ಕಲೋನ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Köln Cologne | ||
Cologne skyline, with the Groß St. Martin, Cologne Cathedral, and the Hohenzollernbrücke | ||
ನಿರ್ದೇಶಾಂಕಗಳು | 50°57′N 6°58′E | |
Administration | ||
Country | ಜರ್ಮನಿ | |
ರಾಜ್ಯ | North Rhine-Westphalia | |
Admin. region | Cologne | |
District | Urban district | |
Lord Mayor | Jürgen Roters (SPD) | |
Basic statistics | ||
Area | 405.15 km2 (156.43 sq mi) | |
Elevation | ೩೭ m (121 ft) | |
Population | ೧೦,೨೪,೩೭೩ (೩೧ ಡಿಸೆಂಬರ್ ೨೦೧೨)[1] | |
- Density | ೨,೫೨೮ /km2 (೬,೫೪೮ /sq mi) | |
Founded | 38 BC | |
Other information | ||
Time zone | CET/CEST (UTC+1/+2) | |
Licence plate | K | |
Postal codes | 50441–51149 | |
Area codes | 0221, 02203 (Porz) | |
Website | www.stadt-koeln.de |
ಕಲೋನ್ (German: [Köln] Error: {{Lang}}: text has italic markup (help), pronounced [ˈkœln] ( listen); ಕೋಲ್ಷ್ ಭಾಷೆಯಲ್ಲಿ: ಕೋಲ್ಲೆ ಟೆಂಪ್ಲೇಟು:IPA2) ಜರ್ಮನಿಯ ನಾಲ್ಕನೆಯ ಅತಿ ದೊಡ್ಡ ನಗರ (ಬರ್ಲಿನ್, ಹ್ಯಾಂಬರ್ಗ್ ಮತ್ತು ಮ್ಯುನಿಕ್ ನಂತರ), ಮತ್ತು ಜರ್ಮನಿಯ ಒಕ್ಕೂಟ (ಫೆಡೆರಲ್) ರಾಷ್ಟ್ರಉತ್ತರ ರೈನ್-ಪಶ್ಚಿಮ ಫಾಲಿಯಾ ಮತ್ತು ರೈನ್-ರರ್ ಮೆಟ್ರೋಪಾಲಿಟನ್ ಪ್ರದೇಶಗಳ ಭಾಗಗಳ ಅತಿ ದೊಡ್ಡ ನಗರವಾಗಿದ್ದು, ಯೂರೋಪ್ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಪ್ರಮುಖವಾದ ನಗರಗಳಲ್ಲಿ ಒಂದಾಗಿದ್ದು, ಹತ್ತು ಮಿಲಿಯನ್ ನಿವಾಸಿಗಳಿಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ಇದು ಜರ್ಮನಿಯ ಪುರಾತನ ನಗರಗಳಲ್ಲಿ ಒಂದಾಗಿದ್ದು, ಕ್ರಿಸ್ತಪೂರ್ವ 38ರಲ್ಲಿ ಯುಬೈರಿಂದ ಸ್ಥಾಪಿಸಲ್ಪಟ್ಟಿತು ಇದರ ಹೆಸರು ರೋಮನ್ ವಸಾಹತಾದ ಕಲೋನಿಯಾ ಕ್ಲಾಡಿಯಾ ಅರಾ ಅಗ್ರಿಪ್ಪಿನೆನ್ಸಿಯಂ ನಿಂದ ವ್ಯುತ್ಪತ್ತಿ ಹೊಂದಿದುದಾಗಿದೆ.
ಕಲೋನ್ ರೈನ್ ನದಿಯ ದಂಡೆಯ ಮೇಲಿದೆ. ನಗರದ ಪ್ರಸಿದ್ಧವಾದ ಕಲೋನ್ ಕ್ಯಾಥೆಡ್ರಲ್ (ಕಾಲ್ನರ್ ಡಾಮ್ ) ಕ್ಯಾಥೋಲಿಕ್ ಕಲೋನ್ ನ ಆರ್ಕ್ ಬಿಷಪ್ ರ ಪೀಠವನ್ನು ಹೊಂದಿದೆ. ಕಲೋನ್ ವಿಶ್ವವಿದ್ಯಾಲಯ (ಯೂನಿವರ್ಸಿಟಾಟ್ ಝು ಕಲೋನ್ ) ಯೂರೋಪ್ ನ ಅತಿ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಒಂದು.
ಕಲೋನ್ ರೈನ್ ಲ್ಯಾಂಡ್ ನ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದೆ ಹಾಗೂ ಕಲೆಗೆ ಸ್ಪಂದಿಸುವ ವಾತಾವರಣವನ್ನು ಹೊಂದಿದೆ. ಕಲೋನ್ ನಲ್ಲಿ 30ಕ್ಕೂ ಹೆಚ್ಚು ವಸ್ತುಸಂಗ್ರಹಾಲಯಗಳು ಮತ್ತು ನೂರಾರು ಗ್ಯಾಲರಿಗಳಿವೆ. ಪ್ರದರ್ಶನಗಳು ಸ್ಥಳೀಯ ಪ್ರಾಚೀನ ರೋಮನ್ ಪುರಾತತ್ವಸಂಶೋಧನ ತಾಣಗಳಿಂದ ಹಿಡಿದು ಸಮಕಾಲೀನ ಚಿತ್ರಗಳು ಮತ್ತು ಶಿಲ್ಪಕಲೆಗಳನ್ನು ಬಿಂಬಿಸುವವರೆಗಿನದಾಗಿರುತ್ತವೆ. ಕಲೋನ್ ವ್ಯಾಪಾರಿ ಜಾತ್ರೆ ಕಲಾ ಕಲೋನ್,imm ಕಲೀನ್ ಅಂತರರಾಷ್ಟ್ರೀಯ ಮರಮಟ್ಟು (ಫರ್ನೀಚರ್) ಜಾತ್ರೆ ಮತ್ತು ಫೋಟೋಕಿನಾದಂತಹ ಹಲವಾರು ವ್ಯಾಪಾರಿ ಪ್ರದರ್ಶನಗಳೆಗೆ ಅತಿಥೇಯವಾಗಿರುತ್ತದೆ. ಕಲೋನ್ ನಲ್ಲಿ ನಡೆಯುವ ಕಲೋನ್ ಕಾರ್ನಿವಾಲ್ ಬಹಳ ಪ್ರಸಿದ್ಧವಾದುದಾಗಿದೆ; ಪ್ರತಿ ವರ್ಷ ನಡೆಯುವ ರೆಗ್ಗೆ ಸಮ್ಮರ್ ಜ್ಯಾಮ್ಮತ್ತು ಕಲೋನ್ ಗೇ ಪ್ರೈಡ್ ಸಹ ಜನಜನಿತವಾದ ಕಾರ್ಯಕ್ರಮಗಳಾಗಿವೆ.
ಜರ್ಮನಿಯಲ್ಲಿ ಕಲೋನ್ ಒಂದು ಪ್ರಮುಖ ಮಾಧ್ಯಮ ಕೇಂದ್ರವಾಗಿದೆ. ವೆಸ್ಟ್ ಡ್ಯೂಟ್ಷರ್ ರಂಡ್ ಫಂಕ್ (WDR), RTL ಮತ್ತು VOX ಗಳನ್ನು ಸೇರಿದಂತೆ ಹಲವಾರು ರೇಡಿಯೋ ಮತ್ತು ಟೆಲಿವಿಷನ್ ಕೇಂದ್ರಗಳ ಪ್ರಧಾನಕಚೇರಿಗಳು ಈ ನಗರದಲ್ಲಿವೆ. Pro7 ಮತ್ತು Sat.1ಗಳೆರಡೂ ಟಿವಿ ಷೋಗಳನ್ನು ಕಲೋನ್ ನಲ್ಲಿ ನಿರ್ಮಿಸುತ್ತವೆ. ಅಲ್ಲದೆ ಈ ನಗರದಲ್ಲಿ ಕಲೋನ್ ಕಾಮೆಡಿ ಫೆಸ್ಟಿವಲ್ ನಡೆಸಲ್ಪಡುತ್ತದೆ ಹಾಗೂ ಇದು ಮೇಯ್ನ್ ಲ್ಯಾಂಡ್ ಯೂರೋಪ್ ನಲ್ಲೇ ಬೃಹತ್ತಾದ ಹಾಸ್ಯ ಹಬ್ಬವೆಂದು ಪರಿಗಣಿಸಲಾಗಿದೆ.[2]