ಈಜಿಪ್ಟ್ನ ಪಿರಮಿಡ್ಗಳು
From Wikipedia, the free encyclopedia
ಈಜಿಪ್ಟ್ನ ಪಿರಮಿಡ್ಗಳು ಈಜಿಪ್ಟ್ನಲ್ಲಿದ್ದ ಪ್ರಾಚೀನ ಪಿರಮಿಡ್-ಆಕಾರದ ಕಲ್ಲಿನ ಕಟ್ಟಡದ ವಿನ್ಯಾಸಗಳು. 2008ರ ಹೊತ್ತಿಗೆ ಈಜಿಪ್ಟ್ನಲ್ಲಿ 138 ಪಿರಮಿಡ್ಗಳನ್ನು ಕಂಡುಹಿಡಿಯಲಾಯಿತು.[1][2] ಬಹುತೇಕವು ಹಳೆಯ ಮತ್ತು ಮಧ್ಯ ರಾಜ್ಯದ ಅವಧಿಗಳಲ್ಲಿ ನಿರ್ಮಿಸಿದ ದೇಶದ ಫರೋಗಳ (ಪ್ರಾಚೀನ ಈಜಿಪ್ಟ್ ದೇಶದ ಅರಸರು) ಮತ್ತು ಅವರ ಸಂಗಾತಿಗಳ ಗೋರಿಗಳಾಗಿವೆ.[3][4] [5] ಮೊದಲ ಈಜಿಪ್ಟ್ನ ಪಿರಮಿಡ್ಗಳನ್ನು ಮೆಂಫಿಸ್ನ ವಾಯುವ್ಯ ದಿಕ್ಕಿನ, ಸಕ್ವಾರದಲ್ಲಿ ಕಂಡುಹಿಡಿಯಲಾಯಿತು. ಇವುಗಳಲ್ಲಿ ಮುಂಚಿತವಾಗಿ ಕಂಡುಹಿಡಿದದ್ದು ಮೂರನೆಯ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾಗಿದ್ದ ಪಿರಮಿಡ್ ಆಫ್ ಡಿಜೊಸೆರ್ (ನಿರ್ಮಾಣವಾಗಿದ್ದು 2630 ಬಿಸಿE–2611 ಬಿಸಿE). ಈ ಪಿರಮಿಡ್ ಮತ್ತು ಇದರ ಸುತ್ತಮುತ್ತಲಿನ ಕಾಂಪ್ಲೆಕ್ಸ್ಗಳು ವಾಸ್ತುಶಿಲ್ಪಿಯಾದ ಇಮ್ಹೊಟೆಪ್ರವರಿಂದ ವಿನ್ಯಾಸಿಸಲಾಗಿವೆ, ಮತ್ತು ಸಾಮಾನ್ಯವಾಗಿ ಇವನ್ನು ಅಲಂಕರಿಸಿದ ಕಲ್ಲಿನ ಕಟ್ಟಣೆಯಿಂದ ನಿರ್ಮಾಣಗೊಂಡ ಪ್ರಪಂಚದ ಅತೀ ಪುರಾತನವಾದ ಸ್ಮಾರಕದ ವಿನ್ಯಾಸಗಳೆಂದು ಪರಿಗಣಿಸಲಾಗುತ್ತದೆ. ಕೈರೊನ ಗಡಿಯಲ್ಲಿ, ಗಿಜದಲ್ಲಿ ಕಂಡುಹಿಡಿದವು ಈಜಿಪ್ಟ್ನ ಪ್ರಸಿದ್ಧವಾದ ಪಿರಮಿಡ್ಗಳು. ಗಿಜ ಪಿರಮಿಡ್ಗಳಲ್ಲಿ ಕೆಲವು ಇಲ್ಲಿಯವರೆಗೂ ನಿರ್ಮಾಣಗೊಂಡ ಅತೀ ದೊಡ್ಡದಾದವುಗಳನ್ನೊಳಗೊಂಡಿವೆ.[6] ಗಿಜದಲ್ಲಿನ ಖುಪು ಪಿರಮಿಡ್ ಈಜಿಪ್ಟ್ನ ಅತೀದೊಡ್ಡದಾದ ಪಿರಮಿಡ್. ಈಗಲು ಇರುವ ಪುರಾತನ ಪ್ರಪಂಚದ ಏಳು ಅದ್ಭುತಗಳಲ್ಲಿ ಇದು ಒಂದಾಗಿದೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2009) |
Pyramid in hieroglyphs |
---|