ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ
From Wikipedia, the free encyclopedia
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS )(ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್) ಎಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದ್ದು, ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಈ ನಿಲ್ದಾಣದ ನಿರ್ಮಾಣವನ್ನು 1998 ರಲ್ಲಿ ಪ್ರಾರಂಭಿಸಲಾಗಿದ್ದು, 2011 ರ ಉತ್ತರಾರ್ಧದಲ್ಲಿ ಪೂರ್ಣಗೊಳಿಸಬೇಕೆಂದು ನಿರ್ಧರಿಸಲಾಗಿದೆ. ನಿಲ್ದಾಣವು ಕೊನೆಯ ಪಕ್ಷ 2015 ರವರೆಗೆ ಮತ್ತು 2020 ರವರೆಗೆ ಕಾರ್ಯಾಚರಣೆಯಲ್ಲಿರಬೇಕೆಂದು ನಿರೀಕ್ಷಿಸಲಾಗಿದೆ.[6][7]
ಹಿಂದಿನ ಯಾವುದೇ ಬಾಹ್ಯಕಾಶ ನಿಲ್ದಾಣಕ್ಕಿಂತ ಅತ್ಯಂತ ದೊಡ್ಡ ಪಾರ್ಶ್ವಛೇದೀಯ ವ್ಯಾಪ್ತಿಯೊಂದಿಗೆ, ISS ಅನ್ನು ಭೂಮಿಯಿಂದ ಬರಿಕಣ್ಣಿನಲ್ಲಿ ನೋಡಬಹುದಾಗಿದೆ.[8] ಅಲ್ಲದೇ ಇದು ಹಿಂದೆಂದೂ ಭೂಮಿಯನ್ನು ಸುತ್ತಿರದ ಅತ್ಯಂತ ದೊಡ್ಡ, ಮಾನವ ನಿರ್ಮಿತ ಉಪಗ್ರಹವಾಗಿದೆ.[9] ಇದರಲ್ಲಿ ISS ಸೂಕ್ಷ್ಮಗುರುತ್ವ ಪರಿಸರವನ್ನು ಹೊಂದಿರುವ ಸಂಶೋಧನಾ ಪ್ರಯೋಗಾಲಯದಂತೆ ಸೇವೆಸಲ್ಲಿಸುತ್ತದೆ. ಈ ಪ್ರಯೋಗಾಲಯದಲ್ಲಿ ಸಿಬ್ಬಂದಿ ಜೀವವಿಜ್ಞಾನ, ರಾಸಾಯನಿಕ ಶಾಸ್ತ್ರ, ಔಷಧಿ, ಶರೀರವಿಜ್ಞಾನ ಮತ್ತು ಭೌತಶಾಸ್ತ್ರಮತ್ತು ಖಗೋಳವಿಜ್ಞಾನಕ್ಕೆ ಸಂಬಂಧಪಟ್ಟ ಮತ್ತು ಪವನಶಾಸ್ತ್ರಕ್ಕೆ ಸಂಬಂಧ ಪಟ್ಟ ವೀಕ್ಷಣೆಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಾರೆ.[10][11][12] ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳ ಪರೀಕ್ಷೆಗಾಗಿ ನಿಲ್ದಾಣವು ವಿಶಿಷ್ಟ ವಾತಾವರಣವನ್ನು ಒದಗಿಸುತ್ತದೆ. ಇಂತಹ ವ್ಯವಸ್ಥೆಗಳು ಚಂದ್ರ ಮತ್ತು ಮಂಗಳದ ಯಾತ್ರೆಗೆ ಅಗತ್ಯವಾಗಿವೆ.[13] ISS ಅನ್ನು ಆರು ಜನ ಗಗನಯಾತ್ರಿಗಳ ಮತ್ತು ಅಂತರಿಕ್ಷಯಾತ್ರಿಗಳ ಗಗನಯಾತ್ರೆಯ ಸಿಬ್ಬಂದಿ ನಿರ್ವಹಿಸುತ್ತದೆ. ಅಲ್ಲದೇ 2000 ಇಸವಿಯ ಅಕ್ಟೋಬರ್ 31 ರಂದು ಗಗನಯಾತ್ರೆ 1 ಅನ್ನು ಆರಂಭಿಸಿದಾಗಿನಿಂದ, ಒಟ್ಟು Error: Error: Second date should be year month day This is not a valid number. Please refer to the documentation at {{Number table sorting}}
for correct input. years and Error: Error: Need valid year month day This is not a valid number. Please refer to the documentation at {{Number table sorting}}
for correct input. days ಗಗನಯಾತ್ರೆಯ ವರೆಗೂ ಬಾಹ್ಯಾಕಾಶದಲ್ಲಿ ಮಾನವನ ಉಪಸ್ಥಿತಿಗೆ ಯಾವುದೇ ಅಡೆತಡೆ ಇರದಂತೆ ನಿಲ್ದಾಣದ ಕಾರ್ಯಯೋಜನೆಯನ್ನು ನಿರ್ವಹಿಸುತ್ತಾರೆ. ಹೀಗೆ ಈ ಕಾರ್ಯಯೋಜನೆಯು, ಯಾವುದೇ ಅಡೆತಡೆಯಿಲ್ಲದೇ ದೀರ್ಘಕಾಲದ ವರೆಗೆ ಬಾಹ್ಯಾಕಾಶದಲ್ಲಿದ್ದ ಮಾನವನ ಉಪಸ್ಥಿತಿಯ ಇತ್ತೀಚಿನ ದಾಖಲೆಯನ್ನು ಹೊಂದಿದೆ. ಮಿರ್ (ಬಾಹ್ಯಾಕಾಶ ನಿಲ್ದಾಣ)ನಲ್ಲಿ 3,644 ದಿನಗಳವರೆಗೆ ಇದ್ದ ಹಿಂದಿನ ದಾಖಲೆಯನ್ನು ಮೀರಿಸಿ ಗಗನಯಾತ್ರೆ 26 ರ ಸಿಬ್ಬಂದಿ ಬಾಹ್ಯಾಕಾಶದಲ್ಲಿದ್ದರು.[14] As of 25 ನವೆಂಬರ್ 2010[update][15]
ISS ಎಂಬುದು ಅಮೇರಿಕಾದ ಫ್ರೀಡಮ್ , ಸೋವಿಯತ್ ರಷ್ಯಾ /ರಷ್ಯಾದ ಮಿರ್ -2, ಯುರೋಪಿನ ಕೊಲಂಬಸ್ ಮತ್ತು ಜಪಾನೀಯರಕಿಬೋ ವನ್ನು ಒಳಗೊಂಡ ಅನೇಕ ಬಾಹ್ಯಾಕಾಶ ನಿಲ್ದಾಣ ಯೋಜನೆಗಳ ಸಮನ್ವಯವಾಗಿದೆ.[16][17] ಬಜೆಟ್ ನ (ಆಯವ್ಯಯದಲ್ಲಿನ) ಕೊರತೆಯ ನಿರ್ಬಂಧದಿಂದಾಗಿ ಈ ಯೋಜನೆಗಳು, ಏಕೀಕೃತ ಅಂತರರಾಷ್ಟ್ರೀಯ ಯೋಜನೆಯಾಗಿ ವಿಲೀನಗೊಂಡವು.[16] ISS ಯೋಜನೆಯನ್ನು 1994 ರಲ್ಲಿ ಷಟಲ್(ಬಾನಗಾಡಿ)-ಮಿರ್ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಾಯಿತು.[18] ಅಲ್ಲದೇ ನಿಲ್ದಾಣದ ಪ್ರಥಮ ಘಟಕ(ಮಾಡ್ಯೂಲ್) ವಾದ ಜಾರ್ಯಾ ವನ್ನು, ರಷ್ಯಾ 1998 ರಲ್ಲಿ ಉಡಾವಣೆ ಮಾಡಿತು.[16] ಸಾಮಾನ್ಯ ವಾಯು ಒತ್ತಡವಿರುವಂತೆ ಏರ್ಪಡಿಸಲಾದ ಘಟಕಗಳು, ಬಾಹ್ಯ ಟ್ರಸ್ (ಕೆಳದಿಮ್ಮಿಕಟ್ಟು) ಗಳು, ಮತ್ತು ಇತರ ಘಟಕಗಳನ್ನು, ಅಮೇರಿಕದ ಬಾಹ್ಯಾಕಾಶ ಬಾನಗಾಡಿ(ಬಾಹ್ಯಾಕಾಶ ಸಾರಿಗೆ ವ್ಯವಸ್ಥೆ), ರಷ್ಯಾದ ಪ್ರೋಟಾನ್ ರಾಕೆಟ್ಸ್ ಮತ್ತು ರಷ್ಯಾದ ಸೊಯೊಸ್ ರಾಕೆಟ್ಸ್ ಗಳಿಂದ ಉಡಾವಣೆ ಮಾಡುವ ಮೂಲಕ ಜೋಡಣೆಯು ಮುಂದುವರೆದಿದೆ.[17] As of ಮೇ 2010[update], ನಿಲ್ದಾಣವು ಸಾಮಾನ್ಯ ವಾಯು ಒತ್ತಡವಿರುವಂತೆ ಏರ್ಪಡಿಸಲಾದ ಹದಿನಾಲ್ಕು ಘಟಕಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಅತ್ಯಂತ ವ್ಯಾಪಕವಾದ ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ (ITS) ಅನ್ನು ಕೂಡ ಒಳಗೊಂಡಿದೆ. ಅಲ್ಲದೇ ಇದಕ್ಕೆ ಹದಿನಾರು ಸೌರ ದ್ಯುತಿವಿದ್ಯುಜ್ಜನಕ ಸರಣಿಗಳ ಮೂಲಕ ವಿದ್ಯುತ್ ಅನ್ನು ಒದಗಿಸಲಾಗುತ್ತದೆ.(ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ವಿದ್ಯುತ್ ವ್ಯವಸ್ಥೆ). ಇದನ್ನು ರಷ್ಯಾದ ಘಟಕಗಳ ಮೇಲಿರುವ ನಾಲ್ಕು ಸಣ್ಣ ಸರಣಿಗಳ ಜೊತೆಯಲ್ಲಿ ಮೇಲ್ಮುಖವಾದ ಬಾಹ್ಯ ಆಸರೆ ಕಟ್ಟುಗಳ, ಟ್ರಸ್ ಗಳ ಮೇಲೆ ಜೋಡಿಸಲಾಗಿರುತ್ತದೆ.[19] ನಿಲ್ದಾಣವನ್ನು 278 km (173 mi) ರಿಂದ 460 km (286 mi) ರಷ್ಟು ಎತ್ತರದ ಕಕ್ಷೆಯೊಳಗೆ ಸುಸ್ಥಿತಿಯಲ್ಲಿಟ್ಟು ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಸರಿಸುಮಾರು 27,743.8 km/h (17,239.2 mph) ವೇಗದಲ್ಲಿ ಒಂದು ದಿನಕ್ಕೆ 15.7 ರಷ್ಟು ಕಕ್ಷೆಯನ್ನು ಕ್ರಮಿಸುವ ಮೂಲಕ ಪ್ರಯಾಣ ಮಾಡಲಾಗುತ್ತದೆ.[20]
ಇದನ್ನು ಐದು ಸಹಭಾಗಿತ್ವದ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಯೋಜನೆಯ ರೂಪದಲ್ಲಿ ನಿರ್ವಹಿಸಲಾಗುತ್ತದೆ. ನಿಲ್ದಾಣದ ವಿಭಾಗಗಳನ್ನು ಭೂಮಿ ಮೇಲಿನ ಗಗನಯಾತ್ರೆಯ (ವೈಜ್ಞಾನಿಕ ಕಾರ್ಯಾಚರಣೆಯ)ನಿಯಂತ್ರಣ ಕೇಂದ್ರಗಳು ನಿಯಂತ್ರಿಸುತ್ತವೆ. ಇವುಗಳನ್ನು ಅಮೇರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA)(ನಾಸಾ), ಯುರೋಪಿಯನ್ ಸ್ಪೇಸ್ ಏಜೆನ್ಸಿ(ESA)(ಯುರೋಪಿನ ಬಾಹ್ಯಾಕಾಶ ಸಂಸ್ಥೆ), ರಷ್ಯಾನ್ ಫೆಡರಲ್ ಸ್ಪೇಸ್ ಏಜೆನ್ಸಿ (RKA), ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ (JAXA) ಮತ್ತು ಕೆನಡಿಯನ್ ಸ್ಪೇಸ್ ಏಜೆನ್ಸಿ (CSA) ನೋಡಿಕೊಳ್ಳುತ್ತವೆ.[21][22] ನಿಲ್ದಾಣದ ಮಾಲಿಕತ್ವ ಮತ್ತು ಬಳಕೆಯನ್ನು ಅಂತರ ಸರ್ಕಾರೀ ಒಪ್ಪಂದಗಳು ಮತ್ತು ಕರಾರುಗಳಲ್ಲಿ ದೃಢಪಡಿಸಲಾಗಿದೆ,[23] ಇದು ರಷ್ಯನ್ ಫೆಡರೇಷನ್ ಗೆ, US ಆರ್ಬಿಟಲ್ ಸೆಗ್ಮೆಂಟ್ ನೊಂದಿಗೆ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ (ರಷ್ಯನ್ ಕಕ್ಷೆಯ ಭಾಗ)ನಲ್ಲಿರುವ ಅದರ ಘಟಕಗಳ ಮೇಲೆ ಸಂಪೂರ್ಣ ಹಕ್ಕನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ.[24] ನಿಲ್ದಾಣದ ಉಳಿದ ಹಕ್ಕನ್ನು ಇತರ ಅಂತರರಾಷ್ಟ್ರೀಯ ಸಹಯೋಗಿಗಳ ನಡುವೆ ಹಂಚಿಕೆ ಮಾಡಲಾಗಿದೆ.[23] ಈ ನಿಲ್ದಾಣ ನಿರ್ಮಿಸಲು 30 ವರ್ಷಗಳ ಅವಧಿಗೆ ತಗಲುವ ವೆಚ್ಚ €100 ಬಿಲಿಯನ್ ಎಂದು ESA ಅಂದಾಜು ಮಾಡಿದೆ,[25] ಅಲ್ಲದೇ 35 ರಿಂದ 160 ಬಿಲಿಯನ್ US ಡಾಲರ್ ಗಳಾಗಬಹುದೆಂದೂ ಕೂಡ ಅಂದಾಜುಮಾಡಲಾಗಿದೆ. ISS ಅನ್ನು ಹಿಂದೆಂದೂ ನಿರ್ಮಿಸದ ಅತ್ಯಂತ ದುಬಾರಿ ವೆಚ್ಚದ ಬಾಹ್ಯಾಕಾಶ ನಿಲ್ದಾಣವೆಂದು ನಂಬಲಾಗುತ್ತದೆ.[26] ISS ಅನ್ನು ನಿರ್ಮಿಸುವ ಯೋಜನೆಯಲ್ಲಿ ತಗಲುವ ಅಧಿಕ ವೆಚ್ಚದಿಂದಾಗಿ, ಈ ಯೋಜನೆಯ ಹಣಕಾಸು, ಸಂಶೋಧನಾ ಸಾಮರ್ಥ್ಯಗಳು ಮತ್ತು ಇದರ ತಾಂತ್ರಿಕ ವಿನ್ಯಾಸವನ್ನು ಟೀಕಿಸಲಾಗಿದೆ.[27][28] ಈ ನಿಲ್ದಾಣಕ್ಕೆ ಸೊಯುಜ್ ಬಾಹ್ಯಾಕಾಶನೌಕೆ , ಪ್ರೋಗ್ರೆಸ್ ಬಾಹ್ಯಾಕಾಶನೌಕೆ, ಬಾನಗಾಡಿಗಳು, ಅಟೊಮೇಟೆಡ್ ಟ್ರಾನ್ಸ್ಫರ್ ವೆಹಿಕಲ್ ಮತ್ತು H-II ಟ್ರಾನ್ಸ್ಫರ್ ವೆಹಿಕಲ್ ಗಳು ಸೇವೆಸಲ್ಲಿಸುತ್ತವೆ.[22] ಅಲ್ಲದೇ 15 ವಿವಿಧ ರಾಷ್ಟ್ರಗಳಿಂದ ಗಗನಯಾತ್ರಿಗಳು, ಅಂತರಿಕ್ಷಯಾತ್ರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.[9]
The International Space Station on 23 May 2010 as seen from the departing Space Shuttle Atlantis during STS-132. | ||
ಐಎಸ್ಎಸ್ ಇನ್ಸಿಗ್ನಿಯಾ | ||
Station statistics | ||
---|---|---|
COSPAR ID | 1998-067A | |
Call sign | ಅಪ್ಲ್ಹಾ | |
Crew | ೬ | |
Launch | ೧೯೯೮–೨೦೧೧ | |
Launch pad | KSC LC-39, Baikonur LC-1/5 & LC-81/23 | |
Mass | 369,914 kg (815,521 lb) | |
Length | 51 m (167.3 ft) from PMA-2 to Zvezda | |
Width | 109 m (357.5 ft) along truss, arrays extended | |
Height | c. 20 m (c. 66 ft) nadir–zenith, arrays forward–aft (27 November 2009)Expression error: Unexpected < operator. | |
Pressurised volume | 837 m3 (29,561 cu ft) | |
Atmospheric pressure | 101.3 kPa (29.91 inHg, 1 atm) | |
Perigee | 347 km (187 nmi) AMSL (18 June 2010) | |
Apogee | 360 km (194 nmi) AMSL (18 June 2010) | |
Orbital inclination | 51.6 degrees | |
Average speed | 7,706.6 m/s (27,743.8 km/h, 17,239.2 mph) | |
Orbital period | 91 minutes | |
Days in orbit | 9274 (೧೧ ಏಪ್ರಿಲ್ ೨೦೨೪) | |
Days occupied | 8561 (೧೧ ಏಪ್ರಿಲ್ ೨೦೨೪) | |
Number of orbits | 145570 (೧೧ ಏಪ್ರಿಲ್ ೨೦೨೪) | |
Orbital decay | 2 km/month | |
Statistics as of 23 May 2010 (unless noted otherwise) | ||
References: [1][2][3][4][5] | ||
Configuration | ||
Station elements as of 18 ಮೇ 2010[update] (exploded view) |