ಕೊಕೇನ್
ರಾಸಾಯನಿಕ ಯೌಗಿಕ / From Wikipedia, the free encyclopedia
ಕೊಕೇನ್ (ಬೆನ್ ಝಾಯ್ಲ್ ಮೀಥೈಲೆಕ್ ಗೊನಿನ್) ಕೋಕಾ ಗಿಡ[5] ದ ಎಲೆಗಳಿಂದ ದೊರೆಯುವ ಮಣಿಯ ಆಕಾರವುಳ್ಳ ಒಂದು ಟ್ರೋಪೇನ್ ವನಸ್ಪತಿ ಮೂಲತತ್ವದ ಸಸ್ಯಕ್ಷಾರ (ಆಲ್ಕ್ ಲಾಯ್ಡ್) ಆಲ್ಕಲಾಯ್ಡ್ ಗಳಿಗೆ ಅಂತ್ಯಪ್ರತ್ಯಯ (ಸಫಿಕ್ಸ್) ಆಗಿ ಸೇರಿಸುವ - ಏನ್ ನೊಂದಿಗೆ ಗಿಡದ ಹೆಸರಾದ ಕೋಕಾ ಸೇರಿ ಕೊಕೇನ್ ಎಂಬ ಹೆಸರಿನ ಉದ್ಭವವಾಯಿತು. ಕೊಕೇನ್ ಮೂಲ ನರಮಂಡಲವನ್ನು ಉತ್ತೇನಜಗೊಳಿಸುವ ಮತ್ತು ಹಸಿವೆಯನ್ನು ಕುಂಠಿತಗೊಳಿಸುವ ವಸ್ತುವಾಗಿದೆ. ನಿರ್ದಿಷ್ಟವಾಗಿ ಕೊಕೇನ್ ಸೆರೋತೋನಿನ್-ನೊರೆಪೆನ್ ಫ್ರೈನ್-ಡೋಪಮೈನ್ ಮರುಪ್ರಯೋಗಕ್ಕೆ ಪ್ರತಿರೋಧಕವಾಗಿದ್ದು, ಕ್ಯಾಟೆಕೋಲಮೈನ್ ವಾಹಕ ಜಲಸಸ್ಯ (ಎಕ್ಸೋಜಿನಸ್) ಲಿಗಾಂಡ್ ಗಳಂತಹವುಗಳ ಕಾರ್ಯಶೀಲತೆಗೆ ಪ್ರತಿರೋಧವೊಡ್ಡುತ್ತವೆ. ಮೀಸೋಲಿಂಬಿಕ್ (ಕೈಕಾಲುಗಳ ಒಳಪದರುಗಳ) ರಿವಾರ್ಡ್ ಪಾಥ್ ವೇ(ಚಲನಪಥ)ಯ ಮೇಲೆ ಪರಿಣಾಮ ಬೀರುವುದರ ಫಲವಾಗಿ ಕೊಕೇನ್ ಸೇವನೆ ಒಂದು ಚಟಪ್ರಚೋದಕ[6] ವಾಗುವುದು.
Systematic (IUPAC) name | |
---|---|
methyl (1R,2R,3S,5S)-3- (benzoyloxy)-8-methyl-8-azabicyclo[3.2.1] octane-2-carboxylate | |
Clinical data | |
ಗರ್ಭಧಾರಣೆಯ ವರ್ಗ | C |
ಕಾನೂನು ಸ್ಥಿತಿ | Controlled (S8) (AU) Schedule I (CA) Class A (UK) Schedule II (US) |
Dependence liability | High |
Routes | Topical, Oral, Insufflation, IV, PO |
Pharmacokinetic data | |
Bioavailability | Oral: 33%[1] Insufflated: 60[2]–80%[3] Nasal Spray: 25[4]–43%[1] |
ಚಯಾಪಚಯ | Hepatic CYP3A4 |
Half-life | 1 hour |
ವಿಸರ್ಜನೆ | Renal (benzoylecgonine and ecgonine methyl ester) |
Identifiers | |
CAS ಸಂಖ್ಯೆ | 50-36-2 |
ATC ಕೋಡ್ | N01BC01 R02AD03 (WHO), S01HA01 (WHO), S02DA02 (WHO) |
ಪಬ್ಕೆಮ್ | CID 5760 |
ಡ್ರಗ್ ಬ್ಯಾಂಕ್ | APRD00080 |
ಕೆಮ್ಸ್ಪೈಡರ್ | 10194104 |
Synonyms | methylbenzoylecgonine, benzoylmethylecgonine |
Chemical data | |
ರಾಸಾಯನಿಕ ಸೂತ್ರ | C17H21NO4 |
Mol. mass | 303.353 g/mol |
SMILES
| |
Physical data | |
ಕರಗುವ ಬಿಂದು | 195 °C (383 °F) |
ನೀರಿನಲ್ಲಿ ಕರಗುವಿಕೆ | 1800 mg/mL (20 °C) |
Y (what is this?) (verify) |
ವೈದ್ಯಕೀಯೇತರ ಉದ್ದೇಶಗಳಿಗಾಗಿ ಹಾಗೂ ಸರ್ಕಾರದ ಪರವಾನಗಿ ರಹಿತವಾಗಿ ಕೊಕೇನ್ ಹೊಂದುವಿಕೆ, ಬೆಳೆಯುವಿಕೆ ಮತ್ತು ವಿತರಿಸುವಿಕೆ ಕಾನೂನುಬಾಹಿರವೆಂದು ಜಗತ್ತಿನ ಎಲ್ಲೆಡೆಗಳಲ್ಲೂ ಘೋಷಿತವಾಗಿದೆ. ಕೊಕೇನ್ ನನ್ನು ಮುಕ್ತವಾಗಿ ಎಲ್ಲಯೂ ವಿತರಿಸಬಾರದು, ಮಾರಬಾರದು ಎಂಬ ಕಾನೂನು ಎಲ್ಲೆಡೆ ಇದ್ದರೂ, ಮಹತ್ತರವಾದ ದಂಡ ವಿಧಿಸುವಿಕೆ ಸಕಲ ರಾಷ್ಟ್ರಗಳಲ್ಲಿ ಜಾರಿಯಲ್ಲಿದ್ದರೂ, ಕೊಕೇನ್ ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಯಕ್ತಿಕ ನೆಲೆಗಳಲ್ಲಿ ವಿಸ್ತ್ರತವಾಗಿ ಉಪಯೋಗಿಸಲ್ಪಡುತ್ತಿದೆ.