ಅಸ್ಸೀರಿಯ
From Wikipedia, the free encyclopedia
ಅಸ್ಸೀರಿಯವಿಶ್ವದ ಪುರಾತನ ನಾಗರಿಕತೆಗಳ ಕೇಂದ್ರಗಳಲ್ಲೊಂದಾಗಿದ್ದ ಸುಮೇರಿಯದ ಒಂದು ಭಾಗ. ಟೈಗ್ರಿಸ್ ನದಿಯ ದಡದ ಮೇಲಿದ್ದ ಅಷೂರ್ ಎಂಬ ನಗರ ಇದರ ಕೇಂದ್ರವಾಗಿತ್ತು. ಅಸ್ಸೀರಿಯನ್ನರು ದಮಾಸ್ಕಸ್, ಪ್ಯಾಲೆಸ್ಟೈನ್ ಮತ್ತು ಕೆಳಗಣ ಈಜಿಪ್ಟ್ ಗಳನ್ನು ವಶಪಡಿಸಿಕೊಂಡು, ತಮ್ಮ ರಾಜ್ಯವನ್ನು ವಿಸ್ತರಿಸಿದರು. ಸೆರಗಾನ್, ಸೆನ್ನಚಿರಬ್ ಮತ್ತು ಅಸುರ್ಬನಿಪಾಲ್ ಇಲ್ಲಿಯ ಮುಖ್ಯ ದೊರೆಗಳು. ಇವರು ವ್ಯಾಪಾರ ಮತ್ತು ವಾಣಿಜ್ಯಕ್ಕೆ ಪ್ರಾಧಾನ್ಯ ಕೊಟ್ಟಿದ್ದರು. ವಿಶ್ವದ ನಾನಾ ಭಾಗಗಳಿಂದ ಶಿಲ್ಪಿಗಳನ್ನು ಕರೆಸಿ ನಿನೇವ ಎಂಬಲ್ಲಿ ಸುಂದರವಾದ ಅರಮನೆಗಳನ್ನು ಕಟ್ಟಿಸಿದರು. ಚಾಲ್ಡಿಯನ್ನರು ಅಸ್ಸೀರಿಯನ್ನರನ್ನು ಸೋಲಿಸಿ ತಮ್ಮ ಪ್ರಭುತ್ವವನ್ನು ಪ್ರಾರಂಭಿಸಿದರು.
ಅತ್ಯಂತ ಪುರಾತನ ಮಾನವನ ಅವಶೇಷಗಳಾದ ಪೂರ್ವ ಶಿಲಾಯುಗದ ಮಧ್ಯಕಾಲಕ್ಕೆ ಸೇರಿದ ಅಷುಲಿಯನ್ - ಲೆವಲ್ಟಾಷಿಯನ್ ಹಂತದ ಕೈಗೊಡಲಿಗಳೂ ಚಕ್ಕೆ ಕಲ್ಲಿನ ಆಯುಧಗಳೂ ಬಾರ್ದಾಬಲ್ಕ ಎಂಬಲ್ಲಿ ದೊರಕಿವೆ. ಹಜûರ್ಮರ್ದ್ ಮತ್ತು ಷನಿದಾರ್ ಗುಹೆಗಳ ತಳಪದರಗಳಲ್ಲಿ ದೊರಕುವ ಚಕ್ಕೆ ಕಲ್ಲಿನ ಆಯುಧಗಳು ಮುಂದಿನ ಹಂತವಾದ ಲೆವಲ್ವಾಷಿಯೊ-ಮೌಸ್ವಿರಿಯನ್ ಕೈಗಾರಿಕೆಗಳನ್ನು ಹೋಲುತ್ತದೆ. ಹಜûರ್ಮರ್ದ್ ಅವಶೇಷಗಳು ಷನಿದಾರ್ ಅವಶೇಷಗಳಿಗಿಂತಲೂ ಹಳೆಯವೆಂದು ಅಲ್ಲಿ ದೊರಕಿದ ಕೈಗೊಡಲಿಗಳ ಆಧಾರದ ಮೇಲೆ ಹೇಳಲಾಗಿದೆ. [1]
ಹಜûರ್ಮರ್ದ್ ಮತ್ತು ಷನಿದಾರ್ ನೆಲೆಗಳ ಮೇಲ್ಪದರಗಳಲ್ಲಿ ದೊರಕಿದ ಕಲ್ಲು ಚಕ್ಕೆಗಳ ಆಯುಧಗಳೂ ಸೂಕ್ಷ್ಮ ಶಿಲಾಯುಧಗಳೂ ಜûಜಿರ್ó ಮತ್ತು ಪಲೆಗಾವ್ರಾ ಎಂಬಲ್ಲೂ ದೊರಕುತ್ತವೆ. ಇವುಗಳ ಆಧಾರದ ಮೇಲೆ ಈ ಜನರು ಸಮಕಾಲೀನ ಯೂರೋಪಿನ ಜನರಿಗಿಂತಲೂ ಹೆಚ್ಚು ಮುಂದುವರೆದಿದ್ದರೆಂದು ಹೇಳಲಾಗಿದೆ. ಪ್ಯಾಲೆಸ್ಟೈನಿನ ಶಿಲಾಯುಗದ ಷನಿದಾರ್ ಗುಹೆಯ ಮೇಲ್ಪದರಗಳ ಸಂಸ್ಕøತಿ ಈ ಪ್ರದೇಶದ ಚಕ್ಕೆ ಕಲ್ಲಿನ ಆಯುಧಗಳ ಸಂಸ್ಕøತಿಗಳಲ್ಲಿ ಹಳೆಯದೆಂದು ಹೇಳಬಹುದು.