅಂಕ ಪಡೆದ ದ್ವಿತೀಯ ಮಹಿಳಾ ಚೆಸ್ ಆಟಗಾರ್ತಿ ಆದರು.[2][3]
ಕೋನೇರು ಹಂಪಿಯವರು ೨೦೦೨ರಲ್ಲಿ ಅತಿ ಕಿರಿಯ ವಯಸ್ಸಿನ ಮಹಿಳಾ ಗ್ರಾಂಡ್ಮಾಸ್ಟರ್ (ಏಕೈಕ ಮಹಿಳಳಾ ಗ್ರಾಂಡ್ಮಾಸ್ಟರ್) ಆದರು. ಆಗ ಆಕೆಯ ವಯಸ್ಸು ೧೫ವರ್ಷ, ೧ ತಿಂಗಳು, ೨೭ ದಿನಗಳಾಗಿತ್ತು, ಇದಕ್ಕೆ ಮೊದಲು ಈ ದಾಖಲೆ ಜುಡಿತ್ ಪೊಲ್ಗಾರ್ ಅವರ ಹೆಸರಿನಲ್ಲಿತ್ತು.[4]. ಹೌವ್ ಯಿಫಾನ್ ಅವರು ಈ ದಾಖಲೆಯನ್ನು ೨೦೦೮ರಲ್ಲಿ ಮುರಿದರು.