ಕಣಿವೆ
ಎರಡು ಬೆಟ್ಟಗಳ ನಡುವಿನ ಇಕ್ಕಟ್ಟಾದ ಮತ್ತು ಆಳವಾದ ಪ್ರದೇಶ, ಕಂದರ,ಕಿಬ್ಬರಿ / From Wikipedia, the free encyclopedia
ಕಣಿವೆ : ವಿಸ್ತಾರವೂ ಕಡಿದೂ ಮುಮ್ಮೈ ಉಳ್ಳದ್ದೂ ಆದ ದಿಣ್ಣೆಗಳ ನಡುವೆಯೋ ಬೆಟ್ಟಗಳ ಅಥವಾ ಪರ್ವತಗಳ ಶ್ರೇಣಿಗಳ ನಡುವೆಯೋ ಇರುವ, ಸಾಮಾನ್ಯವಾಗಿ ಹೊರಕ್ಕೆ ತೆರೆದುಕೊಂಡಿರುವ, ಉದ್ದನೆಯ ತಗ್ಗು (ವ್ಯಾಲಿ). ಭೂಮಿಯ ಮೇಲ್ಪದರ ತಳಾಭಿಮುಖವಾಗಿ ಮಡಿಸಿಕೊಂಡು ಸಮಾನರೇಖೆಯ ಕಡೆಗೆ ಇಳಿವೋರೆಯಾಗಿ ಆದದ್ದು ಕೇಂದ್ರಮುಖಾವನತ (ಸಿನ್ಕ್ಲೈನಲ್) ಕಣಿವೆ. ಸ್ತರಭಂಗದಿಂದ ಅಥವಾ ಖನಿಜರೇಖೆಯ ವಿಚ್ಛಿತ್ತಿಯಿಂದ ಸಂಭವಿಸಿದ್ದು ಸೀಳು ಕಣಿವೆ. ಇವೆರಡೂ ಭೂರಚನೆಯ ವ್ಯತ್ಯಾಸದಿಂದ ಆದಂಥ ಕಣಿವೆಗಳು. ನದಿ ಅಥವಾ ಹಿಮಪ್ರವಾಹದಿಂದ, ಅದರ ಆಕ್ರಮಣಕ್ಕೆ ಪುರ್ವಭಾವಿಯಾಗಿಯೋ ಅನುಗುಣ ವಾಗಿಯೋ ಸಂಭವಿಸುವ ನಾನಾ ಕ್ರಿಯೆಗಳಿಂದಾಗಿ, ಕಣಿವೆಗಳು ಸಂಭವಿಸುವುದೂ ಉಂಟು.