ಕು ಕ್ಲುಕ್ಸ್ ಕ್ಲಾನ್
From Wikipedia, the free encyclopedia
ಕು ಕ್ಲುಕ್ಸ್ ಕ್ಲಾನ್ ಯನ್ನು (ಮೊದಲನೆಯ ಮಹಾಯುದ್ಧದ ಬಳಿಕ ಹೊರರಾಷ್ಟ್ರಗಳ ಪ್ರಭಾವದ ವಿರುದ್ಧ ಹೋರಾಡುವ ಸಲುವಾಗಿ ಅಮೆರಿಕಾದಲ್ಲಿ ಕಟ್ಟಿದ ಈ ಹೆಸರಿನ ಗುಪ್ತ ಸಂಘ), ಹಲವು ಬಾರಿ KKK ಎಂದು ಸಂಕ್ಷೇಪಗೊಳಿಸಲಾಗುತ್ತದೆ ಮತ್ತು ಲೋಕಾಭಿರಾಮವಾಗಿ ಕ್ಲಾನ್ ಎಂದು ಪರಿಚಿತ, ಇದು ಹಲವು ಗತ ಮತ್ತು ವರ್ತಮಾನ ಕಾಲದ ಅತಿ ನ್ಯಾಯವಾದ ದ್ವೇಷ ಗುಂಪುಗಳ ಹೆಸರು[2] ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಅವರು ಸ್ಪಷ್ಟವಾಗಿ ಹೇಳಿದ ಉದ್ದೇಶವೇನೆಂದರೆ ಹಿಂಸೆ ಮತ್ತು ಭಯದಿಂದ ಶ್ವೇತ ಅಮೇರಿಕನ್ನರ ಇತರ ಹಿತಾಸಕ್ತಿಗಳನ್ನು ಮತ್ತು ಹಕ್ಕುಗಳನ್ನು ಕಾಪಾಡುವುದು. ಮೊದಲಿಗೆ ಅಂತಹ ಸಂಘ ಸಂಸ್ಥೆಗಳು ದಕ್ಷಿಣದ ರಾಜ್ಯಗಳಲ್ಲಿ ಆರಂಭಗೊಂಡವು ಕೊನೆಗೆ ಇವು ರಾಷ್ಟ್ರೀಯ ಧ್ಯೇಯವಾಗಿ ಬೆಳೆಯಿತು. ಅವರು ಶ್ವೇತ ಸಾಂಪ್ರದಾಯಿಕ ಮಾದರಿಗಳಿಂದ ಕೂಡಿದ ರಗ್ಗುಗಳು, ಮುಖವಾಡಗಳು ಮತ್ತು ಕೋನಾಕಾರದ ಟೋಪಿಗಂತಹ ವೇಷಭೂಷಣಗಳನ್ನು ವೃದ್ದಿಪಡಿಸಿದ್ದರು. ಕೆಕೆಕೆ ಟೆರೆರಿಸಮ್ ಬಳಸುವ ದಾಖಲೆಯನ್ನು ಹೊಂದಿದೆ,[3][4] ಆಫ್ರಿಕನ್ ಅಮೇರಿಕನ್ನರನ್ನು ಹಿಂಸೆ ಮತ್ತು ಪೀಡಿಸುವ ಮೂಲಕ ಗಲ್ಲಿಗೇರಿಸಿ ಸಾಯಿಸುತ್ತಿದ್ದರು ಮತ್ತು ಯಹೂದಿಗಳು ಮತ್ತು ಇತರ ಅಲ್ಪಸಂಖ್ಯಾತರು ರೋಮನ್ ಕ್ಯಾಥೋಲಿಕ್ಸ್ ಮತ್ತು ಕಾರ್ಮಿಕ ಒಕ್ಕೂಟಗಳನ್ನು ವಿರೋಧಿಸಿ ಹೆದರಿಸುತ್ತಿದ್ದರು.
In Existence | |
---|---|
1st Klan | 1865–1870s |
2nd Klan | 1915–1944 |
3rd Klan1 | since 1946 |
Members | |
1st Klan | 550,000 |
2nd Klan | between 3 and 6 million[1] (peaked in 1920-1925 period) |
Properties | |
Origin | United States of America |
Political ideology | White supremacy White nationalism |
Political position | Far right |
Religion | Protestant Christian |
1The ೩rd Klan is decentralized, with approx. ೧೭೯ chapters. |
ಇಂದು, ಹೆಚ್ಚಿನ ಬಹುಸಂಖ್ಯಾತ ಮೂಲಗಳು ಕ್ಲಾನ್ನನ್ನು ಒಂದು "ವಿದ್ರೋಹಕಾರಕ ಅಥವಾ ಭಯೋತ್ವಾದಕ ಸಂಸ್ಥೆ" ಎಂದು ಪರಿಗಣಿಸುತ್ತದೆ.೦/}[5][6][7] ೧೯೯೯ರಲ್ಲಿ, ಕ್ಯಾರ್ಲೆಸ್ಟೊನ್, ದಕ್ಷಿಣ ಕ್ಯಾರೊಲಿನಾದ ನಗರಪಾಲಿಕೆ ಸಭೆ ಕ್ಲಾನ್ ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸುವ ಒಂದು ನಿರ್ಣಯವನ್ನು ಜಾರಿಗೊಳಿಸಿತು.[8] ಲ್ಯೂಯಿಸ್ವಿಲ್ಲ್ ವಿಶ್ವವಿದ್ಯಾನಿಲಯದಲ್ಲಿ ಒಬ್ಬ ಪ್ರಾಧ್ಯಾಪಕ ಕ್ಲಾನ್ ಒಂದು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಲಾಗಿದೆ ಆದ್ದರಿಂದ ಅದನ್ನು ಕಾಲೇಜು ಆವರಣದಿಂದ ನಿಷೇಧಿಸಬೇಕು ಎಂದು ಪ್ರಚಾರ ಮಾಡಲು ಆರಂಭಿಸಿದ್ದಾಗ, ೨೦೦೪ರಲ್ಲಿ ಅದೇ ರಿಟಿಯ ಪ್ರಯತ್ನಗಳನ್ನು ಮಾಡಲಾಯಿತು.[9] ಏಪ್ರಿಲ್ ೧೯೯೭ರಲ್ಲಿ, FBI ಗೂಡಾಚಾರಿಗಳು ಡಲ್ಲಾಸ್ನಲ್ಲಿ ಕು ಕ್ಲುಕ್ಸ್ ಕ್ಲಾನ್ನ ನಿಜವಾದ ವೀರ ಯೋಧರ (ಟ್ರು ನೈಟ್ಸ್) ನಾಲ್ಕು ಜನ ಸದಸ್ಯರನ್ನು ಡಕಾಯಿತಿ ಮಾಡುವ ಮತ್ತು ಸ್ವಾಭಾವಿಕ ಅನಿಲ ಸಂರಕ್ಷಣ ಸ್ಥಾವರವನ್ನು ಸ್ಫೋಟಿಸಿ ನಾಶಮಾಡುವ ಪಿತೂರಿಗಾಗಿ ಬಂಧಿಸಲಾಯಿತು.[10]
ಮೊದಲ ಕ್ಲಾನ್ ೧೮೬೫ರಲ್ಲಿ ಕಂಡು ಹಿಡಿಯಲಾಯಿತು, ಅದನ್ನು ಒಕ್ಕೂಟದ-ಸದಸ್ಯ ಸೈನ್ಯದ ನಿಪುಣ ಟೆನ್ನೆಸ್ಸ್ ಕಂಡು ಹಿಡಿದನು. ದಕ್ಷಿಣದ ಉದ್ದಗಲಕ್ಕೂ ಕ್ಲಾನ್ ಗುಂಪುಗಳು ಹರಡಿವೆ. ಅಮೇರಿಕದ ಅಸೈನಿಕ ಯುದ್ಧದ ಪರಿಣಾಮದಲ್ಲಿ ಬಿಳಿಯರ ಶ್ವೇತ ಪ್ರಾಧಾನ್ಯ ಹಿಂತಿರುಗಿಸುವುದು ಕ್ಲಾನ್ನ ಉದ್ದೇಶ. ಕ್ಲಾನ್ ಹಲ್ಲೆ ಮಾಡುವುದು, ಕೊಲೆ ಮಾಡುವುದು ಮತ್ತು ಮುಕ್ತ ಮನುಷ್ಯರಲ್ಲಿ ಭಯ ಹುಟ್ಟಿಸುವ ಮೂಲಕ ಪುನರ್ನಿರ್ಮಾಣವನ್ನು ಮತ್ತು ರಿಪಬ್ಲಿಕನ್ ಪಾರ್ಟಿಯ ಒಳಗೆ ಬಿಳಿಯರ ಪ್ರಗತಿಪರಗಳನ್ನು ವಿರೋಧಿಸಿತು. ೧೮೭೦ ಮತ್ತು ೧೮೭೧ರಲ್ಲಿ ಸಂಯುಕ್ತ ರಾಷ್ಟ್ರದ ಸರ್ಕಾರ ಫೊರ್ಸ್ ಆಕ್ಟ್ನ್ನು ಜಾರಿಗೊಳಿಸಿತು, ಅವುಗಳನ್ನು ಕ್ಲಾನ್ ಅಪರಾಧಗಳಿಗೆ ಕಾನೂನು ಕ್ರಮ ಜರುಗಿಸಲು ಬಳಸಲಾಯಿತು. ಕ್ಲಾನ್ ಅಪರಾಧಗಳ ವಿಚಾರಣೆ ಮತ್ತು ಫೊರ್ಸ್ ಕಾಯಿದೆಯ ಚಲಾವಣೆಯು ಕ್ಲಾನ್ ಚಟುವಟಿಕೆಗಳನ್ನು ತಡೆಹಿಡಿಯಿತು. ೧೮೭೪ರಲ್ಲಿ ಮತ್ತು ನಂತರದಲ್ಲಿ, ಆದ್ಯಾಗಿಯೂ, ಹೊಸದಾಗಿ ಸಂಘಟಿಸಿದ ಮತ್ತು ಮುಕ್ತವಾಗಿ ಕ್ರಿಯಶೀಲವಾದ ಅರೆಸೈನಿಕ ಸಂಸ್ಥೆಗಳಾದ ವೈಟ್ ಲೀಗ್ ಮತ್ತು ರೆಡ್ ಶರ್ಟ್ಸ್ ಪ್ರಜಾಪ್ರಭುತ್ವವಾದಿ ಮತದಾನ ವತ್ತು ಕಛೇರಿಯ ಹೊರಗೆ ರಿಪಬ್ಲಿಕನ್ಗಳನ್ನು ನೆಡೆಸುವರನ್ನು ಗುರಿಯಾಗಿಸಿ ಕೊಂಡು ಹಿಂಸೆಯ ಮತ್ತೊಂದು ಹಂತವನ್ನು ಆರಂಭಿಸಿತು. ಇವುಗಳು ೧೯ನೆ ಮತ್ತು ೨೦ನೆ ಶತಮಾನದ ಆರಂಭದಲ್ಲಿ ಶ್ವೇತ ಸಂಪ್ರದಾಯವಾದಿ ಪ್ರಜಾಪ್ರಭುತ್ವವಾದಿಗಳು ದಕ್ಷಿಣ ರಾಜ್ಯಗಳಲ್ಲಿ ರಾಜಿಕೀಯ ಅಧಿಕಾರವನ್ನು ಪುನಃಪಡೆಯಲು ಕೊಡುಗೆ ನೀಡಿದವು.
೧೯೧೫ರಲ್ಲಿ, ಎರಡನೆಯ ಕ್ಲಾನ್ನನ್ನು ಕಂಡು ಹಿಡಯಲಾಯಿತು. ಯುದ್ಧ ನಂತರದ ಸಾಮಾಜಿಕ ಆತಂಕಗಳ ಕಾಲದಲ್ಲಿ ಇವು ಶೀಘ್ರವಾಗಿ ಬೆಳೆದವು, ಆ ಸಮಯದಲ್ಲಿ ಉತ್ತರದಲ್ಲಿನ ಕೈಗಾರಿಕರಣ, ದಕ್ಷಿಣದ ಮತ್ತು ಪೂರ್ವ ಯುರೋಪ್ ವಲಸೆಗಾರ ಅಸಂಖ್ಯಾತ ಅಲೆಗಳನ್ನು ಮತ್ತು ದಕ್ಷಿಣ ಕರಿಯರು ಮತ್ತು ಬಿಳಿಯರ ಮಹಾ ವಲಸೆಯನ್ನು ಆಕರ್ಷಿಸಿತು. ಎರಡನೆಯ KKK ವರ್ಣಭೇದ ನೀತಿ, ಕ್ಯಾಥೋಲಿಕ್ ವಿರೋಧಿ ನೀತಿ, ಸಮತಾವಾದ-ವಿರೋಧಿ ನೀತಿ, ಸಹಜ ಜ್ಞಾನಸಿದ್ದಾಂತ, ಮತ್ತು ಯಹೂದ್ಯಿ-ವಿರೋಧಿ ನೀತಿಗಳನ್ನು ಭೋಧಿಸಿತು. ಕೆವು ಸ್ಥಳೀಯ ಗುಂಪುಗಳು ನ್ಯಾಯ ವಿಚಾರಣೆಯಿಲ್ಲದೆ ಗಲ್ಲಿಗೇರಿಸುವಿಕೆಗಳು, ಖಾಸಗಿ ಮನೆಗಳ ಮೇಲೆ ದಾಳಿಗಳಲ್ಲಿ ಭಾಗವಹಿಸಿದವು ಮತ್ತು ಇತರೆ ಹಿಂಸಕಾರಕ ಚಟುವಟಿಕೆಗಳನ್ನು ನೆಡೆಸಿದವು. ಕ್ಲಾನ್ ಅದರ ಅತಿ ಹೆಚ್ಚು ಕೊಲೆಗಳು ಮತ್ತು ಹಿಂಸೆಯ ಕ್ರಿಯೆಗಳನ್ನು ನ್ಯಾಯ ನಿರ್ಲಕ್ಷ್ಯದ ಸಾಂಪ್ರದಾಯವನ್ನು ಹೊಂದಿದ್ದ ದಕ್ಷಿಣದಲ್ಲಿ ನೆಡೆಸಿತು.[11]
ಎರಡನೆಯ ಕ್ಲಾನ್ ರಾಷ್ಟ್ರೀಯ ಮತ್ತು ರಾಜ್ಯ ವಿನ್ಯಾಸವನ್ನು ಹೊಂದಿದ, ಒಂದು ಅಧಿಕೃತ ಸೋದರರ ಸಂಸ್ಥೆ. ೧೯೨೦ರ ಮಧ್ಯದಲ್ಲಿ ಅದರ ಉತ್ತುಂಗದಲ್ಲಿ, ಸಂಸ್ಥೆಯು ರಾಷ್ಟ್ರದ ಆರ್ಹ ಜನಸಂಖ್ಯೆಯ ಸುಮಾರು ಶೇ ೧೫ರಷ್ಟನ್ನು ಒಳಗೊಂಡಿತ್ತು, ಅಂದಾಜು ೪–೫ ಮಿಲಿಯನ್ ಪುರುಷರು.[12] ಅಂತರಿಕ ವಿಭಜನೆಗಳು ಮತ್ತು ಬಾಹ್ಯ ವಿರೋಧ ಸದಸ್ಯತ್ವದಲ್ಲಿ ಒಂದು ತೀಕ್ಷಣವಾದ ಇಳಿಕೆಯನ್ನು ತಂದಿತು, ಅದು ೧೯೩೦ರಷ್ಟರಲ್ಲಿ ಸುಮಾರು ೩೦,೦೦೦ ಇಳಿದಿತ್ತು. ಕ್ಲಾನ್ನ ಜನಪ್ರಿಯತೆ ಮಹಾ ಆರ್ಥಿಕ ಮುಗ್ಗಟ್ಟು ಮತ್ತು ಮಹಾ ಯುದ್ಧ IIರ ಸಮಯದಲ್ಲಿ ಮತ್ತಷ್ಟು ಕುಸಿಯಿತು.[13]
ಪೌರ ಹಕ್ಕುಗಳ ಚಳುವಳಿ ಮತ್ತು ಏಕೀಕರಣವನ್ನು ವಿರೋಧಿಸುವ ಹಲವು ಸ್ವಾತಂತ್ರ ಗುಂಪುಗಳ ಮೂಲಕ ಕು ಕ್ಲುಕ್ಸ್ ಕ್ಲಾನ್ನ ಹೆಸರನ್ನು ಉಪಯೋಗಿಸಲಾಗುತ್ತಿತ್ತು, ವಿಶೇಷವಾಗಿ ೧೯೫೦ರ ಮತ್ತು ೧೯೬೦ರಲ್ಲಿ. ಆ ಸಮಯದಲ್ಲಿ, ಅವರು ಪದೇಪದೇ ದಕ್ಷಿಣದ ಪೋಲಿಸ್ ಇಲಾಖೆಯ ಜೊತೆ ಒಪ್ಪಂದಗಳ ನಕಲಿ ದಾಖಲೆ ಸೃಷ್ಟಿಸಿದರು, ಬಿರ್ಮಿಂಘಮ್, ಅಲಬಾಮದಲ್ಲಿ; ಅಥವಾ ಗವರ್ನರ್ರ ಕಛೇರಿಗಳ ಜೊತೆಯ ಹಾಗೆ, ಅಲಬಾಮದ ಜಾರ್ಜ್ ವಾಲ್ಲಸ್ ಹಾಗೆ.[14] ಪೌರ ಹಕ್ಕುಗಳ ಕಾರ್ಯಕರ್ತರ ಮತ್ತು ಬಿರ್ಮಿಂಗ್ಹ್ಯಾಮ್ನಲ್ಲಿನ 16ನೆ ರಸ್ತೆಯ ಬಾಪ್ಟಿಸ್ಟ್ ಚರ್ಚಿನ ಬಾಂಬು ಎಸೆತದಲ್ಲಿ ಮಕ್ಕಳ ಸಾವು[15], NAACP ಸಂಘಟಕ ಮೆಡ್ಗರ್ ಎವೆರ್ಸ್ ಹತ್ಯೆ[16], ಮತ್ತು ಮೂರು ಪೌರ ಹಕ್ಕುಗಳ ಕಾರ್ಯಕರ್ತರ ಕೊಲೆಗಳಲ್ಲಿ KKK ಗುಂಪಿನ ಹಲವು ಸದಸ್ಯರನ್ನು ಕೊಲೆಯ ಅಪರಾಧಿಯೆಂದು ತೀರ್ಮಾನಿಸಲಾಯಿತು.[17] ಇಂದು, ಹೆಚ್ಚು ಕಡಿಮೆ ದೇಶಾದ್ಯಂತ ೫,೦೦೦[6]–೮,೦೦೦ ಸದಸ್ಯರನ್ನು ಹೊಂದಿದ ೧೫೦ ಕ್ಲಾನ್ ಸಂಘಗಳಿವೆ ಎಂದು ಸಂಶೋದಕರು ಅಂದಾಜು ಮಾಡುತ್ತಾರೆ.[ಸೂಕ್ತ ಉಲ್ಲೇಖನ ಬೇಕು]