ಕೇಂದ್ರೀಯ ಗುಪ್ತಚರ ಸಂಸ್ಥೆ
From Wikipedia, the free encyclopedia
ಕೇಂದ್ರೀಯ ಗುಪ್ತಚರ ಸಂಸ್ಥೆ (CIA ) ರಾಷ್ಟ್ರೀಯ ಭದ್ರತೆ ಒದಗಿಸುವ ಮತ್ತು ವರಿಷ್ಠ ನೀತಿ ನಿರೂಪಣಕಾರರಿಗೆ ಸೂಕ್ಷ್ಮ ಗುಪ್ತಚರ ಒದಗಿಸುವ ಅಮೇರಿಕ ಸಂಯುಕ್ತ ಸಂಸ್ಥಾನ ಸರ್ಕಾರದ ನಾಗರೀಕ ಗುಪ್ತಚರ ಸಂಸ್ಥೆ. CIAಯು ಸಂಯುಕ್ತ ಸಂಸ್ಥಾನದ ಅಧ್ಯಕ್ಷರ ಮನವಿ ಮೇರೆಗೆ ತನ್ನನ್ನು ನಿಗೂಢ ಚಟುವಟಿಕೆಗಳಲ್ಲಿ ಕೂಡಾ ತೊಡಗಿಸಿಕೊಳ್ಳುತ್ತವೆ.[5]
Agency overview | |
---|---|
Formed | September 18, 1947 |
Preceding agency |
|
Headquarters | Langley, Virginia United States 38.951796°N 77.146586°W / 38.951796; -77.146586 |
Employees | Classified[1] 20,000 estimated[2] |
Annual budget | Classified[3][4] $27 billion in 1998[1] |
Agency executives |
|
Website | www.cia.gov |
ಅದು ಎರಡನೆಯ ಜಾಗತಿಕ ಮಹಾಯುದ್ಧದ ಅವಧಿಯಲ್ಲಿ ಸಂಯುಕ್ತ ಸಂಸ್ಥಾನದ ಮಿಲಿಟರಿ ಶಾಖೆಗಳ ನಡುವೆ ಗೂಡಚರ್ಯೆಯನ್ನು ಸಂಯೋಜಿಸಲು ರಚಿಸಲಾಗಿದ್ದ ಆಫೀಸ್ ಆಫ್ ಸ್ಟ್ರ್ಯಾಟೆಜಿಕ್ ಸರ್ವಿಸಸ್ (OSS)ನ ಉತ್ತರಾಧಿ ಸಂಸ್ಥೆ. "ತನ್ನ ದೇಶೀಯ ನೆಲದಲ್ಲಾಗಲೂ ಅಥವಾ ವಿದೇಶಿ ನೆಲಗಳಲ್ಲಾಗಲೀ ಯಾವುದೇ ಪೋಲೀಸ್ ಹೊಂದಿರದ ಅಥವಾ ಕಾನೂನು ಪಾಲನಾ ಕಾರ್ಯಗಳಿಲ್ಲ"ದಂತೆ ರಾಷ್ಟ್ರೀಯ ಭದ್ರತಾ ಕಾಯಿದೆ ೧೯೪೭ , CIAಯನ್ನು ಸ್ಥಾಪಿಸಿತು. ಒಂದು ವರ್ಷದ ಇದರ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ,[clarification needed] "ತನಗೆ ಇಷ್ಟವಿಲ್ಲದ ದೇಶಗಳಿಗೆ ನುಸಿ ಹೊಡೆಯುವ ಸ್ಯಾಬೊಟೇಜ್, ಇಷ್ಟವಾದ ದೇಶಗಳನ್ನು ಪೋಷಿಸುವಂತ ಆಂಟಿ ಸ್ಯಾಬೊಟೇಜ್, ವಿಧ್ವಂಸಕ ಕೃತ್ಯ ವಿಚ್ಛಿದ್ರಕಾರಿ ಕುಕೃತ್ಯ, ಭೂಗತ ಪ್ರತಿರೋಧಿ ಚಳುವಳಿ, ಗೆರಿಲ್ಲಾ ಕಾದಾಟಗಳು, ನಿರಾಶ್ರಿತ ವಿಮೋಚನಾ ಚಳುವಳಿಗಳ ದಮನ ಮತ್ತು "ಮುಕ್ತ ಜಗತ್ತಿನ ಬೆದರಿಕೆಗೆ ಒಳಗಾದ" ಎಂದು ಹೇಳಲಾಗಿರುವ ದೇಶಗಳಲ್ಲಿ ದೇಶೀಯ ಕಮ್ಯುನಿಸ್ಟ್ ವಿರೋಧಿ ಶಕ್ತಿಗಳಿಗೆ ಬೆಂಬಲ ಕೊಡುವುದು ಮುಂತಾದ ಎತ್ತಂಗಡಿ ಕಾರ್ಯಾಚರಣೆಗಳಾ ಅಧಿಕಾರ ವಹಿಸಿಕೊಡಲಾಯಿತು".[6]
ಈ CIAಯ ಪ್ರಾಥಮಿಕ ಕೆಲಸವೆಂದರೆ ವಿದೇಶಿ ಸರ್ಕಾರಗಳ ಮೇಲೆ ನಿಗಾ ಇಡುವುದು, ಕಾರ್ಪೊರೇಷನ್ಗಳು ಮತ್ತು ವ್ಯಕ್ತಿಗಳಾ ಬಗ್ಗೆ ಮಾಹಿತಿ ಸಂಗ್ರಹಿಸಿ ಸಾರ್ವಜನಿಕ ನೀತಿ ನಿರೂಪಣಾಕಾರರಿಗೆ ಸಲಹೆ ಕೊಡುವುದು. ಈ ಏಜೆನ್ಸಿ ತನ್ನ ವಿಶೇಷ ಕಾರ್ಯವಿಭಾಗದ ಮೂಲಕ ನಿಗೂಢ ಕುಟಿಲ ಕಾರ್ಯಾಚರಣೆ ಮತ್ತೆ ಅರೆಮಿಲಿಟರಿ ಚಟುವಟಿಕೆಗಳನ್ನು ನಡೆಸುತ್ತವೆ ಮತ್ತು ವಿದೇಶಿ ರಾಜಕೀಯ ಒತ್ತಡ ಹೇರುತ್ತದೆ. ೨೦೦೪ ರಲ್ಲಿ CIA ಮತ್ತು ಅದರ ಜವಾಬ್ಧಾರಿಗಳು ಗಣನೀಯವಾಗಿ ಬದಲಾದವು ಡಿಸೆಂಬರ್ ೨೦೦೪ ರ ಮೊದಲು CIA ಸಂಯುಕ್ತ ಸಂಸ್ಥಾನ ಸರ್ಕಾರದ ಪ್ರಮುಖ ಗುಪ್ತಚರ ಸಂಸ್ಥೆಯಾಗಿತ್ತು, ತನ್ನ ಕೆಲಸವನ್ನಷ್ಟೇ ಅಲ್ಲ, ಸಮಸ್ತ US ಇಂಟಲಿಜೆನ್ಸ್ ಕಮಿಟಿಯ(IC) ಚಟುವಟಿಕೆಗಳನ್ನು ಸಂಯೋಜಿಸುತ್ತಿತ್ತು ಮತ್ತು ಅದರ ಪಾರುಪತ್ರ ನೋಡಿಕೊಳ್ಳುತ್ತಿತ್ತು. ೨೦೦೪ ರ ಇಂಟಲಿಜೆನ್ಸ್ ರಿಫಾರ್ಮ್ ಮತ್ತು ಟೆರರಿಸಂ ಪ್ರಿವೆನ್ಷನ್ ಆಕ್ಟ್, ಡೈರೆಕ್ಟರ್ ಆಫ್ ನ್ಯಾಷನಲ್ ಇಂಟಲಿಜೆನ್ಸ್ (DNI) ಅನ್ನು ಸೃಷ್ಟಿಸಿತು, ಇದು ಸರ್ಕಾರದ ಮತ್ತು IC-ವೈಡ್ ಕಾರ್ಯಗಳನ್ನು ವಹಿಸಿಕೊಂಡಿತು. DNIಯು ICಯನ್ನು ನಿರ್ವಹಿಸುತ್ತದೆಯಾದ್ದರಿಂದ ಇಂಟಲಿಜೆನ್ಸ್ ಸೈಕಲ್. DNIಗೆ ಹಸ್ತಾಂತರಗೊಂಡ ೧೬ IC ಏಜೆನ್ಸಿಗಳ ಸಾಮೀಪ್ಯದ ಅಭಿಪ್ರಾಯಗಳಿಂದ ಒಂದು ಅದಾಜು ತಯಾರಿಕೆ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಿಗೆ ಸಂಕ್ಷಿಪ್ತ ವರದಿ ತಯಾರಿಸಿ ಕೊಡುವುದಾಗಿದೆ.
ಇಂದು CIAಗೆ ಬೇರೆ ದೇಶಗಳ ಗುಪ್ತಚರ ಸಂಸ್ಥೆಗಳ ಕಾರ್ಯಗಳಿಗೆ ಸಾಮ್ಯವಿರುವಂತಹ ಅನೇಕ ಕಾರ್ಯಗಳಿವೆ; ವಿದೇಶಿ ಗುಪ್ತಚರ ಸಂಸ್ಥೆಗಳೊಂದಿನ ಸಂಬಂಧ ನೋಡಿ. CIAಯ ಪ್ರಧಾನಕಚೇರಿ ಮೆಕ್ಲೀನ್ ಯೂನಿಕಾರ್ಪೊರೇಟೆಡ್ ವರ್ಜೀನಿಯಾದ ಫೇರ್ಫ್ಯಾಕ್ಸ್ ಕೌಂಟಿಯ, ವಾಷಿಂಗ್ಟನ್, D.C.ಯ ಪಶ್ಚಿಮಕ್ಕೆ ಕೆಲ ಮೈಲುಗಳ ದೂರದಲ್ಲಿರುವ ಪೊಟೊಮ್ಯಾಕ್ ನದಿ ದಂಡೆಯಲ್ಲಿರುವ ಲ್ಯಾಂಗ್ಲಿಯಲ್ಲಿ ಇದೆ.
ಕೆಲವು ಸಲ ಸರ್ಕಾರದಲ್ಲಿ ನಯವಾಗಿ ಮತ್ತು ಮಿಲಿಟರಿಯ ರೂಢಿಗತ ಅಡಕ ಭಾಷೆಯಲ್ಲಿ CIAಯನ್ನು ಇತರೆ ಸರ್ಕಾರಿ ಏಜೆನ್ಸಿಗಳು (OGA ) ಎಂದು ಕರೆಯಲಾಗುತ್ತದೆ, ನಿರ್ಧಿಷ್ಟ ಪ್ರದೇಶವೊಂದರಲ್ಲಿ OGA ನಡೆಸುವ ನಿರ್ಧಿಷ್ಟ ಚಟುವಟಿಕೆಗಳು ಎಲ್ಲರಿಗೂ ಗೊತ್ತಿರುವ ಗುಟ್ಟು.[7][8] ಇದಕ್ಕಿರುವ ಇತರೆ ಹೆಸರುಗಳೆಂದರೆ ದಿ ಕಂಪನಿ [9][10][11][12] ಹಾಗೂ ದಿ ಏಜೆನ್ಸಿ .