ಅತಿಗೆಂಪು
From Wikipedia, the free encyclopedia
ಅತಿಗೆಂಪು ವಿಕಿರಣ ಅಥವಾ ಇನ್ಫ್ರಾರೆಡ್ ರೇಡಿಯೇಶನ್ (ಐಆರ್) ಎನ್ನುವುದು ೦.೭ ಮತ್ತು ೩೦೦ ಮೈಕ್ರೊಮೀಟರ್ ತರಂಗಾಂತರದಲ್ಲಿ ಇರುವ ವಿದ್ಯುತ್ಕಾಂತೀಯ ವಿಕಿರಣವಾಗಿದೆ. ಇದು ಅಂದಾಜು ೧ ಮತ್ತು ೪೩೦ THz ನಡುವಿನ ಆವರ್ತನ ಶ್ರೇಣಿಗೆ ಸಮನಾಗಿರುತ್ತದೆ.[1]
ಇದರ ತರಂಗಾಂತರವು ಗೋಚರ ಬೆಳಕಿನ ತರಂಗಾಂತರಕ್ಕಿಂತ ದೀರ್ಘವಾಗಿದೆ (ಮತ್ತು ಆವರ್ತನವು ಕಡಿಮೆ), ಆದರೆ ಟೆರಾ ಹರ್ಟ್ಜ್ ಸೂಕ್ಷ್ಮ ತರಂಗಗಳ ವಿಕಿರಣಕ್ಕಿಂತಲೂ ಕಡಿಮೆಯಾಗಿರುತ್ತದೆ (ಮತ್ತು ಆವರ್ತನವು ಹೆಚ್ಚು). ಸಮುದ್ರಮಟ್ಟದಲ್ಲಿ ಪ್ರಖರವಾದ ಸೂರ್ಯನ ಬೆಳಕು ಪ್ರತಿ ಒಂದು ಚದರ ಕಿಲೋಮಿಟರ್ ವ್ಯಾಪ್ತಿಯಲ್ಲಿ ೧ ಕಿಲೋ ವ್ಯಾಟ್ ಪೂರೈಸುತ್ತದೆ. ಇದರಲ್ಲಿ ೫೨೭ ವ್ಯಾಟ್ ಇನ್ಫ್ರಾರೆಡ್ ವಿಕಿರಣ ಆಗಿರುತ್ತದೆ, ೪೪೫ ವ್ಯಾಟ್ ಗೋಚರ ಬೆಳಕಾಗಿದ್ದು, ಮತ್ತು ೩೨ ವ್ಯಾಟ್ ಅತಿನೆರಳೆ ವಿಕಿರಣವಾಗಿರುತ್ತದೆ.[2]