ಅಬೂ ಬಕರ್
ಮುಹಮ್ಮದ್ ಪೈಗಂಬರರ ಆಪ್ತ ಸಂಗಡಿಗ / From Wikipedia, the free encyclopedia
ಅಬೂ ಬಕರ್ ಅಬ್ದುಲ್ಲಾ ಬಿನ್ ಅಬೂ ಕುಹಾಫ (ಅರಬ್ಬಿ: أبو بكر عبد الله بن أبي قحافة (27 ಅಕ್ಟೋಬರ್ 573 – 23 ಆಗಸ್ಟ್ 634)) — ಮುಹಮ್ಮದ್ರ ಆಪ್ತಮಿತ್ರ ಮತ್ತು ಪ್ರಮುಖ ಅನುಯಾಯಿಗಳಲ್ಲೊಬ್ಬರು. ಇಸ್ಲಾಮೀ ಸಾಮ್ರಾಜ್ಯದ ಪ್ರಥಮ ಖಲೀಫ. ಮುಸಲ್ಮಾನರ ನಂಬಿಕೆ ಪ್ರಕಾರ ಬದುಕಿರುವಾಗಲೇ ಸ್ವರ್ಗದ ಸುವಾರ್ತೆ ಪಡೆದ ಹತ್ತು ಸಹಾಬಿಗಳಲ್ಲಿ ಒಬ್ಬರು. ಮುಹಮ್ಮದ್ರ ಪತ್ನಿ ಆಯಿಶರ ತಂದೆ.
ಅಬೂ ಬಕರ್ أبو بكر | |
---|---|
ಸಿದ್ದೀಕ್ (ಸತ್ಯವಂತ) | |
ಅರಬ್ಬೀ ಭಾಷೆಯಲ್ಲಿರುವ ಅಬೂ ಬಕರ್ರ ಹೆಸರು | |
ಪ್ರಥಮ ಖಲೀಫ | |
ಖಲೀಫಗಿರಿ | ಜೂನ್ 8, 632 ರಿಂದ ಆಗಸ್ಟ್ 23, 634 |
ಉತ್ತರಾಧಿಕಾರಿ | ಉಮರ್ ಬಿನ್ ಖತ್ತಾಬ್ |
ಪತ್ನಿಯರು |
|
ಗೋತ್ರ | ಬನೂ ತೈಮ್ |
ತಂದೆ | ಅಬೂ ಕುಹಾಫ ಉಸ್ಮಾನ್ ಬಿನ್ ಆಮಿರ್ |
ತಾಯಿ | ಉಮ್ಮುಲ್ ಖೈರ್ ಸಲ್ಮಾ ಬಿಂತ್ ಸಖ್ರ್ |
ಜನನ | (೫೭೩-೧೦-೨೭)೨೭ ಅಕ್ಟೋಬರ್ ೫೭೩ ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
ಮರಣ | 23 August 634(634-08-23) (aged 60) ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
Burial | ಮದೀನಾ, ಅರೇಬಿಯನ್ ಪರ್ಯಾಯ ದ್ವೀಪ ಈಗಿನ ಸೌದಿ ಅರೇಬಿಯಾ |
ಕೆಲಸ | ವ್ಯಾಪಾರಿ, ಆಡಳಿತಗಾರ |
ಧರ್ಮ | ಇಸ್ಲಾಂ ಧರ್ಮ |
ಅಬೂ ಬಕರ್ ಕ್ರಿ.ಶ. 573ರಲ್ಲಿ ಅಬೂ ಕುಹಾಫ ಉಸ್ಮಾನ್ ಬಿನ್ ಆಮಿರ್ ಮತ್ತು ಉಮ್ಮುಲ್ ಖೈರ್ ಸಲ್ಮಾ ಬಿಂತ್ ಸಖ್ರ್ ದಂಪತಿಯ ಮಗನಾಗಿ ಜನಿಸಿದರು. ಅವರು ಕುರೈಷ್ ಬುಡಕಟ್ಟಿನ ಬನೂ ತೈಮ್ ಗೋತ್ರಕ್ಕೆ ಸೇರಿದವರು. ಇಸ್ಲಾಮೀ ಪೂರ್ವ ಕಾಲದಲ್ಲೇ ಅವರು ಏಕದೇವತಾವಾದಿಯಾಗಿದ್ದರು ಮತ್ತು ಮುಹಮ್ಮದ್ರ ಆಪ್ತಮಿತ್ರನಾಗಿದ್ದರು. ಕ್ರಿ.ಶ. 610 ರಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಬಳಿಕ ಅವರು ಮುಹಮ್ಮದ್ರಿಗೆ ಇನ್ನಷ್ಟು ಆಪ್ತರಾಗಿ ಅವರ ಮರಣಾನಂತರ ಅವರ ಉತ್ತರಾಧಿಕಾರಿಯಾಗಿ ಇಸ್ಲಾಮೀ ಸಾಮ್ರಾಜ್ಯದ ಖಲೀಫ ಆದರು. ಮುಹಮ್ಮದ್ ಮತ್ತು ಇಸ್ಲಾಂ ಧರ್ಮದ ಮೇಲಿನ ನಿಷ್ಠೆಯಿಂದಾಗಿ ಅವರಿಗೆ ಸಿದ್ದೀಕ್ (ಸತ್ಯವಂತ) ಎಂಬ ಬಿರುದು ದೊರಕಿತ್ತು. ಮಕ್ಕಾದ ಶ್ರೀಮಂತರಲ್ಲಿ ಒಬ್ಬರಾಗಿದ್ದ ಅಬೂ ಬಕರ್ ತಮ್ಮ ಸಂಪತ್ತನ್ನು ಇಸ್ಲಾಂ ಧರ್ಮಕ್ಕಾಗಿ ವ್ಯಯಿಸಿದರು. ಮಕ್ಕಾದಲ್ಲೂ ಮದೀನಾದಲ್ಲೂ ಮುಹಮ್ಮದ್ರ ನೆರಳಾಗಿ ಬದುಕಿದರು.
ಕ್ರಿ.ಶ. 632 ರಲ್ಲಿ ಮುಹಮ್ಮದ್ ನಿಧನರಾದಾಗ, ಅಬೂ ಬಕರ್ ಇಸ್ಲಾಮೀ ಸಾಮ್ರಾಜ್ಯದ ಖಲೀಫ ಮತ್ತು ಮುಸ್ಲಿಮ್ ಸಮುದಾಯದ ಮುಖಂಡರಾಗಿ ಆಯ್ಕೆಯಾದರು. ಅವರ ಆಡಳಿತದಲ್ಲಿ ಇಸ್ಲಾಮೀ ಸಾಮ್ರಾಜ್ಯವು ಅರೇಬಿಯನ್ ಪರ್ಯಾಯ ದ್ವೀಪದಾದ್ಯಂತ ವಿಸ್ತರಿಸಿತು. ಅವರು ಬೈಝಾಂಟೈನ್ ಮತ್ತು ಸಾಸಾನಿ ಸಾಮ್ರಾಜ್ಯಗಳ ವಿರುದ್ಧ ಹೋರಾಡಿದರು.
ಕ್ರಿ.ಶ. 634 ರಲ್ಲಿ ಅಬೂ ಬಕರ್ ನಿಧನರಾದರು. ಅವರನ್ನು ಮದೀನದಲ್ಲಿ ಮುಹಮ್ಮದ್ರ ಸಮಾಧಿಯ ಸಮೀಪ ಸಮಾಧಿ ಮಾಡಲಾಯಿತು. ಅವರು ಎರಡು ವರ್ಷ ಎರಡು ತಿಂಗಳು ಆಡಳಿತ ನಡೆಸಿದ್ದರು. ಅವರ ನಂತರ ಉಮರ್ ಬಿನ್ ಖತ್ತಾಬ್ ಖಲೀಫರಾದರು.