ಕರ್ನಾಟಕದ ಇತಿಹಾಸ
From Wikipedia, the free encyclopedia
ಕರ್ನಾಟಕದ ಇತಿಹಾಸದ ದಾಖಲೆ ೨೦೦೦ ವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.[1]. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ)[2], ಮಾನ್ಯಖೇಟದ ರಾಷ್ಟ್ರಕೂಟರು,[3] ವೆಂಗಿ ಚಾಲುಕ್ಯರು[4] ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ[5] ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.