ಅಲೆಕ್ಸಾಂಡರ್ ಫ್ಲೆಮಿಂಗ್
From Wikipedia, the free encyclopedia
ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ [1] ( ೬ ಆಗಸ್ಟ್ ೧೮೮೧ - ೧೧ ಮಾರ್ಚಿ ೧೯೫೫) - ಇವರು ಸ್ಕಾಟ್ಲೆಂಡ್ನ ಪ್ರಸಿದ್ಧ ಜೀವಶಾಸ್ತ್ರಜ್ಞ ಮತ್ತು ಔಷಧ ವಿಜ್ಞಾನಿ ಅಗಿದ್ದರು. ಫ್ಲೆಮಿಂಗ್ ಬ್ಯಾಕ್ಟ್ರೀಯಶಾಸ್ತ್ರ, ರೋಗ ರಕ್ಷಾಶಾಸ್ತ್ರ ಮತ್ತು ಕೀಮೊಥೆರಪಿಯ (ರಸಾಯನ ಚಿಕಿತ್ಸೆ) ಬಗ್ಗೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದರು. ಇಸವಿ ೧೯೨೩ರಲ್ಲಿ ಲೈಸೊಜೈಮ್ ಎಂಬ ಕಿಣ್ವ (ಎಂಜೈಮ್)ದ ಪತ್ತೆ, ಹಾಗೂ, ೧೯೨೮ರಲ್ಲಿ ಪೆನಿಸಿಲ್ಲಿಯಮ್ ನೊಟಾಟಮ್ ಎನ್ನುವ ಫಂಗಸ್ನಿಂದ (ಶಿಲೀಂಧ್ರ) ಪೆನ್ಸಿಲಿನ್ ಎನ್ನುವ ಪ್ರತಿಜೀವಕ (ಆಂಟಿಬಯೋಟಿಕ್) ವಸ್ತುವಿನ ಸಂಶೋಧನೆಯು, ಇವರ ಅತ್ಯಂತ ಪ್ರಸಿದ್ಧ ಸಾಧನೆಗಳಾಗಿವೆ. ಈ ಸಂಶೋಧನೆಗಾಗಿ, ೧೯೪೫ರಲ್ಲಿ ಹಾವರ್ಡ್ ವಾಲ್ಟರ್ ಫ್ಲೋರೆ ಮತ್ತು ಎರ್ನಸ್ಟ್ ಬೋರಿಸ್ ಚೈನ್ ಜೊತೆಯಲ್ಲಿ ಫ್ಲೆಮಿಂಗ್ರಿಗೆ ಫಿಸಿಯೊಲಾಜಿ (ಶರೀರವಿಜ್ಞಾನ ಶಾಸ್ತ್ರ) ಅಥವಾ ಮೆಡಿಸಿನ್ (ವೈದ್ಯಕೀಯ ಶಾಸ್ತ್ರ)ಕ್ಕಾಗಿ ನೋಬಲ್ ಪ್ರಶಸ್ತಿ ಲಭಿಸಿತು.[2] ಇತ್ತೀಚೆಗೆ ೧೯೯೯ರಲ್ಲಿ, ಪೆನಿಸಿಲಿನ್ ಸಂಶೋಧಕ ಫ್ಲೆಮಿಂಗ್ರನ್ನು 20ನೇ ಶತಮಾನದ ಅತಿ ಪ್ರಮುಖ 100 ಜನರ ಪಟ್ಟಿಯಲ್ಲಿ ಸೇರಿಸಿದ ಟೈಮ್ ಮ್ಯಾಗಜೀನ್ , ಈ ಹೇಳಿಕೆ ನೀಡಿ ಪ್ರಶಂಸಿಸಿತು: "ಈ ಶೋಧನೆಯು ಪ್ರಪಂಚದ ಇತಿಹಾಸವನ್ನು ಬದಲಾಯಿಸಿತು. ಫ್ಲೆಮಿಂಗ್ರು 'ಪೆನಿಸಿಲಿನ್' ಎಂದು ಕರೆದ ಆ ಮೌಲ್ಡ್ನಲ್ಲಿದ್ದ ಸಕ್ರಿಯ ಆಂಶವು, ಸೋಂಕುಕಾರಕಗಳನ್ನು ಅಪಾರ ಪ್ರಬಲವಾಗಿ ಪ್ರತಿರೋಧಿಸುತ್ತಿತ್ತು. ಇದರ ಸಾಮರ್ಥ್ಯವನ್ನು ಕೊನೆಗೆ ಗುರುತಿಸಲ್ಪಟ್ಟಾಗ, ಜೀವವನ್ನು ಕಾಪಾಡುವ, ವಿಶ್ವದಲ್ಲಿಯೇ ಅತ್ಯಂತ ಪರಿಣಾಮಕಾರಿ ಪೆನಿಸಿಲಿನ್ ಔಷಧವಾಗಿ ರೂಪಗೊಂಡಿತು.ಇದು ಬ್ಯಾಕ್ಟೀರಿಯಗಳ ಸೋಂಕುಗಳಿಗಾಗಿ ಅನುಸರಿಸಲಾದ ಚಿಕಿತ್ಸಾ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಶತಮಾನದ ಮಧ್ಯಭಾಗದಲ್ಲಿ ಫ್ಲೆಮಿಂಗ್ರ ಸಂಶೋಧನೆಯು, ಬೃಹತ್ ಪ್ರಮಾಣದ ಔಷಧೀಯ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾಯಿತು. ಇವು ಕೃತಕ (ಸಂಶ್ಲೇಷಿತ) ಪೆನಿಸಿಲಿನ್ಗಳನ್ನು ತಯಾರಿಸಿದವು. ಮನುಷ್ಯಜಾತಿಯ ಅತಿ ಪ್ರಾಚೀನ ಉಪದ್ರವಗಳಲ್ಲಿ ಕೆಲವು ರೋಗಗಳಾದ ಸಿಫಿಲಿಸ್, ಗ್ಯಾಂಗ್ರೀನ್ (ಅಂಗಕ್ಷಯ), ಟ್ಯೂಬರ್ಕ್ಯುಲೋಸಿಸ್ (ಕ್ಷಯರೋಗ) ವನ್ನು ನಿಗ್ರಹಿಸಲು ನೆರವಾಯಿತು."[3]
ಅಲೆಕ್ಸಾಂಡರ್ ಫ್ಲೆಮಿಂಗ್ | |
---|---|
ಜನನ | (೧೮೮೧-೦೮-೦೬)೬ ಆಗಸ್ಟ್ ೧೮೮೧ ಲಾಕ್ಫೀಲ್ಡ್, ಸ್ಕಾಟ್ಲಾಂಡ್ |
ಮರಣ | 11 March 1955(1955-03-11) (aged 73) ಲಂಡನ್, ಇಂಗ್ಲೆಂಡ್ |
ಪೌರತ್ವ | ಯುನೈಟೆಡ್ ಕಿಂಗ್ಡಂ |
ರಾಷ್ಟ್ರೀಯತೆ | ಸ್ಕಾಟಿಶ್ |
ಕಾರ್ಯಕ್ಷೇತ್ರ | ಬ್ಯಾಕ್ಟೀರಿಯಾಲಜಿ, ರೋಗನಿರೋಧ ಶಾಸ್ತ್ರ |
ಅಭ್ಯಸಿಸಿದ ವಿದ್ಯಾಪೀಠ | ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾನಿಲಯ; ಸೈಂಟ್ ಮೇರೀಸ್ ಆಸ್ಪತ್ರೆ, ಲಂಡನ್ |
ಪ್ರಸಿದ್ಧಿಗೆ ಕಾರಣ | ಪೆನ್ಸಿಲಿನ್ ಸಂಶೋಧನೆ |
ಗಮನಾರ್ಹ ಪ್ರಶಸ್ತಿಗಳು | ಶರೀರಶಾಸ್ತ್ರ ವಿಭಾಗದ ನೋಬೆಲ್ ಪುರಸ್ಕಾರ (೧೯೪೫) |