ಅಣು ವೈದ್ಯಶಾಸ್ತ್ರ ವು ವೈದ್ಯಶಾಸ್ತ್ರದ ಮತ್ತು ವೈದ್ಯಕೀಯ ಚಿತ್ರಗ್ರಹಣದ ಒಂದು ವಿಶೇಷ ವಿಭಾಗವಾಗಿದ್ದು, ಈ ವಿಧಾನದ ವೈದ್ಯಕೀಯ ಚಿಕಿತ್ಸೆಯಲ್ಲಿ ವಿಕಿರಣಶೀಲ ನ್ಯೂಕ್ಲೈಡ್ಗಳನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಇದರ ಮೂಲಕ ರೋಗಿಯ ದೇಹ ಚಿತ್ರಣವನ್ನು ತೆಗೆದು ಅದರಲ್ಲಿರಬಹುದಾದ ವಿಕಿರಣಶೀಲ ಕ್ಷಯದ ಸಾಧ್ಯತೆಯನ್ನು ನಿರ್ಣಯಿಸಿ ಚಿಕಿತ್ಸೆ ನೀಡಲಾಗುತ್ತದೆ.
ಅಣು ವೈದ್ಯಶಾಸ್ತ್ರ ಕಾರ್ಯವಿಧಾನಗಳಲ್ಲಿ, ವಿಕಿರಣಶೀಲ ನ್ಯೂಕ್ಲೈಡ್ಗಳು ವಿಕಿರಣ ಔಷಧ ವಸ್ತುಗಳನ್ನು ಉತ್ಪಾದನೆ ಮಾಡುವ ಸಲುವಾಗಿ ಇತರ ರಾಸಾಯನಿಕ ಮಿಶ್ರಣಗಳ ಜೊತೆ ಅಥವಾ ಔಷಧ ವಸ್ತುಗಳ ಜೊತೆಗೆ ಸಂಯೋಜಿಸಲ್ಪಡುತ್ತವೆ. ಒಮ್ಮೆ ರೋಗಿಗೆ ಪ್ರಾಶನ ಮಾಡಿಸಲ್ಪಟ್ಟ ಈ ವಿಕಿರಣ ಔಷಧವಸ್ತುಗಳು ಕೆಲವು ನಿರ್ದಿಷ್ಟ ಅಂಗಗಳಿಗೆ ಅಥವಾ ಕೋಶೀಯ ಗ್ರಾಹಕಗಳಿಗೆ ಸ್ಥಾನಿಕವಾಗುತ್ತವೆ. ವಿಕಿರಣ ಔಷಧವಸ್ತುಗಳ ಈ ಗುಣಲಕ್ಷಣವು, ಅಂಗಾಂಶದ ಅಂಗರಚನಾಶಾಸ್ತ್ರದ ದೈಹಿಕ ಬದಲಾವಣೆಗಳ ಮೇಲೆ ಆಧಾರವಾಗಿರುವುದರ ಬದಲಾಗಿ, ಕೋಶೀಯ ಕಾರ್ಯ ಮತ್ತು ಶರೀರ ವಿಜ್ಞಾನದ ಮೇಲೆ ಅವಲಂಬಿತವಾಗಿ ಅಣು ವೈದ್ಯಶಾಸ್ತ್ರಕ್ಕೆ ದೇಹದಲ್ಲಿನ ಒಂದು ರೋಗದ-ಪ್ರಕ್ರಿಯೆಯ ವ್ಯಾಪ್ತಿಯನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಅನುಮತಿಸುತ್ತದೆ. ಕೆಲವು ರೋಗಗಳಲ್ಲಿ ಅಣು ವೈದ್ಯಶಾಸ್ತ್ರ ಅಧ್ಯಯನಗಳು ಪ್ರಾಥಮಿಕ ಹಂತಗಳಲ್ಲಿ ಇತರ ರೋಗನಿರ್ಣಯ ಪರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಗಳನ್ನು ಗುರುತಿಸುತ್ತವೆ.
ಚಯಾಪಚಯ ಅಥವಾ ಗ್ರಹಿಕೆ ಅಥವಾ ಸಂಕೀರ್ಣ ಲವಣವೊಂದರಲ್ಲಿ ಕೇಂದ್ರ ಪರಮಾಣುವಿಗೆ ಬಂಧಿಸಿಕೊಂಡಿರುವ ಪರಮಾಣುಗಳ ನಿರ್ಬಂಧಿಸುವಿಕೆಯ ಮೇಲೆ ಆಧಾರಿತವಾದ ರೋಗದ ಚಿಕಿತ್ಸೆಯೂ ಕೂಡ ಔಷಧ ಶಾಸ್ತ್ರದ (ಔಷಧ ವಿಜ್ಞಾನ) ಇತರ ವಿಭಾಗಗಳಂತೆ ಸಂಪೂರ್ಣಗೊಳ್ಳಲ್ಪಡುತ್ತದೆ. ಆದಾಗ್ಯೂ, ವಿಕಿರಣ ಔಷಧ ವಸ್ತುಗಳು ಸಣ್ಣ-ವ್ಯಾಪ್ತಿಯ ಅಯಾನೀಕರಣ ವಿಕಿರಣದ ಅಂಗಾಂಶ-ವಿನಾಶಕಾರಿ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ.