ಒಪನ್ ಸ್ಟ್ರೀಟ್ ಮ್ಯಾಪ್
ಪ್ರಪಂಚದ ಮುಕ್ತ ಹಾಗೂ ಸ್ವತಂತ್ರ ನಕಾಶೆ / From Wikipedia, the free encyclopedia
ಒಪನ್ ಸ್ಟ್ರೀಟ್ ಮ್ಯಾಪ್ (ಒಎಸ್ಎಂ) ಒಂದು ಪ್ರಪಂಚದ ಸ್ವತಂತ್ರ ಹಾಗೂ ಮುಕ್ತವಾಗಿ ಸಹವರ್ತನೆಯಿಂದ ಸಂಪಾದಿಸಬಲ್ಲ ನಕಾಶೆಯ ಯೋಜನೆ. ಈಗ ಲಭ್ಯವಿರುವ ಸುಮಾರು ನಕಾಶೆಗಳು ಹಲವು ಎಲ್ಲೆಕಟ್ಟು ಅಥವಾ ಪರಿಮಿತಿಗಳನ್ನು ಹೊಂದಿದ್ದು, ಅದನ್ನು ಸರಿದೂಗಲು ಅಗ್ಗದ ರೀತಿಯಲ್ಲಿ ಈ ಯೋಜನೆಯು ನೆರವಾಗಿದೆ.[4]
Quick Facts ಜಾಲತಾಣದ ವಿಳಾಸ, ಘೋಷಣೆ ...
ಜಾಲತಾಣದ ವಿಳಾಸ | openstreetmap.org |
---|---|
ಘೋಷಣೆ | ಪ್ರಪಂಚದ ಮುಕ್ತ ಹಾಗೂ ಸ್ವತಂತ್ರ ನಕಾಶೆ |
ವಾಣಿಜ್ಯ ತಾಣ | ಅಲ್ಲ |
ನೊಂದಾವಣಿ | ಕೊಡುಗೆದಾರರು ನೋಂದಾಯಿಸಬೇಕು |
ಲಭ್ಯವಿರುವ ಭಾಷೆ | ಸುಮಾರು ೫೦ಕ್ಕೂ ಹೆಚ್ಚು ತಾಣದಲ್ಲಿ ಹಾಗೂ ನಕಾಶೆಯಲ್ಲಿ ಯಾವು ಮಿತಿಯಿಲ್ಲ[1] |
ಬಳಕೆದಾರರು(ನೊಂದಾಯಿತರೂ ಸೇರಿ) | 2,547,742[2] |
ವಿಷಯದ ಪರವಾನಗಿ | ಮುಕ್ತ ದತ್ತಾಂಶ ಪರವಾನಿಗೆ (Open Database License - ODbL) |
ಒಡೆಯ | ಒಪನ್ ಸ್ಟ್ರೀಟ್ ಮ್ಯಾಪ್ ಸಮುದಾಯ. ಒಪನ್ ಸ್ಟ್ರೀಟ್ ಮ್ಯಾಪ್ ಫೌಂಡೆಶನ್ ನೆರವಿನೊಂದಿಗೆ.[3] |
ಸೃಷ್ಟಿಸಿದ್ದು | ಸ್ಟೀವ್ ಕೋಸ್ಟ್ |
Close
ಕೇವಲ ನಕಾಶೆಯಲ್ಲದೆ, ಈ ನಕಾಶೆ ಹಿಂದೆ ಇರುವ ಮುಕ್ತ ಭೂ ದತ್ತಾಂಶವು ಈ ಯೋಜನೆಯ ಪ್ರಮುಖ ಆಗುವಳಿಯಾಗಿದೆ. ಈ ಮುಕ್ತ ಭೂ ದತ್ತಾಂಶವು ಸ್ವತಂತ್ರ ಪರವಾನಿಗೆಯಲ್ಲಿರುವುದರಿಂದ ಒಡೆತನದ ಭೂ ದತ್ತಾಂಶಕ್ಕಿಂತ ಹಲವಾರು ರೀತಿಯಲ್ಲಿ ಉಪಯೋಗವಾಗುತ್ತಿದೆ. [5][6]