ಏಂಜಲ್ ಜಲಪಾತ
From Wikipedia, the free encyclopedia
Angel Falls Salto Ángel Kerepakupai Vena | |
---|---|
ಸ್ಥಳ | Auyantepui, Canaima National Park, Venezuela |
ಬಗೆ | Plunge |
ಒಟ್ಟು ಉದ್ದ | 979 m (3,212 ft) |
ಒಟ್ಟು ಪ್ರಪಾತಗಳು | 47 |
ಉದ್ದವಾದ ಪ್ರಪಾತ | 807 m (2,648 ft) |
ವಿಶ್ವದಲ್ಲಿ ಉದ್ದದ ರ್ಯಾಂಕ್ | 1[1] |
ಏಂಜಲ್ ಜಲಪಾತ ವು(ಸ್ಪ್ಯಾನಿಷ್: Salto Ángel; ಪೆಮೊನ್ ಭಾಷೆ: ಕೆರೆಪಕುಪೈ ವೆ ನ, ಅಂದರೆ "ಅತ್ಯಂತ ಆಳ ಸ್ಥಳದ ಜಲಪಾತ" ಅಥವಾ ಪರಕುಪ-ವೆನ , ಅರ್ಥ "ಅತ್ಯಂತ ಎತ್ತರ ಸ್ಥಳದ ಜಲಪಾತ) ವೆನೆಜುವೆಲಾದ ಒಂದು ಜಲಪಾತ.
ಇದು ವಿಶ್ವದ ಅತ್ಯಂತದ ಎತ್ತರದ ಜಲಪಾತವಾಗಿದ್ದು, ಇದರ ಎತ್ತರ 979 m (3,212 ft)ರಷ್ಟಿದೆ ಜೊತೆಗೆ ಇದರ ರಭಸವು 807 m (2,648 ft)ರಷ್ಟಿದೆ. ಜಲಪಾತವು ಕಾನೈಮ ರಾಷ್ಟ್ರೀಯ ಉದ್ಯಾನವನದ ಆಯಂತೆಪುಯಿ ಪರ್ವತ ತುದಿಯಿಂದ ಬೀಳುತ್ತದೆ (ಸ್ಪ್ಯಾನಿಶ್: ಪಾರ್ಕ್ಯೂ ನಾಸಿಯೋನಲ್ ಕಾನೈಮ), ಇದು ವೆನೆಜುವೆಲಾದ ಬೋಲಿವರ್ ರಾಜ್ಯದ ಗ್ರಾನ್ ಸಬಾನ ಪ್ರದೇಶದಲ್ಲಿರುವ UNESCO ವಿಶ್ವ ಸ್ಮಾರಕ ಸ್ಥಳವಾಗಿದೆ.
ಜಲಪಾತವು ಎಷ್ಟು ಎತ್ತರವಿದೆಯೆಂದರೆ, ಭೂಮಿಯ ಮೇಲೆ ಅದು ಬೀಳುವುದಕ್ಕೆ ಮುಂಚೆ ಹೆಚ್ಚಿನ ನೀರು ಆವಿಯಾಗಿಹೋಗುತ್ತದೆ ಅಥವಾ ಬಲವಾದ ಗಾಳಿಯು ಅದನ್ನು ಸ್ವಚ್ಚವಾದ ಮಂಜಿನ ರೀತಿಯಲ್ಲಿ ಹೊತ್ತೊಯ್ಯುತ್ತದೆ. ಜಲಪಾತದ ತಳವು ಕೆರೆಪ್ ನದಿಗೆ ನೀರನ್ನು ಪೂರೈಕೆ ಮಾಡುತ್ತದೆ(ಇದನ್ನು ಪರ್ಯಾಯವಾಗಿ ರಿಯೋ ಗುಯ ಎಂದು ಕರೆಯಲಾಗುತ್ತದೆ), ಇದು ಚುರುನ್ ನದಿಗೆ ಹರಿಯುತ್ತದೆ, ಇದು ಕಾರ್ರಯೋ ನದಿಯ ಉಪನದಿಯಾಗಿದೆ.
ಜಲಪಾತದ3,212 ft (979 m)ರಷ್ಟು ಎತ್ತರವು ಬಹುತೇಕವಾಗಿ ಅದರ ರಭಸವನ್ನು ಒಳಗೊಳ್ಳುವುದರ ಜೊತೆಗೆ ಸುಮಾರು 0.25 mi (400 m)ರಷ್ಟು ಇಳಿಜಾರಿನ ಕಿರುಜಲಪಾತಗಳು ಹಾಗು ಪ್ರಪಾತದ ಕೆಳಗೆ ರಭಸದ ಇಳಿತಗಳನ್ನು ಹಾಗು ಇಳಿಜಾರಿನ ರಭಸದಲ್ಲಿ 100-foot (30 m)ರಷ್ಟು ಅಧಿಕ ರಭಸವನ್ನು ನದಿ ದಿಕ್ಕಿನಲ್ಲಿ ಹೊಂದಿದೆ. ಮುಖ್ಯ ರಭಸವು ನಿಸ್ಸಂದೇಹವಾಗಿ ವಿಶ್ವದ ಅತಿ ಎತ್ತರದ ಏಕೈಕ ಪ್ರಪಾತವೆನಿಸಿದೆ, ಕೆಲವರು ಜಲಪಾತದ ಎತ್ತರದ ಮಾನದಂಡದಲ್ಲಿ [2] ಕಡಿಮೆ ಮಟ್ಟದ ಕಿರುಜಲಪಾತಗಳು ಸೇರುತ್ತವೆ ಎಂದು ಭಾವಿಸುತ್ತಾರೆ, ಆದಾಗ್ಯೂ ಜಲಪಾತದ ಮಾಪನಕ್ಕೆ ಸಾರ್ವತ್ರಿಕವಾಗಿ ಗುರುತಿಸಲಾಗುವಂತಹ ಯಾವುದೇ ಮಾನದಂಡಗಳಿಲ್ಲ.[2]