ಆತ್ಮಚರಿತ್ರೆ
ಆ ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ / From Wikipedia, the free encyclopedia
ತಮ್ಮ ಜೀವನದ ವೃತ್ತಾಂತವನ್ನು ತಾವಾಗಿಯೇ (ಅಥವಾ ಕೆಲವೊಮ್ಮೆ ಮತ್ತೊಬ್ಬರ ಸಹಾಯದೊಂದಿಗೆ) ಬರೆದ ಪುಸ್ತಕವನ್ನು ಆತ್ಮಚರಿತ್ರೆ ಅಥವಾ "ಆತ್ಮಕತೆ" ಎಂದು ಕರೆಯುತ್ತಾರೆ.[1] ಆತ್ಮಕಥೆ ವ್ಯಕ್ತಿ ತನ್ನ ಜೀವನಚರಿತ್ರೆಯನ್ನು ತಾನೇ ಬರೆದರೆ ಅದನ್ನು ಆತ್ಮಕಥೆ, ಆತ್ಮವೃತ್ತ ಎನ್ನುತ್ತೇವೆ. ಅದೇ ವ್ಯಕ್ತಿಯ ಚರಿತ್ರೆಯನ್ನು ಬೇರೊಬ್ಬ ಬರೆದಾಗ ಅದನ್ನು ಜೀವನಚರಿತ್ರೆ ಎನ್ನುತ್ತೇವೆ. ಆತ್ಮಕಥೆ ಸಾಹಿತ್ಯದ ಒಂದು ಪ್ರಮುಖ ಪ್ರಕಾರ. ಪತ್ರಗಳು (ದಿನಚರಿ, ಜರ್ನಲ್ಗಳು, ಬಖೈರುಗಳು), ವೈಯಕ್ತಿಕ ಪ್ರಬಂಧಗಳು ಮುಂತಾದುವು ಈ ವರ್ಗಕ್ಕೆ ಸೇರುತ್ತವೆ. ಮಾನವನ ವ್ಯಕ್ತಿತ್ವ ತನ್ನನ್ನು ತಾನು ಚಿರಸ್ಮರಣೀಯ ಮಾಡಿಕೊಳ್ಳುವ ಪ್ರಯತ್ನವನ್ನು ಈ ಬಗೆಯ ಸಾಹಿತ್ಯದಲ್ಲಿ ನಾವು ಕಾಣುತ್ತೇವೆ.