ಎಸ್.ಎಂ.ಕೃಷ್ಣ
ಕರ್ನಾಟಕದ ಮುಖ್ಯಮಂತ್ರಿಗಳು / From Wikipedia, the free encyclopedia
ಎಸ್ ಎಮ್ ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) (ಜನನ-೧೯೩೨) ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ ೨೦೧೭ ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು ೧೯೯೯ ರಿಂದ ೨೦೦೪ ರವರೆಗೆ ಕರ್ನಾಟಕದ ೧೬ ನೇ ಮುಖ್ಯಮಂತ್ರಿಯಾಗಿದ್ದರು ಮತ್ತು ೨೦೦೪ ರಿಂದ ೨೦೦೮ ರವರೆಗೆ ಮಹಾರಾಷ್ಟ್ರದ ೧೯ ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ ೧೯೮೯ ರಿಂದ ಜನವರಿ ೧೯೯೩ ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.[1] ೧೯೭೧ ರಿಂದ ೨೦೧೪ ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ ೨೦೨೩ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.[2]
ಎಸ್.ಎಂ.ಕೃಷ್ಣ | |
---|---|
ಭಾರತದ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಅಮೇರಿಕಾದಲ್ಲಿ (೨೦೧೦). | |
ಭಾರತದ ೨೭ನೇ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ | |
ಅಧಿಕಾರ ಅವಧಿ ೨೩ ಮೇ ೨೦೦೯ – ೨೮ ಅಕ್ಟೋಬರ್ ೨೦೧೨ | |
ಪ್ರಧಾನ ಮಂತ್ರಿ | ಮನಮೋಹನ್ ಸಿಂಘ್ |
ಪೂರ್ವಾಧಿಕಾರಿ | ಪ್ರಣಬ್ ಮುಖರ್ಜಿ |
ಉತ್ತರಾಧಿಕಾರಿ | ಸಲ್ಮಾನ್ ಖುರ್ಶೀದ್ |
ಮಹಾರಾಷ್ಟ್ರದ ೧೮ನೇ ರಾಜ್ಯಪಾಲರಾಗಿ | |
ಅಧಿಕಾರ ಅವಧಿ ೧೨ ಡಿಸೆಂಬರ್ ೨೦೦೪ – ೫ ಮಾರ್ಚ್ ೨೦೦೮ | |
ಮುಖ್ಯಮಂತ್ರಿ | ವಿಲಾಸ್ ರಾವ್ ದೇಶ್ಮುಖ್ |
ಪೂರ್ವಾಧಿಕಾರಿ | ಮೊಹ್ಮದ್ ಫಝಲ್ |
ಉತ್ತರಾಧಿಕಾರಿ | ಎಸ್ ಸಿ ಜಮೀರ್ |
ಕರ್ನಾಟಕದ ೧೬ನೇ ಮುಖ್ಯಮಂತ್ರಿಯಾಗಿ | |
ಅಧಿಕಾರ ಅವಧಿ ೧೧ ಅಕ್ಟೋಬರ್ ೧೯೯೯ – ೨೮ ಮೇ ೨೦೦೪ | |
ಪೂರ್ವಾಧಿಕಾರಿ | ಜೆ ಹೆಚ್ ಪಟೇಲ್ |
ಉತ್ತರಾಧಿಕಾರಿ | ಎನ್ ಧರಮ್ ಸಿಂಘ್ |
ಕರ್ನಾಟಕದ ಮೊದಲ ಉಪ ಮು.ಮಂ. | |
ಅಧಿಕಾರ ಅವಧಿ ೨೧ ಜನವರಿ ೧೯೯೩ – ೧೧ ಡಿಸೆಂಬರ್ ೧೯೯೪ | |
ಮುಖ್ಯಮಂತ್ರಿ | ಎಂ ವೀರಪ್ಪ ಮೊಯ್ಲಿ |
ಪೂರ್ವಾಧಿಕಾರಿ | ಇಲ್ಲ. |
ಉತ್ತರಾಧಿಕಾರಿ | ಜೆ ಹೆಚ್ ಪಟೇಲ್ |
ಮತಕ್ಷೇತ್ರ | ಮದ್ದೂರು ವಿಧಾನಸಭಾ ಕ್ಷೇತ್ರ |
ವೈಯಕ್ತಿಕ ಮಾಹಿತಿ | |
ಜನನ | (1932-05-01) ೧ ಮೇ ೧೯೩೨ (ವಯಸ್ಸು ೯೨) ಸೋಮನಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ (ಆಗಿನ ಮೈಸೂರು ರಾಜ್ಯ) |
ರಾಜಕೀಯ ಪಕ್ಷ | ಭಾರತೀಯ ಜನತಾ ಪಾರ್ಟಿ (ಮಾರ್ಚ್ ೨೦೧೭ರಿಂದ) |
ಇತರೆ ರಾಜಕೀಯ ಸಂಲಗ್ನತೆಗಳು |
|
ಸಂಗಾತಿ(ಗಳು) | ಪ್ರೇಮಾ |
ಅಭ್ಯಸಿಸಿದ ವಿದ್ಯಾಪೀಠ | ಮೈಸೂರು ವಿವಿ ಕಾನೂನು ಕಾಲೇಜು ಡೆಡ್ಮನ್ ಕಾನೂನು ಕಾಲೇಜು(ಸದರ್ನ್ ಮೆಥಡಿಸ್ಟ್ ವಿವಿ, ಟೆಕ್ಸಾಸ್) ಜಾರ್ಜ್ ವಾಷಿಂಗ್ಟನ್ ವಿವಿ ಕಾನೂನು ಕಾಲೇಜು |